Belagavi NewsBelgaum NewsKannada NewsKarnataka NewsLatest

*ಮನೆಗಳುವು ಪ್ರಕರಣ: ಇಬ್ಬರು ಅಂತರಾಜ್ಯ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತಿಚಿಗೆ ಬೈಲಹೊಂಗಲ ಶಹರದಲ್ಲಿ ಮತ್ತು ನೇಸರಗಿಯಲ್ಲಿ ಜರುಗಿದ ಸರಣಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಪೊಲೀಸ್ ಅಧೀಕ್ಷಕ ಡಾ॥ ಭೀಮಾಶಂಕರ ಎಸ್. ಗುಳೇದ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಂ. ವೇಣುಗೋಪಾಲ ಹಾಗೂ ಆರ್ ಬಿ ಬಸರಗಿ ಮತ್ತು ರವಿ ಡಿ ನಾಯ್ಕ ಡಿಎಸ್‌ಪಿ ಬೈಲಹೊಂಗಲರವರ ಮಾರ್ಗದರ್ಶನದಲ್ಲಿ ಪಿ ವಿ ಸಾಲಿಮಠ ಪಿಐ ಬೈಲಹೊಂಗಲ ರವರ ನೇತೃತ್ವದಲ್ಲಿ ಅಂತರಾಜ್ಯ ಕಳ್ಳರ ಬಂಧನಕ್ಕೆ ವಿಶೇಶ ತಂಡ ರಚಿಸಲಾಗಿತ್ತು. ಈ ತಂಡವು ವೈಜ್ಞಾನಿಕ ತನಿಖಾ ಸಾಧನಗಳನ್ನು ಬಳಸಿಕೊಂಡು ಮಹಾರಾಷ್ಟ್ರ ರಾಜ್ಯದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ದೀಪಕ ಸುರೇಶ ಪವಾರ್ (22) ಹಾಗೂ ರಾಹುಲ ಗಂಗಾಧರ ಜಾಧವ (21) ಬಂಧಿತ ಆರೋಪಿಗಳು. ಇಬ್ಬರು ಮಹಾರಾಷ್ಟ್ರದ ಕರತ ಮಂಗ್ರೂಲ ಜೋಪಡಪಟ್ಟಿ ಮೂಲದವರು

ಬಂಧಿತರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ನೇಸರಗಿ, ಹುಕ್ಕೇರಿ ಮತ್ತು ಸಂಕೇಶ್ವರ ಠಾಣಾ ವ್ಯಾಪ್ತಿಯಲ್ಲಿ 10 ಕಳ್ಳತನದ ಪ್ರಕರಣಗಳಲ್ಲಿ ಭಗಿಯಾಗಿದ್ದು, 15 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.

ಅಂತರಾಜ್ಯ ಕಳ್ಳರನ್ನು ಬಂಧಿಸುವ ಕಾರ್ಯಾಚಾರಣೆಯಲ್ಲಿ ಯಶಸ್ವಿಯಾದ ಬೈಲಹೊಂಗಲ, ನೇಸರಗಿ ಪೊಲೀಸರು ಹಾಗೂ ಬೆಳಗಾವಿ ಟೇಕ್ನಿಕಲ್ ವಿಭಾಗದ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.


Related Articles

Back to top button