Karnataka NewsLatest

ಭಾರತದಿಂದ ಪಡೆದ ಚಿನ್ನ ಮಾರಿದ ಇಮ್ರಾನ್ ಖಾನ್

ಪ್ರಗತಿವಾಹಿನಿ ಸುದ್ದಿ, ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಾವು ಕ್ರಿಕೆಟ್  ಆಟಗಾರಾಗಿದ್ದ ದಿನಗಳಲ್ಲಿ ಭಾರತದಿಂದ ಪಡೆದ ಚಿನ್ನದ ಪದಕಗಳನ್ನು ಮಾರಾಟ ಮಾಡಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

ಸಾಮಾನ್ಯವಾಗಿ, ಅಂತಹ ಉಡುಗೊರೆಗಳನ್ನು ತೋಷಖಾನಾದಲ್ಲಿ ಶಾಶ್ವತವಾಗಿ ಠೇವಣಿ ಮಾಡಲಾಗುತ್ತದೆ, ಅಥವಾ ಅದನ್ನು ಪಡೆದ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಖರೀದಿಸಬಹುದು.

ಆದರೆ ವರದಿಯ ಪ್ರಕಾರ, ಖಾನ್ ಇಂತಹ ಕನಿಷ್ಠ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆನ್ನಲಾಗಿದೆ. ಆದರೆ ಖಾನ್ ಮಾರಾಟ ಮಾಡಿದ ಚಿನ್ನದ ಪದಕಗಳ ಕುರಿತು ಆಸಿಫ್ ಯಾವುದೇ ವಿವರಗಳನ್ನು ನೀಡಿಲ್ಲ.

ಖಾನ್ ಅವರ ಕ್ರಮಗಳು ಕಾನೂನುಬಾಹಿರವಲ್ಲ, ಆದರೆ ಅವರು ಯಾವಾಗಲೂ ಮಾತನಾಡುತ್ತಿದ್ದ ಉನ್ನತ ನೈತಿಕ ಮಾನದಂಡಗಳಿಗೆ ಇದು ವಿರುದ್ಧವಾಗಿವೆ ಎಂಬುದನ್ನು ಅಸೀಫ್ ಬಿಂಬಿಸಿದ್ದಾರೆ.

ಭಯೋತ್ಪಾದನೆ ಕಾಂಗ್ರೆಸ್ ನ ಪಾಪದ ಕೂಸು: ಪಿ. ರಾಜೀವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button