Cancer Hospital 2
Beereshwara 36
LaxmiTai 5

ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಈ ಎರಡು ಮೂರ್ತಿಗಳನ್ನು ಅಳವಡಿಸಿ: ರೈಲ್ವೆ ಸಚಿವರಿಗೆ ಅನಿಲ ಬೆನಕೆ ಮನವಿ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ರೈಲು ನಿಲ್ದಾಣದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿಯನ್ನು ಅಳವಡಿಸುವಂತೆ ಮಾಜಿ ಶಾಸಕ ಅನಿಲ ಬೆನಕೆ ಅವರು ರೇಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು.‌

ಬೆಂಗಳೂರಿನಲ್ಲಿ ಇಂದು ಮನವಿ ಮಾಡಿ ಮಾತನಾಡಿದ ಅನಿಲ ಬೆನಕೆ ಅವರು, ಬೆಳಗಾವಿ ರೈಲು ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿಯನ್ನು ಅಳವಡಿಸಲು ನಿರಂತರ ಬೇಡಿಕೆ ಇದೆ. ಬೆಳಗಾವಿಯು ಸಾಂಪ್ರದಾಯಿಕ ನಗರಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿವ ಭಕ್ತರು ಇದ್ದಾರೆ. ಹಾಗೂ ಛತ್ರಪತಿ ಶ್ರೀ ಶಿವಾಜಿ ಮಹಾರಾಜರೊಂದಿಗೆ ಭಾವನಾತ್ಮಕವ ಬಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೇ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಬೆಳಗಾವಿಗೆ ಭೇಟಿ ನೀಡಿದ್ದರು. ಅವರ ಆದರ್ಶಗಳು ಎಲ್ಲರಿಗೂ ಸ್ಫೂರ್ತಿ. 

Emergency Service

ಮರಾಠಾ ಲೈಟ್ ಇನ್‌ಫ್ರಂಟ್ರಿ ರೆಜಿಮೇಂಟಲ್ ಸೆಂಟರ್ ಕ್ಯಾಂಟೋನ್ಮಂಟ್ ಕ್ಯಾಂಪ್ ಪ್ರದೇಶದಲ್ಲಿದೆ. ಅಲ್ಲದೆ, ಬೆಳಗಾವಿ ರೈಲು ನಿಲ್ದಾಣ ಕೂಡ ಕ್ಯಾಂಟೋನ್ಮಂಟ್ ಪ್ರದೇಶದಲ್ಲಿದೆ. ಎರಡೂ ಮೂರ್ತಿಗಳನ್ನು ಅಳವಡಿಸಲು ವಿವಿಧ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿವೆ. ಎರಡೂ ವಿಗ್ರಹಗಳನ್ನು ರೇಲ್ವೆ ನಿಲ್ದಾಣದ ಉಗ್ರಾಣ ಕೊಠಡಿಯಲ್ಲಿ ಇರಿಸಲಾಗಿದ್ದು. ಸಮಾಜದಲ್ಲಿ ತಪ್ಪು ಸಂದೇಶಗಳು ಮತ್ತು ವದಂತಿಗಳನ್ನು ಹರಡಲಾಗುತ್ತಿದೆ ಎಂದು ತಿಳಿಸಿದರು.

ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬೆಳಗಾವಿ ರೈಲು ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮೂರ್ತಿಯನ್ನು ಕೂಡಲೇ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅನಿಲ ಬೆನಕೆ ಅವರು ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದರು.

Bottom Add3
Bottom Ad 2