Kannada NewsKarnataka NewsUncategorized

ಲಕ್ಷ್ಮೀ ಹೆಬ್ಬಾಳಕರ್ ಚುನಾವಣೆ ಕಾರ್ಯಾಲಯ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದ ಗೋಕುಲ್ ನಗರದಲ್ಲಿ  ಕಾಂಗ್ರೆಸ್ ಪಕ್ಷದ ಚುನಾವಣೆ ಕಾರ್ಯಾಲಯವನ್ನು  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಉದ್ಘಾಟಿಸಿದರು.​ಕಾರ್ಯಕರ್ತರು ಪಕ್ಷದ ಆಸ್ತಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕಾರ್ಯಾಲಯ ಆರಂಭಿಸಲಾಗಿದೆ. ಸಾರ್ವಜನಿಕರೂ ಸಹ ಇದರ ಸದುಪಯೋಗಪಡೆಯಬಹುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ಕ್ಷೇತ್ರದೆಲ್ಲೆಡೆ ಕಾಂಗ್ರೆಸ್ ಪರ ಅಭೂತಪೂರ್ವ ಒಲವಿದ್ದು, ಕಾಂಗ್ರೆಸ್ ಸರಕಾರದ ಸಾಧನೆ, ಜನೋಪಯೋಗಿ ಕೆಲಸ ಮತ್ತು ಬಿಜೆಪಿ ಸರಕಾರದ ವೈಫಲ್ಯ, ಬೆಲೆ ಏರಿಕೆ, ಭ್ರಷ್ಟಾಚಾರಗಳ ಕುರಿತು ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕು ​ಎಂದೂ ಅವರು ಕೋರಿದರು.

 ಈ ಸಮಯದಲ್ಲಿ​ ವಿಧಾನ ಪರಿಷತ್ ಸದಸ್ಯ ​ ಚನ್ನರಾಜ ಹಟ್ಟಿಹೊಳಿ,​ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ​ ನಾಗೇಶ ದೇಸಾಯಿ, ಪಿಂಟು ಮಲ್ಲವ್ವಗೋಳ, ಗಜಾನನ ಕಣಬರ್ಕರ್, ಶ್ಯಾಮ್ ಮುತಗೇಕರ್, ದೀಲಿಪ್ ಬಸರೀಕಟ್ಟಿ, ಮಹೇಶ ಸು​ಗನನ್ನವರ್, ರುದ್ರಪ್ಪ ಅಮ್ರಾಪುರ, ಪ್ರಕಾಶ ಕಡ್ಯಾಗೋಳ, ರಾಧಿಕಾ ಮುತಗೇಕರ್, ಫಕೀರವ್ವ ಅಮ್ರಾಪುರ, ಲಕ್ಷ್ಮೀ ಪಾಟೀಲ,ಮಂಜುಳಾ ಅಗಸಿಮನಿ, ಶೀಲಾ ಸೈಬಣ್ಣವರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

https://pragati.taskdun.com/cm-basavaraj-bommaisiddaramaiahbelagavi-airport/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button