Kannada NewsKarnataka News

ಬೆಳಗಾವಿ ಜಿಲ್ಲೆಯ ಪ್ರಮುಖ ಸುದ್ದಿಗಳು

 

ಜಲ ಶಕ್ತಿ ಅಭಿಯಾನ ಅನುಷ್ಠಾನ ಜಾತಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಲಸಂಪತ್ತನ್ನು ಉಳಿಸಲು ನಾನು ಶ್ರಮಿಸುತ್ತೇನೆ ಹಾಗೂ ಸಹಕರಿಸುತ್ತೇನೆ ಎಂಬ ಧ್ಯೇಯವಾಕ್ಯ ಸಾರುವ ಮೂಲಕ ಜಲಶಕ್ತಿ ಅಭಿಯಾನ ಜಾಥಾ ಗುರುವಾರದಂದು ನಗರದಲ್ಲಿ ಜರುಗಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಮಹಾನಗರದ ಪಾಲಿಕೆ ಮುಖ್ಯ ಕಚೇರಿವರೆಗೆ ಆಯೋಜಿಸಲಾಗಿದ ಜಲಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ.ಬೊಮ್ಮನಹಳ್ಳಿ ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಶಶಿಧರ ನಾಡಗೌರ ಉಪಸ್ಥಿತರಿದ್ದರು.
ಪಾಲಿಕೆ ಕಂದಾಯ ಇಲಾಖೆ ಉಪ ಆಯುಕ್ತ ಎಸ್.ಬಿ.ದೊಡಗೌಡರ, ಆಡಳಿತ ವಿಭಾಗದ ಉಪ ಆಯುಕ್ತ ಜಗದೀಶ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಎಂ.ಬಿ.ರಾಚನಾಯ್ಕರ ಸೇರಿದಂತೆ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು, ಪಾಲಿಕೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಭೂ ದಾಖಲೆಗಳ ಇಲಾಖಾ ನೌಕರರ ಸಹಕಾರಿ ಪತ್ತಿನ ಸಂಘದ ನೂತನ ಕಟ್ಟಡ ಉದ್ಘಾಟನೆ  

ಭೂ ದಾಖಲೆಗಳ ಇಲಾಖಾ ನೌಕರರ ಸಹಕಾರಿ ಪತ್ತಿನ ಸಂಘದ ನೂತನ ವಾಣಿಜ್ಯ ಕಟ್ಟಡದ ಉದ್ಘಾಟನಾ ಸಮಾರಂಭ ಸೆಪ್ಟಂಬರ್ ೮ ರಂದು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಸರ್ಕಾರಿ ನೌಕರರ ಭವನ, ಕೋರ್ಟ ಆವರಣದಲ್ಲಿ ಸೆಪ್ಟಂಬರ್ ೮ ಭಾನವಾರ ಬೆಳಿಗ್ಗೆ ೧೧.೩೦ ಕ್ಕೆ ಸಮಾರಂಭ ಜರುಗಲಿದ್ದು, ಭೂ ದಾಖಲೆಗಳ ಇಲಾಖಾ ನೌಕರರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಕೆ.ಜಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಬೆಳಗಾವಿ ಉತ್ತರ ವಲಯದ ನಗರ ಮಾಪನ  ಭೂ ದಾಖಲೆಗಳ ಜಂಟಿ ನಿರ್ದೇಶಕರಾದ ಜಗದೀಶ ಆರ್. ರೂಗಿ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಾದ ಜಿ.ಎಮ್ ಪಾಟೀಲ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರಾದ ಎಸ್.ನಿಸ್ಸಾರ ಅಹ್ಮದ, ಸಹಾಕರ ಸಂಘಗಳ ಉಪ ನಿಂಬಂಧಕರಾದ ಕೆ.ಎಲ್. ಶ್ರೀನಿವಾಸ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಮೋಹನ ಶಿವಣ್ಣನವರ, ಸಹಕಾರ ಸಂಘಗಳ ಸಹಾಯಕ ನಿಂಬಂಧಕರಾದ ಬಿ.ಎಸ್ ಮಂಟೂರ,  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸನ್ಮಾನ ಕಾರ್ಯಕ್ರಮ:
ಸಮಾರಂಭವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ವಿ.ವಿ ಶಿವರುದ್ರಯ್ಯ, ಕರ್ನಾಟಕ ರಾಜ್ಯ  ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ.ಗೌ.ಪಾಟೀಲ, ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಸ್.ಎಫ್ ಶಿದ್ಧನಗೌಡರ ಸನ್ಮಾನ ನೇರವೆರಿಸಲಾಗುತ್ತಿದೆ.

ನಗರದ ಎಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರು ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಮತ್ತು ತಾಲೂಕಾ ಸಂಘಗಳ ಚುನಾಯಿತ ಪದಾಧಿಕಾರಿಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೇಂದು ಪ್ರಕಟಣೆಯಲ್ಲಿ ಕೊರಲಾಗಿದೆ.

ಗಣೇಶ ಮೂರ್ತಿಗಳನ್ನು ನಿಗದಿತ ಸಮಯದಲ್ಲಿ ವಿಸರ್ಜಿಸಲು ಮನವಿ

ರಾಜ್ಯಾದ್ಯಂತ ಪ್ರತಿವರ್ಷವು ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹಬ್ಬದ ಬಳಿಕ ಗಣೇಶನ ಮೂರ್ತಿಗಳನ್ನು ಹತ್ತಿರದ ಕೆರೆ, ಬಾವಿ ಮತ್ತು ನದಿಗಳಲ್ಲಿ ವಿಸರ್ಜಿಸುವುದು ವಾಡಿಕೆಯಾಗಿರುತ್ತದೆ. ಅದರಿಂದ ಜಲಮಾಲಿನ್ಯ ಉಂಟಾಗುತ್ತಿದ್ದು ಆ ಮಾಲಿನ್ಯವನ್ನು ತಡೆಯುವ ಸಲುವಾಗಿ ಸೆಪ್ಟಂಬರ್ ೬ ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳಗಾವಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾದಿಕಾರ, ಕರ್ನಾಟಕ ಗೃಹ ಮಂಡಳಿ ಹಾಗೂ ದಂಡು ಪ್ರದೇಶ ವತಿಯಿಂದ ಜಲಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಸಂಚಾರಿ ವಿಸರ್ಜನಾ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಗಣೇಶನ ಮೂರ್ತಿಗಳನ್ನು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ಸಾಯಂಕಾಲ ೫ ರಿಂದ ರಾತ್ರಿ ೯ ಗಂಟೆವರೆಗೆ ವಿಸರ್ಜಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿದೆ.

ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ವ್ಯಾಪ್ತಿಯ ಒಟ್ಟು  ೨೧ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯಾ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿರಂತರ ಗೈರು ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವ್ಹಿ.ಆರ್.ಡಬ್ಲ್ಯೂ.) ಹುದ್ದೆಗಳನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗ್ರಾಮೀಣ ಪುನರ್ವಸತಿ  ಯೋಜನೆಯಡಿ ಮಾಸಿಕ  ರೂ.೩೦೦೦ ಗಳ ಗೌರವ ಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು

ಅರ್ಜಿದಾರರು  ವಿಕಲಚೇತನರಿದ್ದು, ಕನಿಷ್ಟ  ೪೦% ರಷ್ಟು  ವಿಕಲತೆ ಪ್ರಮಾಣ ಹೊಂದಿರತಕ್ಕದ್ದು, ಅರ್ಜಿದಾರರು  ಆಯಾ ಗ್ರಾಮ ಪಂಚಾಯತಿಗಳ  ವ್ಯಾಪ್ತಿಗೊಳಪಟ್ಟಿರಬೇಕು, ಅರ್ಜಿದಾರರು ಕನಿಷ್ಠ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕು ಮತ್ತು ಕಂಪ್ಯೂಟರ ಜ್ಞಾನ ಹೊಂದಿರತಕ್ಕದ್ದು, ಅರ್ಜಿದಾರರು ಅರ್ಜಿ ಸಲ್ಲಿಸಲು ಅಕ್ಟೋಬರ್ ೫ ಕೊನೆಯ ದಿನವಾಗಿದೆ.
ಅರ್ಹ ಅಭ್ಯರ್ಥಿಗಳು ಕನಿಷ್ಠ ೧೮ ವರ್ಷ ಹಾಗೂ ಗರಿಷ್ಠ ೪೫ ವರ್ಷ ವಯೋಮಿತಿಯಲ್ಲಿರಬೇಕು, ವಿಕಲಚೇತನ ಮಹಿಳಾ, ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅಕ್ಟೋಬರ ೫ ರಂದು  ಸಂಜೆ ೫ ಗಂಟೆಯೊಳಗಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ, ಚಿಕ್ಕೋಡಿ ಇವರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು, ಗ್ರಾಮ ಪಂಚಾಯತಿಯ ಅಧಿಕಾರಿಗಳನ್ನು ಅಥವಾ ಎಂ.ಆರ್.ಡಬ್ಲ್ಯೂ ಅವರನ್ನು ಸಂಪರ್ಕಿಸಬೇಕು ಎಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಲಹೊಂಗಲ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ

೨೦೧೯-೨೦ನೇ ಸಾಲಿನ ಬೈಲಹೊಂಗಲ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಸೆಪ್ಟೆಂಬರ ೯ ಮತ್ತು ೧೦ ರಂದು ತಾಲ್ಲೂಕು ಕ್ರೀಡಾಂಗಣ, ಬೈಲಹೊಂಗಲದಲ್ಲಿ ಆಯೋಜಿಸಲಾಗಿದೆ.
ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆಪ್ಟೆಂಬರ ೯ ರಂದು ಬೆಳಿಗ್ಗೆ ೯ ಗಂಟೆಗೆ ಹಾಜರಿದ್ದು ಸಂಘಟಕರಿಗೆ ತಮ್ಮ ಪ್ರವೇಶ ಪತ್ರದೊಂದಿಗೆ ವರದಿ ಮಾಡಿಕೊಳ್ಳಲು ಕೋರಲಾಗಿದೆ.

ಸ್ಪರ್ಧೆಗಳ ವಿವರ:
ಅಥ್ಲೆಟಿಕ್ಸ್ (ಪುರುಷರಿಗೆ) : ೧೦೦, ೨೦೦, ೪೦೦, ೮೦೦ ಹಾಗೂ ೧೫೦೦ ಮೀ ಓಟ, ೫೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ೧೧೦ ಮೀ ಹರ್ಡಲ್ಸ್, ೪x೧೦೦ ಹಾಗೂ ೪x೪೦೦ ಮೀ ರಿಲೇ,

ಅಥ್ಲೆಟಿಕ್ಸ್ (ಮಹಿಳೆಯರಿಗೆ) : ೧೦೦, ೨೦೦, ೪೦೦, ೮೦೦ ಹಾಗೂ ೧೫೦೦ ಮೀ ಓಟ, ೩೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ೧೦೦ ಮೀ ಹರ್ಡಲ್ಸ್, ೪ x ೧೦೦ ಹಾಗೂ ೪x೪೦೦ ಮೀ ರಿಲೇ,
ಗುಂಪು ಸ್ಪರ್ಧೆಗಳು (ಪುರುಷ ಮತ್ತು ಮಹಿಳೆಯರಿಗಾಗಿ) : ೧) ಕಬಡ್ಡಿ,  ೨) ವಾಲಿಬಾಲ್,  ೩) ಖೋಖೋ, ೪) ಫುಟ್ಬಾಲ್ (ಪುರುಷರಿಗೆ ಮಾತ್ರ)
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಬೈಲಹೊಂಗಲ ತಾಲೂಕಿನ ರಹವಾಸಿಯಾಗಿರಬೇಕು. ಕ್ರೀಡಾಪಟುಗಳು ದಿನಾಂಕ ೦೯/೦೯/೨೦೧೯ ರಂದು ಬೆಳಿಗ್ಗೆ ೯.೦೦ ಗಂಟೆಗೆ ಆಟದ ಮೈದಾನದಲ್ಲಿ ಹಾಜರಿದ್ದು ಸಂಘಟಕರಿಗೆ ವರದಿ ಮಾಡಿಕೊಳ್ಳುವುದು.
ಕ್ರೀಡಾಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಾಗಿರುವುದಿಲ್ಲ. ಈ ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು, ಯುವಕ/ತಿ ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು.
ಶಾಲಾ ಕಾಲೇಜುಗಳ ವತಿಯಿಂದ ಭಾಗವಹಿಸುವ ಕ್ರೀಡಾಪಟುಗಳು ಶಾಲಾ ಮುಖ್ಯಸ್ಥರ ಮುಖಾಂತರ ಪ್ರವೇಶ ಪತ್ರಗಳನ್ನು ಹಾಜರಪಡಿಸುವುದು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತೊಂದು ತಾಲೂಕಿನಲ್ಲಿ ಭಾಗವಹಿಸತಕ್ಕದ್ದಲ್ಲ.
ನಿರ್ಣಾಯಕರ ನಿರ್ಣಯವೇ ಅಂತಿಮವಾಗಿದ್ದು ಕ್ರೀಡಾಕೂಟದಲ್ಲಿ ಅಸಭ್ಯವಾಗಿ ವರ್ತಿಸಿದ ಕ್ರೀಡಾಪಟು ಅಥವಾ ತಂಡಗಳನ್ನು ಅನರ್ಹಗೊಳಿಸಲಾಗುವುದು.
ಭಾಗವಹಿಸುವ ಕ್ರೀಡಾಪಟುಗಳು ಆಯಾ ಗ್ರಾಮ ಪಂಚಾಯತ ಶೇ ೨% ಅನುದಾನದಲ್ಲಿ ಪ್ರವಾಸ ಭತ್ಯೆ, ದಿನಭತ್ಯೆಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೯೬೪೩೪೩೭೮೭, ೯೬೮೬೩೮೩೯೦೯, ೮೬೧೮೪೯೭೫೩೩ನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುನವಳ್ಳಿ ಪುರಸಭೆ: ಆಕ್ಷೇಪಣೆಗೆ ಸೆ. ೨೦ ಕೊನೆಯ ದಿನ

ಮುನವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ-ಬದಿ ವ್ಯಾಪಾರಸ್ಥರಿಗೆ ತಿಳಿಯಪಡಿಸುವುದೆನೆಂದರೆ, ಕರ್ನಾಟಕ ಬೀದಿ-ಬದಿ ವ್ಯಾಪಾರಿಗಳ ದೀನದಯಾಳ್ ಅಂತ್ಯೋದ ಯೋಜನೆ-ರಾಷ್ಟೀಯ ನಗರ ಜೀನವನೋಪಾಯ ಅಭಿಯಾನ ಯೋಜನೆಯ ಉಪಘಟಕವಾದ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ-ಬದಿ ವ್ಯಾಪಾರಿದ ನಿಯಂತ್ರಣ) ನಿಯಮಗಳು-೨೦೧೯ ಅನುಷ್ಟಾನಗೊಳಿಸುವ ಸಂಬಂಧ ಬೀದಿ-ಬದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರರ ಪಟ್ಟಿ ಈ ಕಾರ್ಯಾಲಯದ ಸೂಚನಾ ಫಲಕಕ್ಕೆ ಪ್ರಚೂರಪಡಿಸಲಾಗಿದೆ.
ಈ ಯಾದಿಯಲ್ಲಿ ಏನಾದರೂ ಆಕ್ಷೇಪಣೆ ಇದ್ದಲ್ಲಿ ಸಪ್ಟೆಂಬರ್ ೨೦ರ ಸಾಯಂಕಾಲ ೫ ಗಂಟೆಯೊಳಗಾಗಿ ತಮ್ಮಲ್ಲಿರು ದಾಖಲೆಗಳೊಂದಿಗೆ ಲಿಖಿತ ಮೂಲಕ ಆಕ್ಷೇಪಣೆಗಳನ್ನು ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ ತಡವಾಗಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮುನವಳ್ಳಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ಥಿಕವಾಗಿ ಸಬಲರು ಪಡೆದಿರುವ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಸೂಚನೆ
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಬಿ.ಪಿ.ಎಲ್ ಪಡಿತರವನ್ನು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ಸುಳ್ಳು  ಮಾಹಿತಿ ನೀಡಿ ಬಿ.ಪಿ.ಎಲ್ ಕಾರ್ಡ್‌ಗಳನ್ನು  ಪಡೆದುಕೊಂಡಿರುವುದು ಬೆಳಕಿಗೆ ಬಂದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಸುಳ್ಳು  ಮಾಹಿತಿ ನೀಡಿ ಬಿ.ಪಿ.ಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿರುವವರು ಹಿಂದಿರುಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಹೇಳಿದ್ದಾರೆ.

ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವ ಅನರ್ಹರು

ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ೧೦೦೦ ಚದರ ಅಡಿಗಿಂತ ದೊಡ್ಡದಾದ ಮನೆ ಹೊಂದಿರುವವರು, ಸರ್ಕಾರಿ ನೌಕರರು, ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ  ಸಂಸ್ಥೆ, ಮಂಡಳಗಳ ನೌಕರರು, ಬ್ಯಾಂಕ್ ನೌಕರರು, ಆಸ್ಪತ್ರೆ ನೌಕರರು, ವಕೀಲರು, ಆಡಿಟರ‍್ಸ್‌ಗಳು, ದೊಡ್ಡ ಅಂಗಡಿ ಮತ್ತು ಹೋಟೆಲ್ ವರ್ತಕರು, ಸ್ವಂತ ಕಾರು, ಜೆಸಿಬಿ, ಲಾರಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ, ಕಾಲೇಜು ನೌಕರರು, ಗುತ್ತಿಗೆದಾರರು ಕಮೀಷನ್ ಏಜಂಟ್‌ಗಳು, ಮನೆ, ಕಟ್ಟಡಗಳನ್ನು ಬಾಡಿಗೆ ನೀಡಿರುವವರು, ಬಹು ರಾಷ್ಟ್ರೀಯ ಕಂಪನಿ ಉದ್ಯಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವವರು ಹಾಗೂ ವಾರ್ಷಿಕ ರೂ.೧,೨೦,೦೦೦ ಕ್ಕಿಂತ ಹೆಚ್ಚಿನ ಆದಯ ಹೊಂದಿರುವ ಕುಟುಂಬಗಳು ಬಿ.ಪಿ.ಎಲ್ ಕಾರ್ಡ್‌ಗಳನ್ನು  ಪಡೆಯುವದು ಶಿಕ್ಷಾರ್ಹವಾಗಿದೆ.
ಒಂದು ಕೆ.ಜಿ ಅಕ್ಕಿಗೆ ರೂ.೩೫ ರಂತೆ ಸರ್ಕಾರ ಪಾವತಿಸಿ ದುರ್ಬಲ ಕುಟುಂಬಗಳಿಗೆ ನೀಡುತ್ತಿರುವ ಯೋಜನೆಯ ಲಾಭವನ್ನು ಕೆಲವು ಸದೃಢವಾಗಿರುವ ಕುಟುಂಬಗಳು ಸುಳ್ಳು  ಮಾಹಿತಿ ನೀಡಿ ಪಡೆದಿರುವುದು ವಿಷಾದನೀಯ ಈ ರೀತಿಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ. ಸುಳ್ಳು  ಮಾಹಿತಿ ನೀಡಿ ಬಿ.ಪಿ.ಎಲ್ ಕಾರ್ಡ್‌ಗಳನ್ನು  ಪಡೆದುಕೊಂಡಿರುವವರು ಸೆಪ್ಟಂಬರ್ ೩೦ ರೊಳಗಾಗಿ ಕೂಡಲೆ ಕಛೇರಿಗೆ ಹಿಂದಿರುಗಿಸಿ, ಇಲ್ಲವಾದರೆ ಅಂತಹ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿ ಯಾವಾಗಿನಿಂದ ಎಷ್ಟು ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕಾ ಹಾಕಿ, ಪ್ರಸಕ್ತ ಮಾರುಕಟ್ಟೆಯ ದರದಂತೆ ದಂಡ ವಿದಿಸಲಾಗುವುದು ಹಾಗೂ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button