Latest

ಶಿಕ್ಷಕನಿಂದಲೇ ವಿದ್ಯಾರ್ಥಿನಿಯರಿಗೆ ಕಿರುಕುಳ

ಪ್ರಗತಿವಾಹಿನಿ ಸುದ್ದಿ; ಜೈಪುರ: ಸರ್ಕಾರಿ ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ತನ್ನ ಜೊತೆ ಸೆಕ್ಸ್ ಮಾಡಿದರೆ ಮಾತ್ರ ಮಾರ್ಕ್ಸ್ ಕೊಡುವುದಾಗಿ ಹೇಳಿ ಬೆದರಿಸಿರುವ ಘಟನೆ ರಾಜಸ್ಥಾನದ ನಿಮ್ರಾದಲ್ಲಿ ನಡೆದಿದೆ.

ವಿದ್ಯಾರ್ಥಿನಿಯರ ದೂರಿನ ಮೇರೆಗೆ ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಯಾದವ್ (45) ಬಂಧಿತ ಆರೋಪಿ.

Home add -Advt

ಪರೀಕ್ಷೆಯಲ್ಲಿ ಉತ್ತಮ ಅಂಕಬೇಕೆಂದರೆ ತನ್ನ ಜೊತೆ ದೈಹಿಕ ಸಂಬಂಧ ಹೊಂದಬೇಕು ಎಂದು ವಿದ್ಯಾರ್ಥಿನಿಯರಿಗೆ ಶಿಕ್ಷಕ ಬೆದರಿಸುತ್ತಿದ್ದ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಮೇಲಧಿಕಾರಿಗಳಿಗೆ ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ. ಅಂತಿಮವಾಗಿ ಶಿಕ್ಷಕ ಪ್ರಕಾಶ್ ಯಾದವ್ ನನ್ನು ಬಂಧಿಸಲಾಗಿದೆ.

 

Related Articles

Back to top button