
ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಸವದತ್ತಿಯ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಸಲ್ಲಿಸಿರುವ ನಾಮಪತ್ರದ ಸಿಂಧುತ್ವ ಕುರಿತು ವಿಚಾರಣೆ ಆರಂಭವಾಗಿದ್ದು, ಎಲ್ಲರ ಕುತೂಹಲ ಹೆಚ್ಚಿದೆ.
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಮತ್ತು ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ.
ರತ್ನಾ ಮಾಮನಿ ಮತ್ತು ಅವರ ವಕೀಲರು ಸ್ಥಳಕ್ಕೆ ಆಗಮಿಸಿದ್ದಾರೆ. ನ್ಯಾಯವಾದಿ ಎಂ.ಬಿ.ಜಿರಲಿ ಸಹ ಸ್ಥಳದಲ್ಲಿದ್ದಾರೆ. ದೂರುದಾರರು ಸಹ ಬಂದಿದ್ದಾರೆ. ಹಾಗೆಯೇ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ಹುನ್ನಾರ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಇನ್ನು ಕೆಲವೇ ಕ್ಷಣಗಳಲ್ಲಿ ವಿಚಾರಣೆ ನಡೆದು ರತ್ನಾ ಮಾಮನಿ ನಾಮಪತ್ರದ ಭವಿಷ್ಯ ನಿರ್ಧಾರವಾಗಲಿದೆ.



