*ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಹಡಗು; 8 ವಿಜ್ಞಾನಿಗಳು ಸೇರಿದಂತೆ ಹಲವರ ರಕ್ಷಣೆ*
ಪ್ರಗತಿವಾಹಿನಿ ಸುದ್ದಿ; ಕಾರವಾರ: ಅಲೆಗಳ ಅಬ್ಬರಕ್ಕೆ ಸಿಲುಕಿದ ಸಿಎಸ್ ಐಆರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಸಂಶೋಧನಾ ಹಡಗು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ಸಮುದರದಲ್ಲಿ ಸಿಲುಕಿಕೊಂಡಿದೆ.
ಎಂಜೀನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ಹಡಗಿನಲ್ಲಿದ್ದ 8 ವಿಜ್ಞಾನಿಗಳು ಸೇರಿದಂತೆ ಹಲವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಕಾರವಾರ ಸಮೀಪ ಸಮುದ್ರದಲ್ಲಿ ಆರ್ ವಿ ಸಿಂಧೂ ಸಾಧನಾ ಎಂಬ ಹಡಗು ಎಂಜಿನ್ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದೆ. ಹಡಗಿನಲ್ಲಿ ತೈಲ ಸೋರಿಕೆಯಾಗಿರಬಹುದು ಎಂದು ಅಧಿಕಾರಿಗಳು ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನಿಸಿದ್ದರು.
ಈ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಡಲ ತೀರದಿಂದ 20 ನಾಟಿಕಲ್ ಮೈಲಿಗಳಷ್ಟು ದೂರವಿದ್ದ ಹಡಗಿನ ಸಂಪರ್ಕ ಪಡೆದು ರಕ್ಷಣಾ ಕಾರಾಚರಣೆ ನಡೆಸಿದ್ದಾರೆ. ಹಡಗಿನಲ್ಲಿ 8 ಮಂದಿ ಹಿರಿಯ ವಿಜ್ಞಾನಿಗಳು, ಮೌಲ್ಯಯುತ ವೈಜ್ಞನಿಕ ಉಪಕರಣಗಳು ಸಂಶೋಧನಾ ಮಾಹಿತಿ ಸೇರಿದಂತೆ 36 ಜನರು ಇದ್ದರು. ಭಾರಿ ಮಳೆ, ಸಮುದ್ರದಲ್ಲಿ ಅಲೆಗಳ ಅಬ್ಬರ, ಅಪಾಯದ ಸ್ಥಿತಿಯಲ್ಲಿಯೂ ಇಂಡಿಯನ್ ಕೋಸ್ಟ್ ಗಾರ್ಡ್ ತಂಡ ಹಡಗನ್ನು ಸುರಕ್ಷಿತವಾಗಿ ಗೋವಾಕ್ಕೆ ಎಳೆದೊಯ್ದಿದೆ.
ಹಡಗಿನಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ