*13 ರಂದು ಲೇಖಕಿಯರ ಸಂಘದ ನವೀಕೃತ ಕಟ್ಟಡ ಉದ್ಘಾಟನೆ: ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ: ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ನವೀಕೃತ ಕಟ್ಟಡ‘ ಸಾಹಿತ್ಯ ಸದನ’ದ ಉದ್ಘಾಟನೆಯನ್ನು ಇದೇ 13ರಂದು ಬೆಳಿಗ್ಗೆ 10.30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೆರವರೇರಿಸಲಿದ್ದಾರೆ.
ನಗರದ ಉರ್ವಸ್ಟೋರ್ ಬಳಿ ಇರುವ ಸಾಹಿತ್ಯ ಸದನ ಕಟ್ಟಡವನ್ನು ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿ ರೂ. 14.60 ಲಕ್ಷ ಹಾಗೂ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ರೂ. 6 ಲಕ್ಷದ ಅನುದಾನದಿಂದ ನವೀಕರಿಸಲಾಗಿದ್ದು ವಾಚನಾಲಯ ಮತ್ತು ಲೇಖಕಿಯರ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸೂಕ್ತವಾಗಿ ಪುನರ್‌ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಶ್ರೀನಾಥ ಎಂ.ಪಿ, ಎಂಆರ್‌ಪಿಎಲ್ ಮಾನವ ಸಂಪನ್ಮೂಲ ವಿಭಾಗದ ಸಮೂಹ ಮಹಾಪ್ರಬಂಧಕ ಕೃಷ್ಣ ಹೆಗ್ಡೆ, ಕಾರ್ಪೊರೇಟರ್ ಗಣೇಶ್ ಕುಲಾಲ್ ಅತಿಥಿಗಳಾಗಿ ಭಾಗವಹಿಸುವರು.
ತರೀಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ, ಮುನ್ನೋಟದ ಮಾತನಾಡುವರು. ಹಿರಿಯ ಲೇಖಕರಾದ ಇಂದಿರಾ ಹಾಲಂಬಿ ಮತ್ತು ಮುಖ್ಯಮಂತ್ರಿಗಳ ಮಾಜಿ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಅವರ ಗೌರವ ಉಪಸ್ಥಿತಿ ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗದಲ್ಲಿ ಅಕ್ಷತ ಬೈಕಾಡಿ, ವಿದುಷಿ ರಾಜಶ್ರೀ ಮತ್ತು ಬಳಗ ಅವರಿಂದ ನೃತ್ಯ, ಜಯಲಕ್ಷ್ಮೀ ಶಾಸ್ತ್ರಿ, ಆಕೃತಿ ಭಟ್, ರಂಜಿನಿ ಶೆಟ್ಟಿ, ಜ್ಯೋತಿ ಗುರುಪ್ರಸಾದ್, ಶಶಿಕಲಾ ಸಾಲ್ಯಾನ್, ರತ್ನಾವತಿ ಬೈಕಾಡಿ, ಗೀತಾ ಮಲ್ಯ, ರಾಧಾ ಮುರಳೀಧರ್, ರೂಪಶ್ರೀ ನಾಗರಾಜ್ ಅವರಿಂದ ಭಾವಗಾನ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಜ್ಯೋತಿ ಚೇಳೈರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ