Latest

ಚಿತ್ರೋತ್ಸವದಲ್ಲಿ ದಿಕ್ಕಾರದ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ದಿಕ್ಕಾರದ ಘೋಷಣೆ ಮೊಳಗಿಸಿದ ಘಟನೆ ನಡೆದಿದೆ.

ಚಾಮರಾಜಪೇಟೆ ಅಂಬರೀಶ್‌ ಚಿತ್ರಮಂದಿರದಲ್ಲಿ ಮಧ್ಯಾಹ್ನ ಕೊಡವ ಭಾಷೆಯ ದೇವರ ಕಾಡು ಪ್ರದರ್ಶನ ಮುಗಿದಾಗ, ಇದು ಕೊಡವ ಸಂಸ್ಕೃತಿಗೆ ಅಪಚಾರ ಮಾಡುವ ಸಿನಿಮಾ ಎಂದು ಪ್ರಕಾಶ್ ಕಾರ್ಯಪ್ಪ ಆಕ್ರೋಶ ವ್ಯಕ್ತಪಡಿಸಿ, ದಿಕ್ಕಾರದ ಘೋಷಣೆ ಕೂಗಿದರು.

ಸಿನೆಮಾ ಶೀರ್ಷಿಕೆಗೂ ಇದಕ್ಕೂ ಸಂಬಂಧವೇ ಇಲ್ಲ. ಕೊಡಗಿನ ಆಚಾರ ವಿಚಾರಗಳು ಉತ್ಕೃಷ್ಟವಾಗಿದ್ದು, ಅದನ್ನು ತಳಮಟ್ಟಕ್ಕೆ ಇಳಿಸಿ ಚಿತ್ರೀಕರಣ ಮಾಡಿರುವುದು ಕೊಡವರಿಗೆ ಮಾಡಿದ ಅಪಮಾನ. ಈ ಸಿನೆಮಾ ಅಂತಾರಾಷ್ಟ್ರೀಯ ಚಿತ್ರೋತ್ಸವ ತನಕ ಹೇಗೆ ಬಂತು? ಯಾರು ಆಯ್ಕೆ ಮಾಡಿದರು ಎಂದು ನಿರ್ದೇಕರು, ಕಲಾವಿದರ ಸಮ್ಮುಖದಲ್ಲಿ ಪ್ರಶ್ನಿಸಿದರು.

ಇದೊಂದು ಆರ್ಟ್ ಸಿನಿಮಾ. ಆ ದೃಷ್ಟಿಯಿಂದ ನೋಡಿ ಎಂದು ನಿರ್ದೇಶಕರು ಮನವಿ ಮಾಡಿದರೂ, ಅವರ ಆಕ್ರೋಶ ತಣಿಯಲಿಲ್ಲ. ಕೊಡವರಿಗೆ ಮತ್ತು ಕೊಡವ ಸಂಸ್ಕೃತಿಗೆ ತದ್ವಿರುದ್ಧವಾಗಿರುವ ಸಿನಿಮಾ ತೆಗೆದು ಕೊಡವರ ಗೌರವ ಕಳೆಯಬೇಡಿ ಎಂದು ಮನವಿ ಮಾಡಿದರು.

Home add -Advt

ವಿಚಾರ ವಾಗ್ವಾದ ರೂಪ ಪಡೆದ ಹಿನ್ನೆಲೆಯಲ್ಲಿ ಸಂವಾದಕ್ಕೆ ತೆರೆ ಎಳೆಯಲಾಯಿತು.

ಚಿತ್ರೋತ್ಸವದಲ್ಲಿ ದಿಕ್ಕಾರ ಕೂಗಿದ್ದು ಬೇಸರವಾಗಿದೆ ಎಂದು ಚಿತ್ರದ ಹಿರಿಯ ಕಲಾವಿದೆ ಅಸಮಾಧಾನ ವ್ಯಕ್ತಪಡಿಸಿದರು.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಗೆ ಸಂಕಷ್ಟ

Related Articles

Back to top button