ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸ್ತವಾಡ ಗ್ರಾಮದಲ್ಲಿ ನೂತನ ಗ್ರಾಮ ಒನ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರಗಳನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಈ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಹೊಲ ಗದ್ದೆಗಳ ಉತಾರ, ಆನ್ ಲೈನ್ ಅರ್ಜಿಗಳು, ಬಸ್, ರೈಲ್ವೆ, ವಿಮಾನ ಟಿಕೆಟ್ ಗಳ ಬುಕ್ಕಿಂಗ್ ಸೇವೆಗಳನ್ನು ಪಡೆದುಕೊಳ್ಳುವುದರೊಂದಿಗೆ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕ ಸೇವೆಯ ಮೂಲಕ ಹಣಕಾಸಿನ ವ್ಯವಹಾರಗಳನ್ನು ಸಹ ಮಾಡಬಹುದಾಗಿದೆ. ಇವುಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಸಾಗರ ಜಿ. ತಹಶೀಲ್ದಾರ್, ಬಾಹುಬಲಿ ಪಾಟೀಲ, ಪರಶುರಾಮ ಪಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಗುಡೆಪ್ಪಗೋಳ, ಪಿಡಿಒ ಶ್ವೇತಾ, ಮನೋಹರ ಬಾಂಡಗೆ, ರಾಮಾ ಕಾಕತ್ಕರ್, ಶಿವಾ ಕಾಕತ್ಕರ್, ಗುಂಡು ಚೌಗುಲೆ, ನಿಂಗಪ್ಪ ಚೌಗುಲೆ, ಸಂಜು ಬಡಚಿ, ಅಪ್ಪಯ್ಯ ಬಾಗಣ್ಣವರ, ಮಾಣಿಕ್ ಸಂಕೇಶ್ವರಿ, ಮಹಾವೀರ ಸಂಕೇಶ್ವರಿ, ಅಜಿತ್ ಬಾಗಣ್ಣವರ, ಮನೋಹರ ಮುಚ್ಚಂಡಿ, ಜ್ಯೋತಿಬಾ ಚೌಗುಲೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.
*SSLC ವಿದ್ಯಾರ್ಥಿಗಳಿಗೆ ಫಲಿತಾಂಶ ವೃದ್ಧಿಗೆ ಇಲ್ಲಿದೆ ಮಹತ್ವದ ಮಾಹಿತಿ*
https://pragati.taskdun.com/sslc-studentsscience-study-pakegvijana-mitra/
ತಡರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಅಮಿತ್ ಶಾ
https://pragati.taskdun.com/amit-shah-arrived-in-hubli-late-at-night/
ಬೆಳಗಾವಿ ಬಿಜೆಪಿ ಭಿನ್ನಮತ ಶಮನಕ್ಕೆ ಅಮಿತ್ ಶಾ ತಂತ್ರವೇನು?
https://pragati.taskdun.com/what-is-amitas-strategy-to-calm-the-belgaum-bjp-dissent/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ