ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೋ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ಏರ್ ಬಸ್ ಯಾನ ಆರಂಭಿಸುವುದಾಗಿ ಘೋಷಿಸಿದೆ.
ಇದೇ ವೇಳೆ ಈ ಮಾರ್ಗದ ವಿಮಾನ ಸೇವೆಯ ಸಮಯದಲ್ಲೂ ಬದಲಾವಣೆ ಮಾಡಿದ್ದು, ಅಕ್ಟೋಬರ್ ನಿಂದ 29ರಿಂದ ಹುಬ್ಬಳ್ಳಿ-ಮುಂಬೈ ಮಧ್ಯೆ ಏರ್ ಬಸ್ ಎ320 ಸಂಚಾರ ಆರಂಭಿಸುವುದಾಗಿ ಹೇಳಿಕೊಂಡಿದೆ. ಸದ್ಯ ಹುಬ್ಬಳ್ಳಿ- ಮುಂಬೈ ಮಧ್ಯೆ 78 ಸೀಟುಗಳ ಎಟಿಆರ್ 72-600 ವಿಮಾನಗಳು ಸಂಚಾರ ನಡೆಸುತ್ತಿವೆ.
ಪ್ರಸ್ತುತ ಹುಬ್ಬಳ್ಳಿ ಹಾಗೂ ಮುಂಬೈ ಮಧ್ಯೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ಇದನ್ನು ಪರಿಗಣಿಸಿ ಇಂಡಿಗೊ ಸಂಸ್ಥೆ ಈ ನಿರ್ಧಾರ ತಳೆದಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ