Kannada NewsLatest

ಮಾರಿಹಾಳದಲ್ಲಿ 52 ಲಕ್ಷ ವೆಚ್ಚದ ಮರಾಠಾ ಸಾಂಸ್ಕೃತಿಕ ಭವನ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರಿಹಾಳ ಗ್ರಾಮದಲ್ಲಿ 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮರಾಠಾ ಸಾಂಸ್ಕೃತಿಕ ಭವನವನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, “ಕ್ಷೇತ್ರದ್ಯಾಂತ ಹಲವಾರು ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಹಾಗೂ ಸಾಂಸ್ಕೃತಿಕ ಭವನಗಳ ಅಭಿವೃದ್ಧಿ, ಗುಡಿ ಗೋಪುರಗಳ ಅಭಿವೃದ್ಧಿ, ಶಾಲೆಗಳ ಅಭಿವೃದ್ಧಿ, ರಸ್ತೆ ಚರಂಡಿಗಳ ಅಭಿವೃದ್ಧಿ, ಬ್ರಿಡ್ಜ್ ಕಂ ಬಾಂದಾರಗಳ ಅಭಿವೃದ್ಧಿ, ಕೆರೆ ಕಟ್ಟೆಗಳ ಅಭಿವೃದ್ಧಿ, ಕುಡಿಯುವ ನೀರಿನ ಅಭಿವೃದ್ಧಿ ಹಾಗೂ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಕ್ಷೇತ್ರವನ್ನು ಮುನ್ನಡೆಸುತ್ತ ಬಂದಿದ್ದೇನೆ. ಇನ್ನೂ ಹೆಚ್ಚು ಅಭಿವೃದ್ಧಿ ಗುರಿ ಹೊಂದಿದ್ದು ಜನರ ಸಹಕಾರ ಮುಂದುವರೆಯಲಿ” ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅವರೊಳ್ಳಿ ರುದ್ರಾಕ್ಷಿಮಠದ ಪರಮಪೂಜ್ಯ ಚನ್ನಬಸವ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಡಾ.ಡಿ.ಎನ್. ಪಾಟೀಲ, ಅಪ್ಪಾಸಾಬ್ ಬಾಗವಾನ್, ವಿಠ್ಠಲ ಮಲ್ಲಾರಿ, ದತ್ತಾ ಮಿಸಾಳೆ, ಮರಾಠಾ ಸಮಾಜದ ಎಲ್ಲ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

*ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ; ಪ್ರಧಾನಿ ಮೋದಿ*

Home add -Advt

https://pragati.taskdun.com/pm-modispeechshivamogga/

ಭಾರತದ ಪಾಲಿಗೆ ದುಬಾರಿಯಾಗಿರುವ ಹ್ಯುಂಡೈ, ಕಿಯಾ: ಪಿಯೂಷ್ ಗೋಯೆಲ್

https://pragati.taskdun.com/hyundai-kia-are-expensive-for-india-piyush-goyal/

 

ಜರ್ಮನಿಯಲ್ಲಿ ಕೆಲಸ ಮಾಡಲು ಭಾರತೀಯ ಟೆಕ್ಕಿಗಳು, ನುರಿತ ಕೆಲಸಗಾರರಿಗೆ ಆಹ್ವಾನ; ವಿಸಾ ಪ್ರಕ್ರಿಯೆ ಸರಳೀಕರಣಕ್ಕೆ ಸಿದ್ಧತೆ

https://pragati.taskdun.com/indian-techies-invited-to-work-in-germany-preparing-for-visa-process-simplification/

Related Articles

Back to top button