Latest

ಡೆಂಗ್ಯು ಜ್ವರಕ್ಕೆ ಪತ್ರಕರ್ತ ಬಲಿ

ಡೆಂಗ್ಯು ಜ್ವರಕ್ಕೆ ಪತ್ರಕರ್ತ ಬಲಿ

ಪ್ರಗತಿವಾಹಿನಿ ಸುದ್ದಿ, ಮಂಗಳೂರು –

ಡೆಂಗ್ಯು ಜ್ವರಕ್ಕೆ ಪತ್ರಕರ್ತರೋರ್ವರು ಬಲಿಯಾಗಿದ್ದಾರೆ. ಮಂಗಳೂರಿನ ಬಿ ಟಿವಿ ಕ್ಯಾಮೆರಾಮೆನ್ ನಾಗೇಶ್ ಪಡು ಸಾವಿಗೀಡಾದವರು.

ಜ್ವರ ಕಾಣಿಸಿದ್ದರಿಂದ ಕಳೆದ ಹತ್ತು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ನಾಗೇಶ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನಾಗೇಶ್ ಮಂಗಳೂರು ಹೊರವಲಯದ ನೀರುಮಾರ್ಗ ಸಮೀಪದ ಪಡು ನಿವಾಸಿ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರೂ ಆಗಿದ್ದರು.

Home add -Advt

ಸ್ಥಳೀಯವಾಗಿಯೂ ಸಾಮಾಜಿಕ ಧಾರ್ಮಿಕ ಹಾಗೂ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಉತ್ತಮ‌ ಕ್ರಿಕೆಟ್ ಆಟಗಾರ ಕೂಡ ಹೌದು.  ಅವರಿಗೆ ಒಂದು ಮಗು, ಪತ್ನಿ, ತಂದೆ ತಾಯಿ, ಸಹೋದರ ಸಹೋದರಿಯರು ಇದ್ದಾರೆ.

Related Articles

Back to top button