ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಚ್ ಅಯ್ ವಿ ಸೋಂಕಿತರಿಗೆ ಆಶಾಕಿರಣವಾದ ಆಶ್ರಯ ಫೌಂಡೇಶನ್ ಬೆಳಗಾವಿ ವತಿಯಿಂದ ಹಿಂಡಾಲ್ಕೋ ಕಮ್ಯುನಿಟಿ ಹಾಲ್ ನಲ್ಲಿ ಅಂತರ್ ರಾಜ್ಯಮಟ್ಟದ ವಧು-ವರರ ಸಮಾವೇಶ ಜೂನ್ 30 ರಂದು ಯಶಸ್ವಿಯಾಗಿ ನಡೆದಿದೆ.
ಈ ಸಮಾವೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ವಧು-ವರರು ಭಾಗವಹಿಸಿದ್ದರು. ತಮ್ಮ ಭಾವಿ ಜೀವನಕ್ಕೆ ವಧು ಮತ್ತು ವರರನ್ನು ಆಯ್ಕೆ ಮಾಡಿಕೊಳ್ಳಲು ವಿಶಾಲವಾಗಿ ಅವರಿಗೆಲ್ಲರಿಗೂ ವ್ಯವಸ್ಥೆ ಮಾಡಲಾಗಿತ್ತು.
ಆಶ್ರಯ ಫೌಂಡೇಶನ್ ಮೊದಲ ಬಾರಿಗೆ ಸಿಎಸ್ಆರ್ ಇನಿಷಿಯೇಟಿವ್ ಆಪ್ ರೈಟ್ಸ್ ಲಿಮಿಟೆಡ್, ಕರ್ನಾಟಕ ಏಡ್ಸ್ ಪ್ರಿವೆನಷನ್ ಸೊಸೈಟಿ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರೋಧಕ ಘಟಕ ಬೆಳಗಾವಿ, ಹಿಂಡಾಲ್ಕೋ ಇಂಡಸ್ಟ್ರಿ ಲಿಮಿಟೆಡ್ ಇವರೆಲ್ಲರ ಸಹಯೋಗದೊಂದಿಗೆ. ಅತ್ಯಂತ ಯಶಸ್ವಿಯಾಗಿ ವಧು ವರರ ಸಮಾವೇಶವನ್ನು ನಡೆಸಿ, ಅವರ ಭಾವಿ ಬದುಕಿಗೆ ನೆರವಾಗುವಂತಹ ಕಾರ್ಯವನ್ನು ಮಾಡಲಾಯಿತು.
ಈ ಕಾರ್ಯಕ್ರಮದ ಆಯೋಜನೆಯ ನೇತೃತ್ವವನ್ನು ವಹಿಸಿದ ಆಶ್ರಯ ಫೌಂಡೇಶನ ಮುಖ್ಯಸ್ಥರಾದ ನಾಗರತ್ನ ಅವರು ಕಾರ್ಯಕ್ರಮದ ರೂಪರೇಷೆಗಳ ಕುರಿತು ಪ್ರತಿಯೊಬ್ಬರ ಬದುಕನ್ನು ಕಟ್ಟಿಕೊಳ್ಳುವ ರೀತಿ ಮತ್ತು ಆತ್ಮ ಪ್ರೇರೇಪಣೆ ತುಂಬುವಂತಹ ಕೆಲಸದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರವಿ ಕಿತ್ತೂರ, ಹಿರಿಯ ಆಪ್ತ ಸಮಾಲೋಚಕರು ಜಿಲ್ಲಾ ಆಸ್ಪತ್ರೆ, ವಿಜಯಪುರ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಆಶ್ರಯ ಸಂಸ್ಥಾಪಕರಾದ ಪ್ರಮೀಳ ಕಾದ್ರೊಳ್ಳಿ ನಡೆಸಿಕೊಟ್ಟರು. ಈ ಕಾರ್ಯಕ್ರಮದ ಉದ್ಘಾಟನೆ ಲಕ್ಷ್ಮಣ್ ತಪಶಿ ಸಿಎಸ್ಆರ್ ಇನಿಶಿಯೇಟಿವ್ ಆಫ್ ರೈಟ್ಸ್ ಲಿಮಿಟೆಡ್, ಭಾರತ್ ಮಾತೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವದರ ಮುಖಾಂತರ ಹಾಗೂ ಗಿಡಕ್ಕೆ ನೀರುನಿಸುವ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಮಯೂರ್ ಕೃಷ್ಣ, ಹೆಚ್ ಆರ್ ಹೆಡ್ ಹಿಂಡಾಲ್ಕೋ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರತ್ನಾ ರಾಮಗೌಡ ಆಶ್ರಯ ಫೌಂಡೇಶನ್ ಬೆಳಗಾವಿ, ಅತಿಥಿಗಳಾಗಿ ಡಾ. ತುಕ್ಕಾರ್ ಮುಖ್ಯ ವೈದ್ಯಾಧಿಕಾರಿಗಳು,
ಡಾಕ್ಟರ್ ವಿನೋದ ಭಾವಡೇಕರ್ ಮೆಡಿಕಲ್ ಆಫೀಸರ್ ಎ ಆರ್ ಟಿ ಕೇಂದ್ರ ಬಿಮ್ಸ್ ಆಸ್ಪತ್ರೆ ಬೆಳಗಾವಿ, ಜಾಗಿರ್ದಾರ್ ಮೇಲ್ವಿಚಾರಕರು ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿಗಳು ಸೇರಿದಂತೆ ರಾಜಶ್ರೀ ಎಲ್ ಸವದಿ. ಎಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಮೀಳಾ ಕಾದ್ರೊಳ್ಳಿ ಸಂಸ್ಥಾಪಕರು ಆಶ್ರಯ ಫೌಂಡೇಶನ್, ಸಲಹಾ ಸಮಿತಿ ಸದಸ್ಯರಾದ ಓಂ ಪ್ರಕಾಶ್ ನಾಯಕ, ನ್ಯಾಯವಾದಿಗಳು ರೂಪಾಲಿ ಕುನ್ನೆ, ಶಕುಂತಲಾ ಕಿನ್ನವರ್, ಅಶ್ವಿನಿ ನಡುಗಟ್ಟಿ, ಗೌರಿ ಒಳ್ಕರ್, ಸುಭಾಷ್ ಒಲ್ಕರ್, ಮಿಲಿ ಬಾತ್ಕಂಡೆ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ