Latest

ರಾಜೀನಾಮೆ ವಿಚಾರ ಕೇಳುತ್ತಿದ್ದಂತೆ ಫುಲ್ ಗರಂ ಆದ ಸಚಿವ ಭೈರತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಸಚಿವ ಭೈರತಿ ಬಸವರಾಜ್ ಗರಂ ಆದ ಘಟನೆ ನಡೆದಿದೆ.

ವಿಧಾನಸೌಧದಲ್ಲಿ ಸುದ್ದಿಗಾರರು, ಸಿಎಂ ರಾಜೀನಾಮೆ ನೀಡುವ ಸುಳಿವು ನೀಡಿರುವ ಬಗ್ಗೆ ಪ್ರಶ್ನಿಸುತ್ತಿದ್ದಂತೆ, ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮಾಧ್ಯಮದವರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ರಾಜೀನಾಮೆ ಬಗ್ಗೆ ಗೊತ್ತಿಲ್ಲ, ಸಚಿವ ಸ್ಥಾನದ ಬಗ್ಗೆ ನಮಗ್ಯಾಕೆ ಭಯ? ಅಧಿಕಾರಕ್ಕಾಗಿಯೇ ಇರ್ತಿವಾ ಎಂದು ಗುಡುಗಿದರು.

ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿದರೆ ರಾಜ್ಯ ಸಚಿವ ಸಂಪುಟಕ್ಕೂ ಮೇಜರ್ ಸರ್ಜರಿಯಾಗುವ ಸಾಧ್ಯತೆ ದಟ್ಟವಾಗಿದ್ದು, ವಲಸಿಗ ಸಚಿವರಿಗೂ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿ ಆರಂಭವಾಗಿದೆ. ಈ ನಡುವೆ ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಸೇರಿದತೆ ಹಲವರು ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ್ದರು.

ರಾಜೀನಾಮೆ ಸುಳಿವು ನೀಡಿದ ಸಿಎಂ ಯಡಿಯೂರಪ್ಪ (ಆಡಿಯೋ ಸಹಿತ ವರದಿ)

Home add -Advt

ಸ್ವಾಮೀಜಿಗಳೇ, ನಿಮಗೆ ನಿಮ್ಮ ನಿಜವಾದ ಕರ್ತವ್ಯದ ಬಗ್ಗೆ ನೆನಪು ಮಾಡುತ್ತಾ….

Related Articles

Back to top button