Latest

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾಗೆ ಸಂಕಷ್ಟ

ಪ್ರಗತಿವಾಹಿನಿ ಸುದ್ದಿ; ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.

ಮೊರಾದಾಬಾದ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸೋನಾಕ್ಷಿ ಸಿನ್ಹಾ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಅದಕ್ಕಾಗಿ ಸೋನಾಕ್ಷಿ ಅವರಿಗೆ 37 ಲಕ್ಷ ರೂಪಾಯಿ ಹಣ ಪಾವತಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಸೋನಾಕ್ಷಿ ಗೈರಾಗಿದ್ದರು. ಇದೀಗ ಈ ಪ್ರಕರಣ ಸಂಬಂಧ ನ್ಯಾಯಾಲಯ ಸೋನಾಕ್ಷಿ ಅವರಿಗೆ ವಾರಂಟ್ ಜಾರಿ ಮಾಡಿದೆ.

Home add -Advt

ಮೊರಾದಾಬಾದ್ ನಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಸೋನಾಕ್ಷಿಸಿನ್ಹಾ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನಟಿ ಸೋನಾಕ್ಷಿ ಸಿನ್ಹಾ ಈವೆಂಟ್ ಗೆ ಆಗಮಿಸಲು 37 ಲಕ್ಷ ಹಣ ಪಡೆದಿದ್ದರು. ಆದರೆ ಕೊನೇ ಘಳಿಗೆಯಲ್ಲಿ ಸೋನಾಕ್ಷಿ ಈವೆಂಟ್ ಗೆ ಬಂದಿರಲಿಲ್ಲ. ಈವೆಂಟ್ ಆಯೋಜಕರಾದ ಪ್ರಮೋದ್ ಶರ್ಮಾ, ಹಣ ಮರುಪಾವತಿ ಮಾಡುವಂತೆ ಕೇಳಿದ್ದರು. ಆದರೆ ಸೋನಾಕ್ಷಿ ಸಿನ್ಹಾ ಮ್ಯಾನೇಜರ್ ಒಪ್ಪಿರಲಿಲ್ಲ. ಸೋನಾಕ್ಷಿ ಸಿನ್ಹಾ ಅವರಿಗೆ ಈ ಬಗ್ಗೆ ತಿಳಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಈ ಹಿನ್ನೆಲೆಯಲ್ಲಿ ಈವೆಂಟ್ ಆಯೋಜಕರಾದ ಪ್ರಮೋದ್ ಶರ್ಮಾ, ಮೊರಾದಾಬಾದ್ ಕಟ್ಟರ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆಗೆ ಸೋನಾಕ್ಷಿ ಗೈರಾಗಿದ್ದರಿಂದ ಸೋನಾಕ್ಷಿ ವಿರುದ್ಧ ವಾರಂಟ್ ಜಾರಿಯಾಗಿದೆ.
ಅಮೆರಿಕಾ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯನ್ನು ಅರೆಸ್ಟ್ ಮಾಡಿದ ರಷ್ಯಾ

Related Articles

Back to top button