ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಂದಿನ 5 ವರ್ಷಗಳಿಗೆ ರಾಜ್ಯದ ಆಡಳಿತ ಚುಕ್ಕಾಣಿ ಯಾರ ಕೈಗೆ ಎನ್ನುವ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಬಹಿರಂಗವಾಗಲಿದೆ.
ಮೇ 10ರಂದು ರಾಜ್ಯದ 224 ಕ್ಷೇತ್ರಗಳಿಗೆ ನಡೆದ ವಿಧಾನ ಸಭೆ ಚುನಾವಣೆಯ ಮತ ಎಣಿಕೆ 8 ಗಂಟೆಗೆ ಆರಂಭವಾಗಲಿದ್ದು, ಈಗಾಗಲೆ ಅಧಿಕಾರಿಗಳು ಮತ ಎಣಿಕೆ ಕೇಂದ್ರಗಳಿಗೆ ತಲುಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದ 34 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ನಡೆಯಲಿದೆ. ಸುಮಾರು 8.30ರ ಹೊತ್ತಿಗೆ ಇತರ ಮತಗಳ ಎಣಿಕೆ ಆರಂಭವಾಗಲಿದೆ. 9 ಗಂಟೆ ಹೊತ್ತಿಗೆ ಮುನ್ನಡೆ, ಹಿನ್ನಡೆ ಗೊತ್ತಾಗಲು ಶುರುವಾಗಲಿದೆ.
ರಾಜ್ಯದಲ್ಲಿ ವರುಣಾ, ಹುಬ್ಬಳ್ಳಿ – ಧಾರವಾಡ, ಕನಕಪುರ, ಶಿಗ್ಗಾವಿ, ಅಥಣಿ, ಗೋಕಾಕ, ಬೆಳಗಾವಿ ಗ್ರಾಮೀಣ, ಧಾರವಾಡ ಮೊದಲಾದವು ಅತ್ಯಂತ ಕುತೂಹಲಕರ ಕ್ಷೇತ್ರಗಳಾಗಿವೆ.
ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಮುನ್ಸೂಚನೆ ನೀಡಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಿದೆ. ಮಧ್ಯಾಹ್ನ 12 ಗಂ್ಟೆ ಹೊತ್ತಿಗೆ ಬಹುತೇಕ ಫಲಿತಾಂಶಗಳು ಹೊರಬೀಳಲಿವೆ. ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದಲ್ಲಿ ಅತಿ ದೊಡ್ಡ ಪಕ್ಷbeಗಿ ಯಾವುದು ಹೊರಹೊಮ್ಮಲಿದೆ? ಯಾರ ಜೊತೆ ಮೈತ್ರಿಯಾಗಲಿದೆ? ಯಾರು ಮುಂದಿನ 5 ವರ್ಷ ಸರಕಾರ ರಚಿಸಲಿದ್ದಾರೆ? ಯಾರು ಮುಖ್ಯಮಂತ್ರಿಯಾಗಲಿದ್ದಾರೆ? ಎನ್ನುವ ಕುತೂಹಲ ರಾಜ್ಯದ ಜನರಿಗಿದೆ. ಇದಕ್ಕೆಲ್ಲ ಇಂದು ಸಂಜೆಯ ಹೊತ್ತಿಗೆ ಒಂದಿಷ್ಟು ಉತ್ತರ ಸಿಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ