Kannada NewsKarnataka NewsLatest

​ಶಾಸಕರ ನಿಧಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ​ದೇವಸ್ಥಾನ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು

 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -​  ಬೆಳಗಾವಿ ಗ್ರಾಮೀಣ ​ಕ್ಷೇತ್ರದ​ ಬಿಜಗರಣಿ ಗ್ರಾಮದಲ್ಲಿ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ​ ​ಶಾಸಕರ ನಿಧಿಯ​ ವತಿಯಿಂದ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ​ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ​ ಚಾಲನೆಯನ್ನು ನೀ​ಡಿದರು​.

​ ಜೊತೆಗೆ, ಗ್ರಾಮದ ಶ್ರೀ ಲಕ್ಷ್ಮೀ ಮಂದಿರದ ಅಭಿವೃದ್ಧಿಯ ಸಲುವಾಗಿ ಶಾಸಕರ ಅನುದಾನದ​ ವತಿಯಿಂದ 7 ಲಕ್ಷ ರೂ,ಗಳ ಚೆಕ್ ನ್ನು ದೇವಸ್ಥಾನದ ಕಮೀಟಿಯವರಿಗೆ ಹಸ್ತಾಂತರಿಸಿ​ದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ​ ಕದಂ, ಮನೋಹರ ಬೆಳಗಾಂವ್ಕರ್, ಯಲ್ಲಪ್ಪ ಬೆಳಗಾಂವ್ಕರ್,  ಪುಂಡಲೀಕ ಜಾಧವ್, ಮನೋಹರ ಪಾಟೀಲ, ನಾಮದೇವ ಮೋರೆ, ಮಹೇಶ ಪಾಟೀಲ, ಗ್ರಾಮದ ಜನರು ಹಾಗೂ ​ಕಾರ್ಯಕರ್ತರು ಉಪಸ್ಥಿತರಿದ್ದರು.
​
 ನಂತರ, ಬೆಳವಟ್ಟಿ ಗ್ರಾಮದ ರಸ್ತೆಗಳ ಅಭಿವೃದ್ಧಿಯ ಸಲುವಾಗಿ ಶಾಸಕರ ಅನುದಾನದ  ವತಿಯಿಂದ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಸಹ ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ​ ಕದಂ, ಮನೋಹರ ಬೆಳಗಾಂವ್ಕರ್, ನಾರಾಯಣ ನಾಲವಡೆ, ಮಾರು​ತಿ​​ ಕಾಂಬಳೆ, ಲಕ್ಷ್ಮಣ ಪಾಟೀಲ, ಜ್ಞಾನೇಶ್ವರ ಸುತಾರ, ರಾಮಲಿಂಗ ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button