ರೋಚಕ ಫೈನಲ್ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಇಂಡಿಯನ್ ನೇವಿ: ಮಹಿಳಾ ವಿಭಾಗದಲ್ಲಿ ಸೌತ್ ಸೆಂಟ್ರಲ್ ರೇಲ್ವೆ ಹೈದರಾಬಾದ್ ಚಾಂಪಿಯನ್
ಜೊಲ್ಲೆ ಗ್ರೂಪ್ ವತಿಯಿಂದ ನಡೆದ ಆಲ್ ಇಂಡಿಯಾ ಎ ಗ್ರೇಡ್ ಕಬಡ್ಡಿ ಪಂದ್ಯಗಳು
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ನಿಪ್ಪಾಣಿ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಜೊಲ್ಲೆ ಗ್ರುಪ್ ಸಂಸ್ಥಾಪಕರು ಹಾಗೂ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹಸಂಸ್ಥಾಪಕರ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ಆಯೋಜಿಸಿದ ನಾಲ್ಕು ದಿನಗಳ ಕಾಲ ನಡೆದ ಪುಮಹಿಳೆಯರ ಆಲ್ ಇಂಡಿಯಾ ಎ ಗ್ರೇಡ್ ಕಬಡ್ಡಿ ಪಂದ್ಯಾವಳಿಯ ಪೈನಲ್ ಪಂದ್ಯಗಳು ತೀವ್ರ ರೋಚಕವಾಗಿ ನಡೆದವು.
ಪೈನಲ್ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಇಂಡಿಯನ್ ನೇವಿ ಮತ್ತು ಮಹಿಳಾ ವಿಭಾಗದಲ್ಲಿ ಸೌತ ಸೆಂಟ್ರಲ ರೇಲ್ವೆ ಹೈದರಾಬಾದ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದವು.
ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಇಂಡಿಯನ್ ನೇವಿ 44 ಅಂಕ ಮತ್ತು ರೇಡ ಆರ್ಮಿ 39ಅಂಕ ಪಡೆದು ಇಂಡಿಯನ ನೇವಿ 5 ಅಂಕಗಳಿಂದ ರೇಡ್ ಆರ್ಮಿ ತಂಡದ ವಿರುದ್ಧ ಜಯಗಳಿಸಿತು.
ಮಹಿಳಾ ವಿಭಾಗದಲ್ಲಿ ಸೌತ್ ಸೆಂಟ್ರಲ್ ರೇಲ್ವೆ 37 ಅಂಕ ಮತ್ತು ವೆಸ್ಟರ್ನ ರೇಲ್ವೆ 34 ಅಂಕ ಪಡೆದು ಸೌತ್ ಸೆಂಟ್ರಲ್ ರೇಲ್ವೆ 3 ಅಂಕಗಳಿಂದ ವೆಸ್ಟರ್ನ ರೇಲ್ವೆ ತಂಡದ ವಿರುದ್ಧ ಜಯಗಳಿಸಿತು. ಮಹಿಳೆಯರ ಕಬಡ್ಡಿಯ ಪೈನಲ್ ಪಂದ್ಯ ತೀವ್ರ ರೋಚಕ ಪಡೆಯಿತು. ಎರಡು ತಂಡಗಳು ಬಲಿಷ್ಠವಾಗಿದ್ದರಿಂದ ಪಂದ್ಯ ಮುಕ್ತಾಯದವರೆಗೆ ತಲಾ 31 ಅಂಕ ಪಡೆದು ಪಂದ್ಯ ಟೈ ಆಯಿತು. ನಂತರ ಎರಡು ತಂಡಕ್ಕೆ ಐದು ರೈಡರ್ ಮಾಡಿದಾಗ ಹೈದರಾಬಾದ ತಂಡ ಮುಂಬೈ ವಿರುದ್ಧ ಗೆಲುವು ಪಡೆಯಿತು.
ಜಯಗಳಿಸಿದ ಪುರುಷರ ತಂಡಗಳು:
ಮೋದಲನೆ ಸ್ಥಾನ ಪಡೆದ ಇಂಡಿಯನ ನೇವಿ ತಂಡಕ್ಕೆ 3 ಲಕ್ಷ ನಗದು ಬಹುಮಾನ ಮತ್ತು ಟ್ರೋಪಿ. ದ್ವಿತೀಯ ಸ್ಥಾನ ರೇಡ ಆರ್ಮಿಗೆ 2 ಲಕ್ಷ ನಗದು ಬಹುಮಾನ ಮತ್ತು ಟ್ರೋಪಿ. ತೃತೀಯ ಸ್ಥಾನ ಗ್ರೀನ ಆರ್ಮಿಗೆ 1 ಲಕ್ಷ ನಗದು ಬಹುಮಾನ ಟ್ರೋಪಿ ಮತ್ತುಎಮ.ಡಿ.ಯು.ರೋತಕ ತಂಡವು 1ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತ್ತು.
ಬೇಸ್ಟ ರೈಡರ – ಪವನ (ಎಂಡಿಯು ರೋತಕ ಹರಿಯಾಣ)ತಂಡದ ಆಟಗಾರನಿಗೆ 32 ಇಂಚ್ ಎಲ್. ಇ. ಡಿ.ಟಿವಿ. ಬೇಸ್ಟ ಕ್ಯಾಚರ – ಲಕಿ ಶರ್ಮಾ (ರೇಡ ಆರ್ಮಿ ತಂಡದ ಆಟಗಾರನಿಗೆ) 32 ಇಂಚ್ ಎಲ್. ಇ. ಡಿ.ಟಿವಿ. ಬೇಸ್ಟ ಆಲ್ ರೌಂಡರ – ಭರತ (ಇಂಡಿಯನ ನೇವಿ) 32 ಇಂಚ್ ಎಲ್. ಇ. ಡಿ.ಟಿವಿ.
ಮಹಿಳೆಯರ ವಿಭಾಗದಲ್ಲಿ:
ಮೋದಲನೆ ಸ್ಥಾನ ಸೌತ್ ಸೆಂಟ್ರಲ್ ರೇಲ್ವೆ 2 ಲಕ್ಷ ನಗದು ಬಹುಮಾನ ಮತ್ತು ಟ್ರೋಪಿ. ದ್ವಿತೀಯ ಸ್ಥಾನ ವೇಸ್ಟರ್ನ ರೇಲ್ವೆ ಮುಂಬೈ 1 ಲಕ್ಷ ನಗದು ಬಹುಮಾನ ಮತ್ತು ಟ್ರೋಪಿ. ತೃತೀಯ ಸ್ಥಾನ ಪಾಲಮ ದೆಹಲಿ ಮತ್ತು ಸೆಂಟ್ರಲ ರೇಲ್ವೆ ತಲಾ 50 ಸಾವಿರ ನಗದು ಬಹುಮಾನ ಮತ್ತು ಟ್ರೋಪಿ ತನ್ನದಾಗಿಸಿಕೊಂಡಿತ್ತು.
ಬೇಸ್ಟ ರೈಡರ – ಸೋನಾಲಿ ಶಿಂಧೆ (ವೆಸ್ಟರ್ನ ರೇಲ್ವೆ) 32 ಇಂಚ್ ಎಲ್. ಇ. ಡಿ.ಟಿವಿ. ಬೇಸ್ಟ ಕ್ಯಾಚರ – ರಿತು (ಪಾಲಮ ದೆಹಲಿ) 32 ಇಂಚ್ ಎಲ್. ಇ. ಡಿ.ಟಿವಿ. ಬೇಸ್ಟ ಆಲ್ ರೌಂಡರ – ಪೂಜಾ (ಸೌತ ಸೆಂಟ್ರಲ್ ರೇಲ್ವೆ) 32 ಇಂಚ್ ಎಲ್. ಇ. ಡಿ.ಟಿವಿ ನೀಡಿ ಗೌರವಿಸಿದರು.
ಇದಕ್ಕು ಮೋದಲು ಕೊನೆಯ ದಿನದ ಸೇಮಿ ಫೈನಲ್ ಪಂದ್ಯದಲ್ಲಿ ಪುರುಷ ವಿಭಾಗದಲ್ಲಿ ರೇಡ್ ಆರ್ಮಿ ತಂಡದ ಜೊತೆ ಗ್ರೀನ್ ಆರ್ಮಿ ನಡುವೆ ನಡೆಯಿತು. ರೇಡ್ ಆರ್ಮಿ 13 ಅಂಕಗಳಿಂದ ಗ್ರೀನ ಆರ್ಮಿ ತಂಡದ ವಿರುದ್ಧ ಜಯಗಳಿಸಿತು. ಇಂಡಿಯನ ನೇವಿ ತಂಡದ ಜೊತೆ ರೋಹತಕ ಹರಿಯಾಣ ತಂಡ ಅಕಾಡೆಮಿಯಲ್ಲಿ ಇಂಡಿಯನ ನೇವಿ 8 ಅಂಕಗಳಿಂದ ರೋಹತಕ ಹರಿಯಾಣ ತಂಡದ ವಿರುದ್ಧ ಜಯಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಸೆಂಟ್ರಲ ರೇಲ್ವೆ ತಂಡದ ಜೊತೆ ವೆಸ್ಟರ್ನ ರೇಲ್ವೆ ಮುಂಬೈ ತಂಡದ ಜೊತೆಗೆ ನಡೆದ ಪಂದ್ಯದಲ್ಲಿ ವೆಸ್ಟರ್ನ್ ರೇಲ್ವೆ ಮುಂಬೈ 5 ಅಂಕಗಳಿಂದ ಜಯ ಗೊಳಿಸಿತು. ಪಾಲಮ ಸ್ಪೋರ್ಟಸ್ ದೆಹಲಿ ತಂಡದ ಜೊತೆ ಸೌತ್ ಸೆಂಟ್ರಲ್ ರೇಲ್ವೆ ತಂಡದ ಜೊತೆಗೆ ನಡೆದ ಪಂದ್ಯದಲ್ಲಿ ಸೌತ್ ಸೆಂಟ್ರಲ್ ರೇಲ್ವೆ 15 ಅಂಕಗಳಿಂದ ಜಯ ಗೊಳಿಸಿತು.
ಈ ಸಂದರ್ಭದಲ್ಲಿ ಹರಿಯಾಣ ರಾಜ್ಯದ ಉತ್ತಮ ಆಡಳಿತ ಉಸ್ತುವಾರಿಗಳಾದ ನಾಗೇಶ ಶರ್ಮಾ, ಶಾನ್ವತ್ಸಾ ಶರ್ಮಾ ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಂ.ಪಿ. ಪಾಟೀಲ, ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಸಭಾಪತಿ ರಾಜೇಶ ಗುಂದೇಶಾ. ವಿಶ್ವನಾಥ ಕಮತೆ, ಅಭಯ ಮಾನ್ವಿ. ಪ್ರಣವ ಮಾನ್ವಿ. ಕಬ್ಬಡ್ಡಿ ತಂಡದ ಆಯೋಜಕ ಎಂ.ಕೆ.ಶಿರಗುಪ್ಪಿ. ಡಯಟ್ ದೈಹಿಕ ಶಿಕ್ಷಣ ಉಪನ್ಯಾಸಕ ಎಸ್.ಬಿ.ಚೌಗಲೆ, ಕಬ್ಬಡ್ಡಿ ಅಸೋಸಿಯೇಶನ್ ರೇಪರಿ ಅಧ್ಯಕ್ಷ ಬಿ.ಸಿ.ಹರಲಾಪೂರ, ಜೊಲ್ಲೆ ಗ್ರೂಪ್ ಇವೆಂಟ ಮ್ಯಾನೇಜರ್ ವಿಜಯ ರಾವೂತ್ ಮುಂತಾದವರು ಇದ್ದರು.
ರಮೇಶ ಜಾರಕಿಹೊಳಿ ಕ್ಷಮೆ ಯಾಚಿಸಲಿ: ಪಂಚಮಸಾಲಿ ಮುಖಂಡರ ಆಗ್ರಹ
https://pragati.taskdun.com/ramesh-jarkiholi-should-apologize-for-his-words-to-lakshmi-hebbalkar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ