Belagavi NewsBelgaum NewsKannada NewsKarnataka NewsPolitics

*ಜಿಲ್ಲೆಯ ಹದಿನೆಂಟು ಗ್ರಾಮ ಪಂಚಾಯತಿಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಿಸರ ರಕ್ಷಣೆ ಹಾಗೂ ಪರಿಸರದ ಕುರಿತಾಗಿ ಕಾಳಜಿ ಮೂಡಿಸುವಂತಹ ಬಹುಮುಖ್ಯ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿರುವ ಜಿಲ್ಲೆಯ ವಿಧಾನಸಭಾ ವ್ಯಾಪ್ತಿಗೆ ಒಳಪಡುವ 18 ಗ್ರಾಮ ಪಂಚಾಯತಿಗಳಿಗೆ ಮಂಗಳವಾರ (ನ.4) ಸಿ.ಪಿ.ಎಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪರಿಸರ ರಕ್ಷಣೆ ಕುರಿತಾದ ವಿಶೇಷ ಕಾಳಜಿಯಿಂದ ಕಾರ್ಯ ನಿರ್ವಹಿಸಿರುವ ಬೆಳಗಾವಿಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 18 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸದಸ್ಯರುಗಳಿಗೆ ವೇದಿಕೆ ಮೇಲೆ ಸತ್ತರಿಸಿದರು.

ಗ್ರಾಮ ಪಂಚಾಯತಿಗಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳು, ಇತರೆ ಕಟ್ಟಡಗಳು ಮತ್ತು ಗೈರಾನದಂತಹ ಸರ್ಕಾರಿ ಜಾಗೆಗಳು ಮತ್ತು ಸಾರ್ವಜನಿಕ ರಸ್ತೆ ಅದು ಜಿಲ್ಲಾ ಮುಖ್ಯ ರಸ್ತೆಯಾಗಿರಬಹುದು, ರಾಷ್ಟ್ರೀಯ ಹೆದ್ದಾರಿಯಾಗಿರಬಹುದು ಮತ್ತು ಗ್ರಾಮೀಣ ರಸ್ತೆಗಳಾಗಿರಬಹುದು ರಸ್ತೆಯ ಪಕ್ಕದಲ್ಲಿ ಸಸಿ ನಡತಕ್ಕಂತ ಕೆಲಸಾವಾಗಿರಬಹುದು ಅದರ ಜೊತೆಗೆ ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡುವಂತಹ ಕೆಲಸವನ್ನು ಗ್ರಾಮ ಪಂಚಾಯತಿಗಳು ಮಾಡುವದರಿಂದ ಈ ಎಲ್ಲಾ ಗ್ರಾಮ ಪಂಚಾಯತಿಗಳ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ, ಶಾಸಕ ಆಸೀಫ್ (ರಾಜು) ಸೇಶ್ ಅವರು ಆಯ್ದ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮಮದಾಪುರ, ಗುಜನಾಳ ದಾಮಣಿ(ಎಸ್), ಉಚಗಾಂವ, ಸಾಗರ (ನಂಜನಕೊಡಲ ಗ್ರಾ.ಪಂ), ತುರ್ಕರ ಶೀಗಿಹಳ್ಳಿ, ಜೋಡಕುರಳಿ, ಯರಝರ್ವಿ, ದಾಸ್ತಿಕೊಪ್ಪ, ಸುನ್ನಾಳ, ಸವಸುದ್ದಿ, ಸವದತ್ತಿ, ಸೌಂದಲಗಾ.. ಶಿವಾಪುರ(ಹ), ಮಂಗಸೂಳಿ, ದರೂರ, ಮನಗುತ್ತಿ, ಬೆಲ್ಲದ ಬಾಗೇವಾಡಿ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ನೀಡಿದರು.

Home add -Advt

Related Articles

Back to top button