ಪ್ರಗತಿವಾಹಿನಿ ಸುದ್ದಿ; ಸಿಕ್ಕಿಂ: ಸಿಕ್ಕಿಂ ಗಡಿಭಾಗದಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. 150 ಸೈನಿಕರು ಪರಸ್ಪರ ಮುಖಾಮುಖಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ.
ಸಿಕ್ಕಿಂನ ನಾಕು ಲಾ ಪಾಸ್ ಬಳಿ ಸಂಭವಿಸಿದೆ. ಈ ಗುಂಡಿನ ಕಾಳಗದಲ್ಲಿ ನಾಲ್ವರು ಭಾರತೀಯ ಸೈನಿಕರು ಮತ್ತು ಏಳು ಚೀನೀ ಸೈನಿಕರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಏಕಾಏಕಿ ಗಡಿಗೆ ನುಗ್ಗಿದ ಚೀನಿ ಸೈನಿಕರ ಗುಂಪು, ಭಾರತೀಯ ಸೈನಿಕರೊಂದಿಗೆ ವಿನಾಕಾರಣ ಜಗಳಕ್ಕಿಳಿದಿದ್ದಲ್ಲದೇ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೈನಿಕರು, ಚೀನಿ ಸೈನಿಕರನ್ನು ಹೊರದಬ್ಬಿದ್ದಾರೆ.
ಪರಸ್ಪರ ಕೈ ಕೈ ಮಿಲಾಯಿಸಿದ ಉಭಯ ದೇಶಗಳ ಸೈನಿಕರು, ಕಲ್ಲುತೂರಾಟವನ್ನೂ ನಡೆಸಿದ್ದಾರೆ ಎಂದು ಸೇನೆ ತಿಳಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ