
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಾದ್ಯಂತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಆದೇಶ ಜಾರಿಯೊಗಲಿದ್ದು, ಮುಂದಿ ಆದೇಶದವರೆಗೂ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ –
ದಿನಾಂಕ: 15.03.2022 ರಂದು ಘನ ಉಚ್ಚ ನ್ಯಾಯಾಲಯವು ಹಿಜಾಬ್ ಕುರಿತಂತೆ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದು, ಜಿಲ್ಲೆಯಲ್ಲಿ ತೀರ್ಪನ ಪ್ರಕಟಣೆಯ ನಂತರ ಜನರ ಗುಂಪುಗೂಡುವಿಕೆ, ಸಂಂಭ್ರಮಾಚರಣೆಗಳು, ಪ್ರತಿಭಟನೆಗಳು ಜರುಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 1973 ಕಲಂ 144 ರಡಿ ನಿಷೇಧಾಜ್ಞೆ ಜಾರಿ ಮಾಡುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಗಿನಂತೆ ಆದೇಶಿಸಿದ್ದೇನೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಅವಲೋಕಿಸಿ, ದಿನಾಂಕ: 15.03.2022 ರಂದು ಮಾನ್ಯ ಘನ ಉಚ್ಚ ನ್ಯಾಯಾಲಯವು ಹಿಜಾಬ್ ಕುರಿತಂತೆ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದು, ಜಿಲ್ಲೆಯಲ್ಲಿ ತೀರ್ಪನ ಪ್ರಕಟಣೆಯ ನಂತರ ಜನರ ಗುಂಪುಗೂಡುವಿಕೆ, ಸಂಂಭ್ರಮಾಚರಣೆಗಳು, ಪ್ರತಿಭಟನೆಗಳು ಜರುಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸಿಆರ್‌ಪಿಸಿ 1973 ಕಲಂ 144 ರನ್ವಯ ನನ್ನಲ್ಲಿರುವ ಪ್ರದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 15.03.2022 ರ ಬೆಳಿಗ್ಗೆ 06.00 ಗಂಟೆಯಿಂದ ಮುಂದಿನ ಆದೇಶದವರೆಗೆ ಈ ಕೆಳಗಿನ ಚಟುವಟಿಕೆಗಳನ್ನು ಪ್ರತಿಬಂಧಿಸಿ ಆಜ್ಞೆ ಹೊರಡಿಸಿದ್ದೇನೆ.
1. ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರಿ ತಿರುಗಾಡುವುದನ್ನು,
2. ಸಾರ್ವಜನಿಕ ಸಭೆ, ಮೆರವಣಿಗೆ ಮಾಡುವುದನ್ನು (ಶವ ಸಂಸ್ಕಾರಕ್ಕೆ, ಹೊಟೇಲ್‌ಗಳಿಗೆ, ಚಲನಚಿತ್ರ ಮಂದಿರಗಳಿಗೆ, ಧಾರ್ಮಿಕ ಮತ್ತು ಮದುವೆ ಮೆರವಣಿಗೆಗಳಿಗೆ ಈ ಆಜ್ಞೆಯು ಅನ್ವಯಿಸುವುದಿಲ್ಲಾ. 3. ಆಯುಧ, ಮಾರಕಾಸ್ತ್ರ, ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ತಿರುಗಾಡುವುದನ್ನು.
4. ಯಾವುದೇ ರೀತಿಯ ಫಟಾಕಿ/ಸಿಡಿಮದ್ದು ಸಿಡಿಸುವದನ್ನು
5. ಸರ್ಕಾರಿ ಬಸ್ಸು ಹಾಗೂ ಇತರೆ ವಾಹನಗಳಿಗೆ ಅಡೆತಡೆ ಉಂಟುಮಾಡುವುದನ್ನು.
ಈ ವಿಷಯವಾಗಿ ಮುಂದಿನ ಸೂಕ್ತ ಕ್ರಮವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಬೆಳಗಾವಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬೆಳಗಾವಿ ಇವರು ಕೈಗೊಳ್ಳುವದು.
ಈ ಆದೇಶವನ್ನು ನನ್ನ ರುಜು ಮತ್ತು ಮುದ್ರೆಯೊಂದಿಗೆ ದಿನಾಂಕ: 14.03.2022 ರಂದು ಜಾರಿ ಮಾಡಲಾಗಿದೆ.
ಆದೇಶದ ಪ್ರತಿ ಇಲ್ಲಿದೆ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ