Kannada NewsKarnataka NewsLatest

*12 ಅಡಿ ಉದ್ದದ ಕಾಳಿಂಗ ಸರ್ಪ‌ ಸೆರೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಹೊಲದ ಬಳಿ ಒಣಗಿದ ಮರದ ಪೊಟರೆಯೊಂದರಲ್ಲಿ ವಾಸವಾಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸೆರೆ ಹಿಡುದು ಕಾಡಿಗೆ ಬಿಟ್ಟರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬಿಳಕಿಯ ಬಸವನಗುಂಡಿ ಸಮೀಪ ನಡೆದಿದೆ.

Home add -Advt

ಕಳೆದ 15 ದಿನಗಳಿಂದ ಮರ ಪೊಟರೆಯೊಂದರಲ್ಲಿ ಈ ಕಾಳಿಂಗ ಸರ್ಪ ವಾಸವಾಗಿತ್ತು. ಕಾಳಿಂಗ ಸರ್ಪದಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಾಗಿತ್ತು. ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಶಿರಸಿಯ ಉರಗಪ್ರೇಮಿ ಸೈಯ್ಯದ್ ಅವರನ್ನು ಸ್ಥಳಕ್ಕೆ ಕರೆಸಿ, ಕಾಳಿಂಗ ಸರ್ಪವನ್ನ ಹಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ‌ ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಿದ್ದು, ಭಾರೀ ಗಾತ್ರವನ್ನ ಹೊಂದಿದೆ. ಆರ್‌ಎಫ್‌ಒಗಳಾದ ಅಮಿತ್ ಚೌಹಾಣ, ಶಿಲ್ಪಾ ನಾಯ್ಕ, ಡಿಆರ್‌ಎಫ್‌ಒ ಮಂಜುನಾಥ ಆಗೇರ, ಅರಣ್ಯ ರಕ್ಷಕರಾದ ಗಣೇಶ ಪವಾರ, ವನ್ಯಜೀವಿ ಸಂಶೋಧನಾ ತಂಡದ ರವಿ, ಅಜಿಂಕ್ಯಾ ಕಾರ್ಯಾಚರಣೆಯಲ್ಲಿ ಇದ್ದರು.

Related Articles

Back to top button