ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಾಥಮಿಕ ಪೂರ್ವ ಶಿಕ್ಷಣ ಶೈಕ್ಷಣಿಕ ಜೀವನದ ಬುನಾದಿ. ಹೀಗಾಗಿ ಅಂಗನವಾಡಿ ಮಕ್ಕಳಲ್ಲಿ ದೈಹಿಕ, ಶಾರೀರಿಕ ಚೈತನ್ಯಶೀಲತೆ ಭರಿಸುವ ಕೆಲಸವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಅವರು, ಹಿರೇಬಾಗೇವಾಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟಿಸಿ, ಗ್ರಾಮದ ಅಭಿವೃದ್ಧಿಯ ಕೆಲಸಗಳ ಕುರಿತಾಗಿ ಚರ್ಚಿಸಿದರು.
ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದವರಿಗೆ ಸಿಗಬೇಕಾದ ಮೂಲಸೌಲಭ್ಯಗಳನ್ನು ಒದಗಿಸಿಕೊಡುವುದು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದ್ದು ಅದನ್ನು ಸಾಧ್ಯತೆ ಮೀರಿ ಪೂರೈಸುತ್ತಿರುವ ಬಗ್ಗೆ ತೃಪ್ತಿ ಇದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ಕಂಕಣಬದ್ಧರಾಗಿದ್ದು ಜನ ತಮ್ಮ ಅಗತ್ಯತೆಗಳನ್ನು ಗಮನಕ್ಕೆ ತರುವಂತೆ ಅವರು ಗ್ರಾಮಸ್ಥರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಸಿ.ಸಿ. ಪಾಟೀಲ, ಸ್ವಾತಿ ಇಟಗಿ, ಸುರೇಶ ಇಟಗಿ, ಗೌಸ್ ಜಾಲಿಕೊಪ್ಪ, ಶ್ರೀಕಾಂತ ಮಧುಭರಮಣ್ಣವರ, ಬಸನಗೌಡ ಪಾಟೀಲ, ಸಿದ್ದು ಪಾಟೀಲ, ನಿಂಗಪ್ಪ ತಳವಾರ, ಸೈಯದ್ ಸನದಿ, ಕತಾಲ್ ಗೊವೆ, ಶಿಪು ಹಳಮನಿ, ಇಮ್ತಿಯಾಜ್ ಕರಿದಾವಲ್, ಸಮೀರ ದೇವಲಾಪುರ, ಶಬ್ಬೀರ್ ಸತ್ತಿಗೇರಿ, ಅಬ್ದುಲ್ ಅಂಗನವಾಡಿ ಕೇಂದ್ರದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗಡಿ ಮಾತುಕತೆ: ಅಮಿತ್ ಶಾ ಎದುರು ಮಣಿಯದಿರಲು ಮುಖ್ಯಮಂತ್ರಿಗೆ ಸಲಹೆ
https://pragati.taskdun.com/border-talks-advice-to-chief-minister-not-to-give-in-to-amit-shah/
https://pragati.taskdun.com/belagavichikkodisaparate-districtbelagavi-session/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ