GamesKannada NewsKarnataka NewsLife StyleNationalSports

*ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತೀಯರ ಪದಕ ಬೇಟೆ*

ಪ್ರಗತಿವಾಹಿನಿ ಸುದ್ದಿ : ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಕ್ರೀಡಾಕೂಟದ ಆರಂಭಿಕ ದಿನಗಳಲ್ಲೇ ಭಾರತವು 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 

ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಸರ್ವೇಶ್ ಕುಶಾರೆ ಬೆಳ್ಳಿ ಪದಕ ಗೆದ್ದು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರೆ, ವೇಟ್‌ಲಿಪ್ಟರ್‌ಗಳು ಮೂರು ಪದಕಗಳನ್ನು ತಂದುಕೊಟ್ಟಿದ್ದಾರೆ.

ಪುರುಷರ ಹೈಜಂಪ್ ಫೈನಲ್‌ನಲ್ಲಿ ಭಾರತದ ರಾಷ್ಟ್ರೀಯ ದಾಖಲೆ ವೀರ ಸರ್ವೇಶ್ ಕುಶಾರೆ 2.25 ಮೀಟರ್ ಎತ್ತರ ಜಿಗಿಯುವ ಮೂಲಕ ಐತಿಹಾಸಿಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಕಾಮನ್‌ವೆಲ್ತ್ ಕ್ರೀಡಾಕೂಟದ ಹೈಜಂಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಬೆಳ್ಳಿ ಪದಕ ಇದಾಗಿದೆ. ಜಮೈಕಾದ ರೊಮೈನ್ ಬೆಕ್‌ಫೋರ್ಡ್ ಕೂಡ 2.25 ಮೀಟರ್ ಜಿಗಿದರಾದರೂ, ಕಡಿಮೆ ಪ್ರಯತ್ನಗಳಲ್ಲಿ ಗುರಿ ತಲುಪಿದ ಆಧಾರದ ಮೇಲೆ ಅವರಿಗೆ ಚಿನ್ನದ ಪದಕ ಒಲಿಯಿತು.

ಮತ್ತೊಂದೆಡೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಜ್ಞಾನೇಶ್ವರಿ ಯಾದವ್ ಒಟ್ಟು 199 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಪಡೆದರು. ಪುರುಷರ 79 ಕೆಜಿ ವಿಭಾಗದಲ್ಲಿ ವಲ್ಲೂರಿ ಅಜಯ್ ಬಾಬು 330 ಕೆಜಿ ಭಾರ ಎತ್ತುವ ಮೂಲಕ ಮತ್ತೊಂದು ಬೆಳ್ಳಿ ಪದಕವನ್ನು ದೇಶಕ್ಕೆ ತಂದುಕೊಟ್ಟರು. ಮಹಿಳೆಯರ 58 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಿಂದ್ಯಾರಾಣಿ ದೇವಿ 199 ಕೆಜಿ ಭಾರ ಎತ್ತಿ ಕಂಚಿನ ಪದಕಕ್ಕೆ ಭಾಜನರಾದರು. ಇದರೊಂದಿಗೆ ವೇಟ್‌ಲಿಫ್ಟಿಂಗ್ ಒಂದರಲ್ಲೇ ಭಾರತದ ಒಟ್ಟು ಪದಕಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

Home add -Advt

ಪ್ಯಾರಾ ಅಥ್ಲೆಟಿಕ್ಸ್‌ನಲ್ಲೂ ಭಾರತೀಯ ಸ್ಪರ್ಧಿಗಳು ಶ್ರೇಷ್ಠ ಸಾಧನೆ ಮೆರೆದಿದ್ದು ಮಹಿಳೆಯರ ಶಾರ್ಟ್‌ಪುಟ್ ಎಫ್-57 ವಿಭಾಗದಲ್ಲಿ ಶರ್ಮಿಳಾ ಧನಕರ್ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. ನಾಲ್ಕನೇ ದಿನದ ಸ್ಪರ್ಧೆಗಳ ಮುಕ್ತಾಯಕ್ಕೆ ಭಾರತವು ಅಥ್ಲೆಟಿಕ್ಸ್ ವೇಟ್‌ಲಿಫ್ಟಿಂಗ್ ಮತ್ತು ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಒಟ್ಟು ಐದು ಪದಕಗಳನ್ನು ತನ್ನದಾಗಿಸಿಕೊಂಡು ಯಶಸ್ವಿ ದಿನವನ್ನು ಪೂರ್ಣಗೊಳಿಸಿದೆ.

Related Articles

Back to top button