Kannada NewsKarnataka NewsNationalPolitics

*ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಅನ್ಯಾಯ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಹೆಚ್ಚಳ ಮಾಡಿದ್ದ ಮೀಸಲಾತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡಿರುವುದನ್ನು ಖಂಡಿಸಿ ಬಿಜೆಪಿ ವತಿಯಿಂದ ರಾಜ್ಯದ ಜನತೆಗೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ ಹೇಳಿದರು. 

ತಮ್ಮ ನಿವಾಸದಲ್ಲಿ ನಡೆದ ಬಿಜೆಪಿಯ ಎಸ್ಸಿ ಎಸ್ಟಿ ಮುಖಂಡರ ಜೊತೆಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಮತ್ತು ಒಬಿಸಿ ಜನಾಂಗಕ್ಕೆ ಬಹಳ ದೊಡ್ಡ ಅನ್ಯಾಯ ಮಾಡುತ್ತಿದೆ ಅಹಿಂದ ಹೆಸರಲ್ಲಿ ರಾಜಕಾರಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಯಾವ ವರ್ಗದಿಂದ ಬೆಂಬಲ ಪಡೆದಿದ್ದಾರೆ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಎಸ್ಸಿ ಎಸ್ಟಿ ಒಳ ಮೀಸಲಾತಿ ಗೊಂದಲದ ಬಗ್ಗೆ ಸಂವಿಧಾನ ಪೀಠ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದೆ ಅದನ್ನು ತೆಲಂಗಾಣ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳು ಜಾರಿ ಮಾಡಿವೆ. ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಕಾಂಗ್ರೆಸ್ ಗೆ ಹಾಗೂ ಅಲ್ಲಿನ ದಲಿತ ನಾಯಕರಿಗೆ ಅಸಕ್ತಿ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ಅವಧಿಯಲ್ಲಿ ಹೆಚ್ಚಳ

Home add -Advt

ಮೀಸಲಾತಿ ಹೆಚ್ಚಳದ ಕುರಿತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಗಮೋಹನ್ ದಾಸ್ ವರದಿ ಬಂದಿದೆ. ನಾನು ಸಿಎಂ ಆಗಿದ್ದಾಗ ಎಸ್ಸಿ ಸಮುದಾಯಕ್ಕೆ ಶೇ 15% ರಿಂದ 17% ಹಾಗೂ  ಎಸ್ಟಿ ಸಮುದಾಯಕ್ಕೆ ಶೇ 3% ರಿಂದ ಶೇ 7% ಮೀಸಲಾತಿ ಹೆಚ್ಚಿಗೆ ಮಾಡಿದ್ದೇನೆ. ಇದರಿಂದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸುಮಾರು ನಾಲ್ಕು ಸಾವಿರ ಎಂಜನೀಯರಿಂಗ್ ಹಾಗೂ ಸುಮಾರು ನಾಲ್ಕು ನೂರು ವೈದ್ಯಕೀಯ ಸೀಟುಗಳು ಹೆಚ್ಚಿಗೆ ಲಭ್ಯವಾಗಿವೆ. ಈ ಆದೇಶ ಜಾರಿಯಾಗಿ ನಾಲ್ಜು ವರ್ಷ ಆಗಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರಿಂ ಕೋರ್ಟ್ ಆದೇಶ, ನಾಗಮೋಹನ ದಾಸ್ ವರದಿ, ಜೆ.ಸಿ.ಮಾಧುಸ್ವಾಮಿ ಸಮಿತಿ ವರದಿ ಯಾವುದನ್ನೂ ಜಾರಿ ಮಾಡದೇ ಗೊಂದಲ ಸೃಷ್ಟಿ ಮಾಡಿದ್ದಾರೆ. ಈಗ ಕೋರ್ಟ್ ನಲ್ಲಿ ಶೇ 15% ರಷ್ಟು ಮೀಸಲಾತಿ ಜಾರಿ ಮಾಡುತ್ತೇವೆ ಎಂದು ತಾವೇ ಬರೆದು ಕೊಟ್ಟಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ  ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ 17% ಮತ್ತು 7% ಅಂತ ಕಾನೂನು ಮಾಡಿದ್ದಾರೆ. ಇನ್ನೊಂದು ಕಡೆ  ಶೇ 15% ಮತ್ತು ಶೇ 3% ರಷ್ಟು ಮೀಸಲಾತಿ  ಜಾರಿ ಮಾಡಿತ್ತಾರೆ. ಇದನ್ನು ದಲಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಪಕ್ಷದ ನಾಯಕರು ತೀರ್ಮಾನ ಮಾಡಿದ್ದಾರೆ‌

ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಪ್ರತಿಪಕ್ಷದ ನಾಯಕರು, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಎಲ್ಲರೂ ಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. 

ತಪ್ಪು ಮುಚ್ಚಿಕೊಳ್ಳಲು ಒತ್ತಡ

ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಶೆಡ್ಯೂಲ್  9 ಕ್ಕೆ ಸೇರಿಸುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಶೆಡ್ಯೂಲ್ 9 ನಲ್ಲಿ ಸೇರಿಸಿದರೂ  ಅದನ್ನು  ಪ್ರಶ್ನೆ ಮಾಡಲು ಅವಕಾಶ ಇದೆ. ರಾಜ್ಯ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಶೆಡ್ಯೂಲ್ 9 ಗೆ ಸೇರಿಸುವಂತೆ ಒತ್ತಡ ಹೇರುವ ಹುನ್ನಾರ ಮಾಡಿದ್ದಾರೆ. ಇದರ ವಿರುದ್ದ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ಸಚಿವ ಎನ್. ಮಹೇಶ್ ಹಾಜರಿದ್ದರು.

Related Articles

Back to top button