
ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಾಸಕ ಅನಿಲ ಬೆನಕೆ ರವರು ರಾಮತೀರ್ಥ ನಗರದ ಸರ್ವೆ ನಂ. 592 ಮತ್ತು 593 ರಲ್ಲಿ ಶುಧ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಭೂಮಿ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಶಾಸಕರು ರಾಮತೀರ್ಥ ನಗರದಲ್ಲಿ ನಗರಾಬಿವೃಧ್ದಿ ಪ್ರಾಧಿಕಾರದ ಅನುದಾನದಡಿಯಲ್ಲಿ ಸ್ಥಳೀಯರ ಬೇಡಿಕೆಗಣುಗುನವಾಗಿ ಹಾಗೂ ನೀರಿನ ಸಮಸ್ಯೆಯನ್ನು ನಿಗಿಸುವ ಸಲುವಾಗಿ ಕಳೆದ 6 ದಿನಗಳ ಹಿಂದುಗಡೆ ಬಸವೇಶ್ವರ ಬಡಾವಣೆ ಹಾಗೂ ಶಿವಾಲಯದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಗಿತ್ತು,
ಅದರಂತೆಯೇ ಅವಶ್ಯಕವಾಗಿ ಕಂಡು ಬಂದಲ್ಲಿ ಶುಧ್ದ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗುವುದು ಎಂಬ ಭರವಸೆಯನ್ನು ನೀಡಲಾಗಿದ್ದು ಅದರ ಪ್ರಕಾರ ಇಂದು ರಾಮತೀರ್ಥ ನಗರದ ಸರ್ವೆ ನಂ. 592 ಮತ್ತು 593 ರಲ್ಲಿ ಸ್ಥಳೀಯರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ 12.50 ಲಕ್ಷ.ರೂ ಗಳಲ್ಲಿ ಶುಧ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಸ್ಥಳೀಯರ ಉಪಯೋಗಕ್ಕಾಗಿ ನೀಡಲಾಗುವುದು ಎಂದ ಅವರು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬುಡಾ ಅಭಿಯಂತರ ವಿ.ಎಸ್. ಹಿರೇಮಠ, ಈರಯ್ಯ ಖೋತ, ಎಮ್.ಬಿ. ನಿರವಾನಿ ಹಾಗೂ ಇತರರು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ