ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಪ್ರಗತಿ ವಾಹಿನಿ ಸುದ್ದಿ, ಟೊರೊಂಟೋ:
ಕೆನಡಾದ ಟೊರೊಂಟೋದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಟ್ರಕ್ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಹರಿಯಾಣ ಮೂಲದ 20 ವರ್ಷದ ಕಾರ್ತಿಕ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಟೊರೊಂಟೊದಲ್ಲಿ ಸೈಕಲ್‍ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಟ್ರಕ್ ಅಪ್ಪಳಿಸಿದೆ. ಬಳಿಕ ವಿದ್ಯಾರ್ಥಿ ಟ್ರಕ್ಕಿಗೆ ಸಿಲುಕಿಕೊಂಡಿದ್ದು ಟ್ರಕ್ ಆತನನ್ನು ದೂರದವರೆಗೆ ಎಳೆದೊಯ್ದಿದೆ.
ಕಾರ್ತಿಕ್ 2021ರಲ್ಲಿ ಅಧ್ಯಯನಕ್ಕಾಗಿ ಕೆನಡಾಕ್ಕೆ ಬಂದಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕಾರ್ತಿಕ್ ಅವರ ಹಠಾತ್ ಸಾವಿನಿಂದ ತೀವ್ರ ದುಖಃವಾಗಿದೆ. ಕಾರ್ತಿಕ್ ಅವರ ಕುಟುಂಬದವರು, ಸ್ನೇಹಿತರಿಗೆ ತೀವ್ರ ಸಂತಾಪ ಸೂಚಿಸುತ್ತೇವೆ ಎಂದು ಕಾಲೇಜಿನ ಆಡಳಿತ ಮಂಡಳಿ ಇ ಮೇಲ್ ಮೂಲಕ ತಿಳಿಸಿದೆ. ಕಾರ್ತಿಕ್ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಶೀಘ್ರದಲ್ಲಿ ಭಾರತಕ್ಕೆ ಕಳುಹಿಸಿಕೊಡುವುದಾಗಿ ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಸಂಸದೆ ಹಾಟ್ ಅವತಾರಕ್ಕೆ ಅವಕ್ಕಾದ ಜನ !

https://pragati.taskdun.com/west-bengal-tmc-mp-nusrath-jahan-hot-look-photo-viral-in-social-media/

Home add -Advt

Related Articles

Back to top button