
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತೀವ್ರತರವಾದ ಕಿವುಡತ ಹೋಗಲಾಡಿಸುವದು ಸವಾಲಿನ ಕೆಲಸವಾಗಿದ್ದು, ಆಧುನಿಕ ವೈದ್ಯ ವಿಜ್ಞಾನ ಕಾಕ್ಲಿಯರ್ ಇಂಪ್ಲಾಂಟ್ ರೂಪದಲ್ಲಿ ಪರಿಹಾರವನ್ನು ಕಲ್ಪಿಸಿದೆ.
ಕಿವುಡತನ ಮತ್ತು ಸಮತೋಲನ ಕಾಯ್ದುಕೊಳ್ಳುವದು ಹೃದ್ರೋಗ ಮತ್ತು ಇತರ ಖಾಯಿಲೆಗಳಂತೆ ಅಲ್ಲ. ಕಿವಿಯ ರಚನೆಯು ಅತ್ಯಂತ ಸೂಕ್ಷ್ಮತೆಯನ್ನು ಹೊಂದಿರುವ ದೇಹದ ಭಾಗವಾಗಿದ್ದು. ಇಲ್ಲಿನ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ನೆರವೇರಿಸಬೇಕಾಗುತ್ತದೆ. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿಯೇ ಪ್ರಥಮ ಬಾರಿಗೆ ಕಿವುಡತನ ಹೋಗಲಾಡಿಸುವ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಗುತ್ತಿದೆ. ಈ ಭಾಗದ ಮಕ್ಕಳಿಗೆ ಸದುಪಯೋಗವಾಗಲಿದೆ ಎಂದು ಕಾಹೇರನ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕಿವಿ, ಮೂಗು, ಗಂಟಲು ವಿಭಾಗವು ಏರ್ಪಡಿಸಲಾಗಿದ್ದ ಅಡವಾನ್ಸ್ ವೆಸ್ಟಿಬುಲರ್ ಡಿಸಾರ್ಡರ್ ಮತ್ತು ಕಿವುಡತ-ಕಾಕ್ಲಿಯರ ಇಂಪ್ಲಾಂಟ್ ಕುರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಯುಷ್ಯಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಮಕ್ಕಳಲ್ಲಿರುವ ಕಿವುಡುತನವನ್ನು ಹೋಗಲಾಡಿಸುವದಕ್ಕಾಗಿ ಅತ್ಯಂತ ತಾಂತ್ರಿಕತೆಯಿಂದ ಕೂಡಿರುವ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆನ್ನು ಆಸ್ಪತ್ರೆಯಲ್ಲಿ ನೆರವೇರಿಸಲಾಗುತ್ತದೆ. ಸಂಪೂರ್ಣ ಕಿವುಡತನದಿಂದ ಬಳಲುತ್ತ ಶ್ರವಣ ಸಾಧನವನ್ನು ಬಳಸಿದ ಸಂದರ್ಭದಲ್ಲಿಯೂ ಉಪಯೋಗವಾಗದ ಮತ್ತು ಮೂಕ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಸಮತೋಲನ ಬಹಳ ಮುಖ್ಯ. ತಲೆ ತಿರುಗುವಿಕೆಯಿಂದ ಯಾವುದೇ ಕಾರ್ಯ ಮಾಡಲು ಅಸಾಧ್ಯ. ಇದು ಹಿರಿಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಅವರ ಆರೈಕೆ ಸರಿಯಾದ ಕ್ರಮದಲ್ಲಿ ಮಾಡಬೇಕಾಗಿದೆ. ಕಿವಿ ಕೇಳದಿದ್ದರೆ ಯಾವುದೇ ಸಂಭಾಷಣೆ ಮಾಡುವದೂ ಕೂಡ ಅಸಾಧ್ಯ. ಕಿವುಡತನ ಇದ್ದರೆ ಅಪಹಾಸ್ಯಕ್ಕೀಡಾಗುತ್ತೇವೆ. ಸಂವಹಣ ಸಾಮಾಜಿಕವಾಗಿ ಬಹಳ ಮುಖ್ಯ. ಕಿವುಡತನ ಚಿಕ್ಕಮಕ್ಕಳಲ್ಲಿಯೂ ಕೂಡ ಹೆಚ್ಚಾಗಿ ಕಂಡು ಬರುತ್ತಿದೆ. ಸಂಪೂರ್ಣವಾಗಿ ಕಿವುಡತ ಹೊಂದಿದ್ದರೆ ಕಾಕ್ಲಿಯರ ಇಂಪ್ಲಾಂಟ್ ಸಹಾಯಕ್ಕೆ ಬರಲಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಜೀವನದಲ್ಲಿ ಸಮತೋಲನ ಅತೀ ಮುಖ್ಯ. ಅದಿಲ್ಲದಿದ್ದರೆ ಕಾರ್ಯಚಟುವಟಿಕೆಗಳೇ ನಿಂತು ಹೋಗುತ್ತವೆ. ಆಸ್ಪತ್ರೆಯಲ್ಲಿ ಈಗಾಗಲೇ ಹೃದಯ, ಕಿಡ್ನಿ, ಲೀವರ ಕಸಿಯೊಂದಿಗೆ ಈಗ ಕಾಕ್ಲಿಯರ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನೆರವೇರಿಸಲು ಸಜ್ಜಾಗಿದ್ದೇವೆ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೂ ಕಲಿಕೆಯ ಜೊತೆಗೆ ನುರಿತ ತಜ್ಞರನ್ನಾಗಿ ಮಾಡಲು ಸಕಲ ವ್ಯವಸ್ಥೆನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಸೈಕ್ಲೋಪ್ಸಮೆಡಟೆಕ್ ಪ್ರಾ. ಲಿ.ನ ನಿರ್ದೇಶಕರಾದ ಡಾ. ಶ್ರೀನಿವಾಸ್ ಡಿ.ಆರ್, ಮಾನಸ ಕಾಕ್ಲಿಯರ ಇಂಪ್ಲಾಂಟ್ ನಿರ್ದೇಶಕರಾದ ಡಾ. ವಾಸಂತಿ ಆನಂದ್ , ಡಾ. ಬೆಂಗಳೂರಿನ ರಾಜೀವ್ ಸಂಜಿ ಮತ್ತು ಬಾಗಲಕೋಟೆಯ ಡಾ. ಶಶಿಧರ ಸೂಳಿಗಾವಿ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಇಎನ್‌ಟಿ ವಿಭಾಗ ಮುಖ್ಯಸ್ಥರಾದ ಡಾ. ಬಿ ಪಿ ಬೆಳಲದವರ, ಡಾ.ಪ್ರಶಾಂತ ಪಾಟೀಲ, ಡಾ. ಪ್ರೀತಿ ಹಜಾರೆ, ಡಾ. ವಿನಿತಾ ಮೆಟಗುಡಮಠ, ಡಾ. ರಾಜೇಂದ್ರ ಮೆಟಗುಡಮಠ, ಡಾ. ಅನಿಲ ಹಾರುಗೊಪ್ಪ, ಡಾ. ನಿತಿನ ಅಂಕಲೆ, ಡಾ. ಶಮಾ ಬೆಲ್ಲದ, ಡಾ. ಪ್ರೀತಿ ಶೆಟ್ಟಿ, ಡಾ. ರಾಜೇಶ ಹವಾಲ್ದಾರ, ಡಾ. ಅಪೂರ್ವಾ, ಡಾ. ವಿಶ್ವನಾಥ ಗೌಡಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕೃಷ್ಣಾನದಿಯಲ್ಲಿ ಘೋರ ದುರಂತ; ಸಹೋದರರಿಬ್ಬರು ನೀರುಪಾಲು
https://pragati.taskdun.com/latest/krishna-rivertwo-brotherswashed-away/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ