ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಮಂಗಳವಾರ ಚಿಕ್ಕೋಡಿ ನಗರದ (ಬಾಣಂತಿಕೋಡಿ) ಬಾಲಕಿಯರ ವಸತಿ ನಿಲಯದಲ್ಲಿ ತಾಲ್ಲೂಕಾಡಳಿತ, ತಾಲ್ಲೂಕಾ ಆರೋಗ್ಯ ಕೇಂದ್ರ ಹಾಗೂ ಜೊಲ್ಲೆ ಚಾರಿಟಿ ಫೌಂಡೇಶನ್ ಮತ್ತು ಭಾರತೀಯ ವೈದ್ಯಕೀಯ ಹಾಗೂ ಆಯುಷ್ ಸಂಸ್ಥೆ ವತಿಯಿಂದ ಸೋಂಕಿತರ ಚಿಕಿತ್ಸೆಗಾಗಿ 12 ಆಕ್ಸಿಜನೇಟೆಡ್ ಹಾಸಿಗೆ ಹಾಗೂ 08 ಸಾಮಾನ್ಯ ಹಾಸಿಗೆ ಸಾಮರ್ಥ್ಯದ ನೂತನ ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಲಾಯಿತು.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಸಾರ್ವಜನಿಕರ ಆರೋಗ್ಯ ಸಂರಕ್ಷಣಾ ಅಭಿಯಾನದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯವಿರುವಲ್ಲಿ ಕೋವಿಡ್ ಕೇರ್ ಸೆಂಟರ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ವತಿಯಿಂದಲೇ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ, ಸೋಂಕಿತರ ತುರ್ತು ಚಿಕಿತ್ಸೆಗೆ ಜೊಲ್ಲೆ ಆಕ್ಸಿ ಬ್ಯಾಂಕ್ ನಿಂದ ಆಮ್ಲಜನಕ ಪೂರೈಸಲಾಗುತ್ತಿದೆ. ನಮ್ಮ ಸಮಾಜ ಸೇವಾ ಕಾಯಕದಲ್ಲಿ ನಿಸ್ವಾರ್ಥ ಸೇವೆಗೈಯಲು ಸ್ವಪ್ರೇರಣೆಯಿಂದ ಮುಂದೆ ಬಂದಿರುವ ಡಾ. ರಾಜೇಂದ್ರ ಸಲಗರೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೌಹಾರ್ದ ಫೆಡರೇಷನ್ ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ, ಉಪವಿಭಾಗಾಧಿಕಾರಿ ಯುಕೇಶಕುಮಾರ, ಪ್ರಭಾರ ತಾಲ್ಲೂಕಾ ವೈದ್ಯಾಧಿಕಾರಿಗಳು ಎಸ್.ಎಮ್. ಕರಗಾಂವೆ, ತಹಶೀಲ್ದಾರ ಪ್ರವೀಣ ಜೈನ್, ಐ.ಎಮ್.ಎ. ಅಧ್ಯಕ್ಷೆ ರೋಹಿಣಿ ಕುಲಕರ್ಣಿ, ಅಧಿಕಾರಿಗಳು ವೈದ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ