GIT add 2024-1
Laxmi Tai add
Beereshwara 33

ನೂತನ ಮಹಿಳಾ ಮಂಡಳ ಉದ್ಘಾಟನೆ

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಂದ ಉದ್ಘಾಟನೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಣೇಶಪುರದ ಶಿವನೇರಿ ಕಾಲೋನಿಯ ಸರಸ್ವತಿ ನಗರದಲ್ಲಿ ನೂತನ ‘ನಾರಿ ಶಕ್ತಿ’ ಮಹಿಳಾ ಮಂಡಳ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ತರಲು ಹಲವಾರು ಸಂಘ, ಸಂಸ್ಥೆಗಳು, ಮಹಿಳಾ ಮಂಡಳಗಳು ತ್ವರಿತಗತಿಯಲ್ಲಿ ಹುಟ್ಟುಕೊಳ್ಳುತ್ತಿವೆ ಇದು ಉತ್ತಮ ಹಾಗೂ ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶೋಭಾ ಪಾಟೀಲ, ಸುಧಾ ಜಾಂಗಳೆ, ಗೀತಾ ಪಾಟೀಲ, ಸೀಮಾ, ಪೂಜಾ, ಸಾಧನಾ ನಾಗಾರೆ, ರಜನಿ ಜೋಪಡೆ, ಅನಿತಾ ಮೋರೆ, ವಿಮಲಾ, ಭಾಗ್ಯಶ್ರೀ, ಸಾಯಿರಾಬಾನು, ನಂದಿನಿ ಜೋಪಡೆ, ರಾಜಶ್ರೀ ಪಾಟೀಲ, ಅನಿತಾ ಮೂಡಲಗಿ, ವಾಮನ್ ಮರಗ್ನಾಚೆ, ಭಾವುರಾವ್ ಪಾಟೀಲ, ಕಲ್ಲಪ್ಪ ದೇಸೂರಕರ್, ಜೈನುದ್ದೀನ್ ಬಾಳಾಸಾಹೇಬ್ ಜೋಪಡೆ, ಕುಂದ್ರಾಳಕರ್, ಅಜಿತ್ ಜಾಂಗಳೆ, ಪ್ರಭಾಕರ ಪಾಟೀಲ, ಮುರಳಿ ಕದಂ, ಸುಭಾಷ ಕಾರೇಕರ್, ಜೌಗುಲೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Emergency Service

ಜಿಲ್ಲಾಧಿಕಾರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

https://pragati.taskdun.com/state-level-award-presentation-to-the-collector/

*ಮತದಾರರಿಗೆ ತಲಾ 6000 ರೂ. ಆಮಿಷ ಒಡ್ಡಿದ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದೂರು*

https://pragati.taskdun.com/ramesh-jarakiholid-k-shivakumarcongresscomplaint-file/

*ಆರೋಗ್ಯ ಇಲಾಖೆಯಲ್ಲಿ 3000 ಕೋಟಿ ಹಗರಣ; ಸಚಿವ ಸುಧಾಕರ್ ವಿರುದ್ಧ ಗಂಭೀರ ಆರೋಪ*

https://pragati.taskdun.com/siddaramaiahdr-sudhakarbjp-govt/

Bottom Add3
Bottom Ad 2