*
ಪ್ರಗತಿವಾಹಿನಿ ಸುದ್ದಿ, *ಧರ್ಮಶಾಲಾ* : ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (95ರನ್, 104 ಎಸೆತ, 8 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ವೇಗಿ ಮೊಹಮದ್ ಶಮಿ (54ಕ್ಕೆ 5)ಮಾರಕ ಬೌಲಿಂಗ್ ನೆರವಿನಿಂದ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.
ಈ ಮೂಲಕ ಟೂರ್ನಿಯಲ್ಲಿ ಸತತ 5 ನೇ ಜಯ ದಾಖಲಿಸಿದ ರೋಹಿತ್ ಶರ್ಮ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮತ್ತೊಂದೆಡೆ ಸತತ 5 ನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಕಿವೀಸ್ ನಿರಾಸೆ ಕಂಡಿತು.
ಧರ್ಮಶಾಲಾದ ಎಚ್ಪಿಸಿಎ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ273 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ತಂಡ 48 ಓವರ್‌ಗಳಲ್ಲಿ 6 ವಿಕೆಟ್ಗೆ 274 ರನ್ ಗಳಿಸಿ ಜಯದ ನಗೆ ಬೀರಿತು.
2003ರ ನಂತರ ಏಕದಿನ ವಿಶ್ವಕಪ್ನಲ್ಲಿ ಕಿವೀಸ್ ಎದುರು ಭಾರತಕ್ಕೆ ದಕ್ಕಿದ ಮೊದಲ ಗೆಲುವು ಇದಾಗಿದೆ. ಆ ಬಳಿಕ 2007, 2016, 2021ರ ಟಿ20 ವಿಶ್ವಕಪ್ ಲೀಗ್ ಪಂದ್ಯ ಮತ್ತು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಕಿವೀಸ್ಗೆ ಭಾರತ ತಂಡ ಶರಣಾಗಿತ್ತು. 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಭಾರತ ಮುಗ್ಗರಿಸಿತ್ತು.
**ಸಂಕ್ಷಿಪ್ತ ಸ್ಕೋರ್:*
**ನ್ಯೂಜಿಲೆಂಡ್* : *50 ಓವರ್‌ಗಳಲ್ಲಿ 273* (ಡೆರಿಯಲ್ ಮಿಚೆಲ್ 130, ರಚಿನ್ ರವೀಂದ್ರ 75, ಮೊಹಮದ್ ಶಮಿ 54ಕ್ಕೆ 5, ಕುಲದೀಪ್ ಯಾದವ್ 73ಕ್ಕೆ 2), *ಭಾರತ* : *48 ಓವರ್‌ಗಳಲ್ಲಿ 6 ವಿಕೆಟ್ಗೆ 274* (ವಿರಾಟ್ ಕೊಹ್ಲಿ 95, ರೋಹಿತ್ ಶರ್ಮ,46, ಶುಭಮನ್ ಗಿಲ್ 26, ಕೆ.ಎಲ್.ರಾಹುಲ್ 27,
ಶ್ರೇಯಸ್ ಅಯ್ಯರ್ 33,
ರವೀಂದ್ರ ಜಡೇಜಾ 39*, ಲೂಕಿ ಫರ್ಗ್ಯುಸನ್ 63ಕ್ಕೆ 2
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ