Belagavi NewsBelgaum NewsKannada NewsKarnataka News

ವಿಮೆ ಪಾವತಿ: ಸೋಮವಾರವೇ ಕೊನೆಯ ದಿನ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮುಂಗಾರು-2023ನೇ ಹಂಗಾಮಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿಮೆಣಸಿನಕಾಯಿ ಮತ್ತು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಆರಿಶಿಣ, ಆಲೂಗಡ್ಡೆ (ಮಳೆಯಾಶ್ರಿತ), ಟೊಮ್ಯಾಟೋ, ಈರುಳ್ಳಿ (ನೀರಾವರಿ) ಹಾಗೂ ಈರುಳ್ಳಿ (ಮಳೆಯಾಶ್ರಿತ) ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಪಾವತಿಸಲು ತಿಳಿಸಲಾಗಿದೆ.

ದಿನಾಂಕ ವಿಸ್ತರಣೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ರೈತರು ಕೂಡಲೆ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ ಅಧಿಸೂಚಿತ ಬೆಳೆಗಳ ಮಾಹಿತಿ ಪಡೆದು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳು. ಗಾಮ್ ಒನ್ ಕೇಂದ್ರಗಳು ಅಥವಾ ಬ್ಯಾಂಕ್ ಶಾಖೆಗಳಲ್ಲಿ ವಿಮೆ ಪಾವತಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಬೆಳಗಾವಿ 0831-2431559. ಗೋಕಾಕ್ 08332-229382. ಖಾನಾಪೂರ: 08336-223387 ಸವದತ್ತಿ. 08330-222082, ಅಥಣಿ : 08289-285099 ರಾಮದುರ್ಗ 08335-241512. den 08331-225049, 08333-265915 ಚಿಕ್ಕೋಡಿ: 08338-274943, ಬೈಲಹೊಂಗಲ : 08288-233758 ದೂರವಾಣಿ ಸಂಖ್ಯೆಗಳಿಗೆ ಹಾಗೂ ಹೋಬಳಿ/ತಾಲ್ಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್, ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button