Belagavi NewsBelgaum NewsKannada NewsKarnataka News

ಭಾರತೀಯ ಸಂಸ್ಕೃತಿ, ಸಂಸ್ಕಾರ ವಿಶ್ವದಲ್ಲೇ ವಿಶಿಷ್ಟವಾದುದು – ಡಾ.ಅಲ್ಲಮಪ್ರಭು


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರ ವಿಶ್ವದಲ್ಲೇ ವಿಶಿಷ್ಟವಾದುದು, ಈ ಹಿನ್ನೆಲೆಯಲ್ಲಿ ಭಾರತಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಬೆಳಗಾವಿ ರುದ್ರಾಕ್ಷಿಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನುಡಿದರು.

ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ ೧೨ ನೇ ವರ್ಷದ ಜಿಲ್ಲಾಮಟ್ಟದ ದೇಶಭಕ್ತಿಗೀತೆಗಳ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರ ತ್ಯಾಗ ಬಲಿದಾನಗಳ ಫಲವಾಗಿ ಬಂದ ಈ ಸ್ವಾತಂತ್ರ್ಯ ಅಮೂಲ್ಯವಾದದ್ದು ಮುಂದಿನ ಪೀಳಿಗೆಗೆ ಇದರ ಅರಿವು ಮೂಡಿಸಿ ದೇಶಭಿಮಾನ ಮೂಡಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಈ ಹಿನ್ನೆಲೆಯಲ್ಲಿ ಭರತೇಶ ಶಿಕ್ಷಣ ಸಂಸ್ಥೆ ಮಾಡುತ್ತಿರುವ ಕಾರ್ಯ ಪ್ರಶಂಸಾರ್ಹ ಎಂದು ಅವರು ಹೇಳಿದರು.

ಅದ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಮಾತನಾಡಿ, ಉತ್ತಮ ಹವ್ಯಾಸಗಳಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಂಗೀತ ಎಲ್ಲ ವಿದ್ಯೆಗಳಲ್ಲಿ ಶ್ರೇಷ್ಠ. ಆದರಿಂದ ವಿದ್ಯಾರ್ಥಿಗಳು ಸಂಗೀತ ಹಾಗೂ ಇತರ ಉತ್ತಮ ಹವ್ಯಾಸಗಳನ್ನು ಬೆಳಸಿಕೊಂಡು ದೇಶದ ಪ್ರಗತಿಗೆ ಪೂರಕವಾಗಬೇಕು ಎಂದು ಕರೆಕೊಟ್ಟರು.
ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪುರೆ, ಸ್ವಾಮೀಜಿಯವರನ್ನು ಗೌರವಿಸಿ ಸತ್ಕರಿಸಿದರು. ಎ. ಎ. ಸನದಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಎಸ್. ಎನ್. ಅಕ್ಕಿ ವಂದಿಸಿದರು. ಕಾಂಚನ ಬೋಗಾರ ನಿರೂಪಿಸಿದರು. ಡಾ ಶ್ರೀರಂಗ ಜೋಶಿ , ಡಾ ಅರುಣ ದೇಸಾಯಿ , ಡಾ ಎಂ ಎನ್ ಸತ್ಯನರಾಯಣ , ಪ್ರತಿಭಾ ಕಳ್ಳಿಮಠ, ದೀಪಾ ಪದಕಿ, ಸ್ವಾತಿ ಹುದ್ದಾರ, ಯೋಗಿತಾ ಪಾಟೀಲ ಹಾಗೂ ಜ್ಯೋತಿ ಮಿರಜಕರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Home add -Advt

Related Articles

Back to top button