Latest

ತೀವ್ರತೆ ಪಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯಲು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ   ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದಿರುವ ನಿರ್ಣಾಯಕ ಹೋರಾಟ ಹಲವು ಗಣ್ಯರ ಬೆಂಬಲ,  ಭಾಗವಹಿಸುವಿಕೆಯೊಂದಿಗೆ ತೀವ್ರತೆ ಪಡೆದಿದೆ.

ಪಂಚಸೇನಾ ಅಧ್ಯಕ್ಷ ಡಾ. ಬಿ.ಎಸ್. ಪಾಟೀಲ, ನಗರ ಅಧ್ಯಕ್ಷ ಶಿವಪುತ್ರ ಮಲ್ಲೇವಾಡ, ಮಲ್ಲನಗೌಡ ಪಾಟೀಲ, ಪುತ್ತುರಾಜ ತುಮ್ಮರಗುದ್ದಿ, ನಗರಾಧ್ಯಕ್ಷ ಶಿವಪುತ್ರ ಮೋಹನಗೌಡ, ಕೊಡಗು, ಶಿವನಗೌಡ ಪಾಟೀಲ, ಶಿಕಾರಿಪುರ, ನಂದೀಶ ಗುರುಮನೆ, ರೋಣದ ಮಲ್ಲನಗೌಡ , ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ ಮೂಗಿ , ವೀರಭದ್ರ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದಾರೆ.

ನವಲಗುಂದ ನಗರ ಅಧ್ಯಕ್ಷ  ಮಲ್ಲಪ್ಪ, ಡಾ ಮೂದ್ನುರು , ಶಿರೂರು ಶಂಕರಗೌಡ , ನಾಗನಗೌಡ, ಹಿರಿಯ ನ್ಯಾಯವಾದಿ ಗಂಗಾಧರ , ಯಲಬುರ್ಗಾ ಮಾಜಿ ಶಾಸಕ ಶಿವಶರಣಗೌಡ  ಧಾರವಾಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ  ಗುರುಮಠ, ಮುಂಡರಗಿ ತಾಲೂಕಿನ ಕೊಟ್ರಗೌಡ ಮತ್ತಿತರರು ಸಹ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದಾರೆ.

ಮೀಸಲಾತಿ ಚಳವಳಿಯ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ವಿಜಯಪುರ ಶಾಸಕ ಬಸವನಗೌಡಪಾಟೀಲ್, ಯತ್ನಾಳ್ ಮಾಜಿ ಶಾಸಕರು ಮತ್ತು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ. ಮಾಜಿ ಸಚಿವ ಹಾಗು ಸ್ವಾಗತ ಸಮಿತಿ ಉಪಾಧ್ಯಕ್ಷ ವಿನಯ ಕುಲಕರ್ಣಿ, ಮಾಜಿ ಶಾಸಕ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಶಿವಶಂಕರ, ಗೌಡ ಲಿಂಗಾಯತ ಸಮಾಜದ ರಾಜ್ಯ ಸಂಚಾಲಕ  ಅಮ್ಮನಪುರ ಮಲ್ಲೇಶ್, ಮಲೆಗೌಡ ಲಿಂಗಾಯತ ಸಮಾಜದ ರಾಜ್ಯ ಸಂಚಾಲಕ ಮಲ್ಲಿಕಾರ್ಜುನಗೌಡ ಹಕ್ರೆ, ದೀಕ್ಷಾ ಲಿಂಗಾಯತ ರಾಜ್ಯ ಸಂಚಾಲಕ ಶರಣು ಪಪ್ಪ ಮುಂತಾದವರು ಸಹ ಶ್ರೀಗಳಿಗೆ ಬೆಂಬಲವಾಗಿ ನಿಂತು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ತಾಯಿ ಅಣೆ ಮಾಡಿ ಪಂಚಮಸಾಲಿಗಳಿಗೆ 6 ಬಾರಿ ಮಾತು ತಪ್ಪಿರುವ ಸಿಎಂ ಬೊಮ್ಮಾಯಿಯವರ ವಿಳಂಬ ನೀತಿ ಖಂಡಿಸಿ ಹಾಗೂ ಸರಕಾರ ಶೀಘ್ರವೇ ಅಂತಿಮ ವರದಿ ಪಡೆದು , 2ಎ ಮೀಸಲಾತಿ ಅನುಷ್ಠಾನಗೊಳಿಸುವಂತೆ ಅಗ್ರಹಿಸಿ ಮಾಡು ಇಲ್ಲವೇ  ಮಡಿ ಎಂಬ ಘೋಷ ವಾಕ್ಯದೊಂದಿಗೆ ಜನವರಿ 14ರ ಮಕರ ಸಂಕ್ರಾಂತಿಯಂದು ಅರಂಭಗೊಂಡಿರುವ ಧರಣಿ ಸತ್ಯಾಗ್ರಹ ಪ್ರತಿ ದಿನ ಬೆಳಿಗ್ಗೆ 10 -30 ರಿಂದ ಸಂಜೆ 6-30 ರವರೆಗೆ ನಡೆಯುತ್ತಿದೆ.

ಸೋದರತ್ವ ಭಾವನೆಯಿಂದ ನಡೆದರೆ ಜೀವನ ಪಾವನ: ಚನ್ನರಾಜ ಹಟ್ಟಿಹೊಳಿ

https://pragati.taskdun.com/sarva-dharma-spirituality-conference-held-at-arudha-mutt-chikmunavalli/

20ಕ್ಕೂ ಹೆಚ್ಚು ಕುರಿಗಳ ಸಾವು; ರಾತ್ರಿ ದಾಳಿ ನಡೆಸಿದ್ಯಾರು?

https://pragati.taskdun.com/death-of-more-than-20-sheep-who-attacked-at-night/

ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ 21 ತಿಂಗಳ ನಿಷೇಧ

https://pragati.taskdun.com/gymnast-deepa-karmakar-banned-for-21-months/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button