ಇಂದಿರಾ ಕ್ಯಾಂಟಿನ್ ಅನ್ನ-ಸಾಂಬಾರ್ ರುಚಿ ಸವಿದ ಸಚಿವ ಯು.ಟಿ. ಖಾದರ್
ಪ್ರಗತಿವಾಹಿನಿ ಸುದ್ದಿ – ಕಲಬುರಗಿ : ಜಯದೇವ ಹೃದ್ರೋಗ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‍ನ ಮಾಸ್ಟರ್ ಕಿಚನ್‍ಗೆ ಭೇಟಿ ನೀಡಿದ ಅವರು ಮಹಾನಗರದ 7 ಇಂದಿರಾ ಕ್ಯಾಂಟಿನ್‍ಗಳಿಗೆ ಪೂರೈಕೆಯಾಗುವ ಅಹಾರ ಪದಾರ್ಥಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಸ್ವತ: ಅನ್ನ-ಸಾಂಬಾರ್‍ನ ರುಚಿ ಸವಿದು ಆಹಾರಗಳ ಗುಣಮಟ್ಟ ಪರೀಕ್ಷಿಸಿದರು.
ಆಹಾರ ಸಾಮಾಗ್ರಿ ಸಂಗ್ರಹಿರುವ ಕೋಣೆ ವೀಕ್ಷಿಸಿದ ಅವರು, ಪತ್ರಿಯೊಂದು ದಿನಸಿ ವಸ್ತುಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಅಕ್ಕಿ, ಬೇಳೆ, ರವೆ, ಬಟಾಣಿ, ಒಂದು ಟಿನ್ ಬಾಕ್ಸ್ ಎಣ್ಣೆ ಮುಂತಾದವುಗಳ ನೋಡಿದ್ದಲ್ಲದೆ, ಅವುಗಳ ಸ್ಯಾಂಪಲ್(ಮಾದರಿ) ತೆಗೆದುಕೊಂಡರು. ಈ ಆಹಾರ ಸಾಮಾಗ್ರಿಗಳ ಗುಣಮಟ್ಟ ತಿಳಿಯುವುದಕ್ಕಾಗಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿ ವರದಿ ತರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅಲ್ಲಿಯ ಅಡುಗೆ ಸಿಬ್ಬಂದಿಯ ಯೋಗ-ಕ್ಷೇಮ ವಿಚಾರಿಸಿದ ಅವರು, ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡುತ್ತೀರಾ ಎಂದು ವಿಚಾರಿಸಿದರು.
ನಂತರ ಸ್ವಸ್ತಿಕ್ ನಗರದಲ್ಲಿ ಅಮೃತ್ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ 90..50 ಲಕ್ಷ ರೂಪಾಯಿ ವೆಚ್ಚದ ಸಾರ್ವಜನಿಕ ಉದ್ಯಾನವನ ವೀಕ್ಷಿಸಿದರು. ಸಾರ್ವಜನಿಕರಿಗೆ ಅನುಕೂಲವಾಗಲು ಪ್ರತಿನಿತ್ಯ ಸ್ವಚ್ಛತೆ ಕಾಪಾಡಲು ಕ್ರಮವಹಿಸಬೇಕೆಂದು ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ, ಕಪನೂರ ಒಳಚರಂಡಿ ಶುದ್ಧೀಕರಣ ಯೋಜನೆ (ಘಟಕ)ಕ್ಕೆ ಭೇಟಿ ನೀಡಿದ ಸಚಿವರು, ಇಂಜಿನಿಯರ್‍ಗಳಿಂದ ಮಾಹಿತಿ ಪಡೆದುಕೊಂಡರು. ಈ ಘಟಕದ ನಿರ್ಮಾಣದ ಅಂದಾಜು ವೆಚ್ಚ 1765.99 ಲಕ್ಷ ರೂಪಾಯಿಗಳಾಗಿದ್ದು, ಒಟ್ಟು ವೆಚ್ಚ 1908.40 ಲಕ್ಷ ರೂಪಾಯಿಗಳಾಗಿದೆ. 25 ಎಂಎಲ್‍ಡಿ ಸಾಮಥ್ರ್ಯದ ಈ ಶುದ್ಧೀಕರಣ ಘಟಕದಿಂದ ಶುದ್ಧೀಕರಣಗೊಂಡ ನೀರನ್ನು ಕಾಲುವೆ ಹರಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೇಜ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಬಿ. ಫೌಜಿಯಾ ತರನ್ನಮ್, ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರಾದ ದಿನೇಶ್ ಕುಮಾರ್, ಮಹಾನಗರಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರಾದ ಶಿವನಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.///
Web Title : Indira Canteen Rice-sambar tasted minister U.T.Khader – Pragati Vahini
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ