ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯಾವುದೇ ಅಡುಗೆಗೆ ರುಚಿ ನೀಡುತ್ತದೆ ಇಂಗು. ಚಿಟಿಕೆ ಇಂಗು ಆರೋಗ್ಯಕ್ಕೂ ತುಂಬಾ ಉಪಯೋಗಕಾರಿ. ಇಂಗು ಇದ್ದರೆ ಮಂಗನೂ ಅಡುಗೆ ಮಾಡುತ್ತದೆ ಎಂಬ ಮಾತಿದೆ. ಇಂಗು ಅಡುಗೆಗೆ ಬಹಳ ಮುಖ್ಯ ಪದಾರ್ಥ. ಇಂಗು ಬರಿ ಬಾಯಲ್ಲಿ ತಿನ್ನಲು ಅಸಾಧ್ಯ. ಇಂಗು ಕಹಿ ಹಾಗಾಗಿ ಕೆಲವೊಮ್ಮೆ ಇಂಗು ತಿಂದ ಮಂಗ ಎಂಬ ಸಾಲನ್ನು ಬಳಸುತ್ತಾರೆ.
ಇಂಗಿನ ಬಳಕೆ ಸಾವಿರಾರು ವರ್ಷಗಳ ಹಿಂದಿನಿಂದಲೇ ಆಯುರ್ವೇದದಲ್ಲಿದೆ. ಇಂಗಿನ ಪ್ರಯೋಜನಗಳು ಇಂದು ತಿಳಿಯಿರಿ.
ಇಂಗು ಕ್ಯಾನ್ಸರ್ ತಡೆಗಟ್ಟುತ್ತದೆ. ದೇಹದ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆಯಾದರೆ ಇಂಗಿನಲ್ಲಿರುವ ವಿಶೇಷ ಗುಣ ಈ ಜೀವಕೋಶಗಳನ್ನು ಇನ್ನಷ್ಟು ವೃದ್ದಿಗೊಳ್ಳದಂತೆ ತಡೆಯುತ್ತದೆ.
ಇಂಗು ಉಸಿರಾಟದ ತೊಂದರೆಯನ್ನು ನಿವಾರಣೆ ಮಾಡಲು ಸಹಾಯಕ. ಅಸ್ತಮಾ ಹಾಗೂ ನಾಯಿಕೆಮ್ಮು ಮೊದಲಾದ ರೋಗಗಳಿಗೆ ಬಿಸಿನೀರಿಗೆ ಕೊಂಚ ಇಂಗು, ಜೇನು ಮತ್ತು ಹಸಿಶುಂಠಿ ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.
ಮೈಗ್ರೇನ್ ನೋವಿಗೆ ಬಿಸಿನೀರಿಗೆ ಕೊಂಚ ಇಂಗು ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಹೊಟ್ಟೆಯುಬ್ಬರಿಕೆ ಎದುರಾದರೆ ತಕ್ಷಣ ಇಂಗು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಕುಡಿದರೆ ತಕ್ಷಣ ಪರಿಹಾರ ದೊರಕುತ್ತದೆ.
ಕರ್ನಾಟಕ ಬ್ಯಾಂಕ್ ಚೀಫ್ ಫೈನಾನ್ಸಿಯಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ