Kannada NewsKarnataka NewsLatest

ನಿಲ್ಲದ ಬೆಲೆ ಏರಿಕೆ : ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದಲ್ಲಿ ಮತ್ತೆ ಗ್ಯಾಸ್ ಬೆಲೆ ಏರಿಕೆಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರೂ, ಕೆಪಿಸಿಸಿ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್, ಬಿಜೆಪಿ ಸರಕಾರ ಬಂದ ಮೇಲಿನ ದುಬಾರಿಯ ದಿನಗಳು ಜನಸಾಮಾನ್ಯರನ್ನು ಬದುಕದಂತೆ ಮಾಡುತ್ತಿವೆ ಎಂದಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಡುಗೆ ಅನಿಲ ಬೆಲೆ ಬಿಜೆಪಿ ಸರಕಾರ ಬಂದ ಮೇಲೆ ಶೇ.116ರಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆಗಳು ಕೂಡ ಶೇ.50ರಷ್ಟು ಹೆಚ್ಚಾಗಿವೆ. ಇದು ಬೇರೆಲ್ಲ ದಿನ ಬಳಕೆ ವಸ್ತುಗಳ ಮೇಲೆ ಪರಿಣಾಮ ಬೀರಿದ್ದು, ಜನರ ಬದುಕು ಹದಗೆಟ್ಟು ಹೋಗಿದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲ ಬೆಲೆ ಶೇ.28ರಷ್ಟು ತಗ್ಗಿದೆ. ಕಚ್ಚಾ ತೈಲ ಬೆಲೆ ಶೇ.32ರಷ್ಟು ಕಡಿಮೆಯಾಗಿದೆ. ಹಾಗಿದ್ದಾಗ ಎಲ್ಲ ದರಗಳು ಸಹಜವಾಗಿ ಕೆಳಗಿಳಿಯಬೇಕಿತ್ತು. ಆದರೆ ಭಾರತದಲ್ಲಿ ಬಿಜೆಪಿ ಸರಕಾರ ದರಗಳನ್ನು ಹಿಗ್ಗಾ ಮುಗ್ಗಾ ಹೆಚ್ಚಿಸುತ್ತಿದೆ. ಯಾವ ಕಾರಣದಿಂದ ಈ ರೀತಿ ಬೆಲೆ ಹೆಚ್ಚಿಸಲಾಗುತ್ತಿದೆ ಎನ್ನುವ ಕುರಿತು ಸ್ಪಷ್ಟೀಕರಣವನ್ನೂ ಬಿಜೆಪಿ ನೀಡುತ್ತಿಲ್ಲ. ಸರಕಾರ ಕೇವಲ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೆಬ್ಬಾಳಕರ್ ಟೀಕಿಸಿದ್ದಾರೆ.

ಜನರು ಅಚ್ಛೇದಿನ್ ಬರುತ್ತದೆ ಎನ್ನುವ ಬಿಜೆಪಿ ಸ್ಲೋಗನ್ ನಂಬಿ ಮತ ಕೊಟ್ಟು ಮೋಸ ಹೋಗಿದ್ದಾರೆ. ಇನ್ನೆಂದೂ ಬಿಜೆಪಿ ಕಡೆಗೆ ಮುಖಮಾಡದಂತಾಗಿದೆ. ಕೊನೆಯ ಪಕ್ಷ ರೈತರು ಬೆಳೆಯುವ ಉತ್ಪನ್ನಗಳ ಬೆಲೆಯನ್ನಾದರೂ ಹೆಚ್ಚಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಬೇಕಿತ್ತು. ಆದರೆ ಆ ಕೆಲಸವನ್ನೂ ಮಾಡಲಾಗುತ್ತಿಲ್ಲ. ಬಡವರು ಹಾಗೂ ರೈತರ ಜೀವನ ನೋಡಿದರೆ ಕಣ್ಣೀರು ಬರುತ್ತಿದೆ ಎಂದು ಅವರು ಹೇಳಿದ್ದಾರೆ.

Home add -Advt

​ಮನೆ ನಿರ್ಮಾಣ ಆದೇಶ ಪತ್ರ ಹಸ್ತಾಂತರ; ಸಂತ್ರಸ್ತರ ಮೊಗದಲ್ಲಿ ನಗು ತರಿಸಿದ ಶಾಸಕಿ​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button