ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಗುರುವಾರ ಇನಿ – ದನಿ ವರ್ಚುವಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಮಕ್ಕಳೇ ನಿರ್ವಹಿಸಿದರು. ಇನಿ-ದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಿಯದರ್ಶಿನಿ ಗುರವ, ಬದುಕಿನಲ್ಲಿ ನಾವು ತೆಗೆದುಕೊಳ್ಳುವ ಒಂದು ಕ್ಷಣದ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸಬಹುದು. ಪ್ರಸ್ತುತ ಈ ಪ್ರಪಂಚ ಇರುವ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕು. ಇಲ್ಲದಿದ್ದಲ್ಲಿ ನಾವು ನಮ್ಮ ವಿದ್ಯಾರ್ಥಿತನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ನಮ್ಮನ್ನು ನಾವು ಗುರುತಿಸಿಕೊಳ್ಳಲು ಬೇಕಾದಷ್ಟು ಅವಕಾಶಗಳಿವೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಸಾಧಕರ ಬದುಕನ್ನು ನೋಡಿದರೆ ನಮಗೆ ಅರ್ಥವಾಗುತ್ತದೆ. ಅವರೆಲ್ಲರೂ ಪರಿಶ್ರಮದಿಂದ ಸಾಧನೆ ಗೈದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಐಶ್ವರ್ಯ ನೇಸರ್ಗಿ (ವಿದ್ಯಾ ಮಂದಿರ ಪ್ರೌಢಶಾಲೆ ನೇಸರ್ಗಿ), ದ್ರುವ ಧನ್ನ (ಸಂತ ಮೀರಾ ಪ್ರೌಢ ಶಾಲೆ ಬೆಳಗಾವಿ), ಅನುಶ್ಕಾ ಜಾಧವ (ಆದರ್ಶ ಬಾಲಿಕಾ ಪ್ರೌಢಶಾಲೆ ಬೆಳಗಾವಿ) ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಪ್ರಸ್ತುತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಯೋಮಯ ಸ್ಥಿತಿಯಲ್ಲಿದೆ. ಆದರೂ ಕೂಡ ನಾವು ಈ ಆಧುನಿಕ ಶೈಲಿಯ ಕಲಿಕೆಗೆ ಹೊಂದಿಕೊಳ್ಳಬೇಕು. ಪ್ರಪಂಚದ ವ್ಯವಸ್ಥೆಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾಗಿದೆ ಎಂದು ಅತಿಥಿಗಳಾಗಿ ಆಗಮಿಸಿದ್ದ ಮಕ್ಕಳು ಒಟ್ಟಾಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಸಂಪೂರ್ಣವಾಗಿ ಮಕ್ಕಳಿಂದಲೇ ನಡೆಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿನಿ ರಚನಾ ಪೂಜಾರಿ ಸ್ವಾಗತ ಮಾಡಿದರು. ವಿದ್ಯಾರ್ಥಿನಿ ಎಸ್ ತನುಶಾ ವಂದಿಸಿದರು. ವಿದ್ಯಾರ್ಥಿಗಳಾದ ಭೂಷಣ ಭಟ್ಟ, ಶ್ರೀನಿಧಿ ಕಂಚನಾಳೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ಭಾವಗೀತೆ,ಜಾನಪದಗೀತೆ, ಭಾಷಣ, ಏಕಪತ್ರಾಭಿನಯ, ಭರತನಾಟ್ಯ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.

ಪ್ರೀತಮ್ ಯಾಜಿ , ಸ್ವಾತಿ ಸುಣದೋಳಿ, ನಿತ್ಯಾ ಮುತ್ತಣ್ಣವರ, ಸೃಷ್ಟಿ ಹಾರೋಗೇರಿ, ಸಂಯುಕ್ತಾ ಗೋಖಲೆ, ನೇಹಾ ಸನದಿ, ಪ್ರಣೀತಾ ಮರಕಟ್ಟಿ ಹೀಗೆ ಇನ್ನು ಹಲವಾರು ಮಕ್ಕಳು ಭಾಗವಹಿಸಿದ್ದರು.
ಸಂಪೂರ್ಣ ಕಾರ್ಯಕ್ರಮ ಸಾಮಾಜಿ ಜಾಲತಾಣದಲ್ಲಿ ನೇರಪ್ರಸಾರವಾಗಿದ್ದು ಹಲವರಿಂದ ಮೆಚ್ಚುಗೆಯನ್ನು ಪಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ೧೦,೦೦೦ ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು.
ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ನೇರಪ್ರಸಾರವನ್ನು ವೀಕ್ಷಿಸಿದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ