*ಬದುಕಿನ ಆವಿಷ್ಕಾರಗಳಿಗೆ ಆತ್ಮಸ್ಥೈರ್ಯವಿರಬೇಕು : ಪ್ರೊ.ಸಿ.ಎಮ್ ತ್ಯಾಗರಾಜ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬದುಕಿನ ಆವಿಷ್ಕಾರಗಳಿಗೆ ಆತ್ಮಸ್ಥೈರ್ಯವಿರಬೇಕು ಕಠಿಣ ಪರಿಶ್ರಮದಿಂದ ನಿರಂತರ ಅಭ್ಯಾಸ ಕಾರ್ಯಪರತೆಯಿಂದ ಯಶಸ್ಸುಗಳಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ ಎಮ್ ತ್ಯಾಗರಾಜ ನುಡಿದರು.
ಶುಕ್ರವಾರ ನಗರದ ಕೆ ಎಲ್ ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಸಾಧಕರೆಲ್ಲರು ತಮ್ಮ ಪರಿಶ್ರಮದಿಂದ ಸಾಧಿಸಿ ಚಿರಪರಿಚಿತರಾದವರು ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರೀತಿಸಬೇಕು, ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೋಳ್ಳಬೇಕು. ಗುರಿಗಾಗಿ ನಿರಂತರ ಶ್ರಮಿಸಬೇಕು ವಿದ್ಯಾರ್ಥಿಗಳು ಜೀವನದ ಪ್ರತಿಕ್ಷಣವನ್ನು ಆನಂದಿಸಬೇಕು ಹಾಗೂ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕೆಂದು ತಿಳಿಸಿದರು.
ತಂತ್ರಜ್ಞಾನದ ವಿಜೃಂಭನೆಯಲ್ಲಿ ಮನುಕುಲ ಅಪಾಯದ ಅಂಚಿಗೆ ಸಿಲುಕುತ್ತಿದೆ, ವೇಗದ ಸ್ಫರ್ಧೆ ನಿರ್ಮಾಣವಾಗುತ್ತಿದೆ ಆ ವೇಗದ ಸ್ಫರ್ಧೆಗೆ ನಾವು ತಯಾರಾಗಬೇಕು ಮಾನವನ ಬದುಕಿಗೆ ಹಲವು ಸವಾಲುಗಳು ಎದುರಾಗುತ್ತಿದ್ದು ಆ ಸವಾಲುಗಳನ್ನು ನಾವು ಎದುರಿಸಬೇಕು. ಅದಕ್ಕೆ ಅಗತ್ಯವಾದ ತಂತ್ರಜ್ಞಾನ ಬಳಕೆ, ಪುಸ್ತಕ ಪ್ರೀತಿ, ಸಮಾಜ ಪ್ರೇಮ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್ ಎಸ್ ಮೇಲಿನಮನಿ ಶಿಕ್ಷಕರಿಗೆ ಗೌರವ ಬರುವುದು ವಿದ್ಯಾರ್ಥಿಗಳು ತನಗಿಂತ ಎತ್ತರಕ್ಕೆ ಬೆಳದು ಸಾಧನೆ ಮಾಡಿದಾಗ. ಅವರ ಈ ಸಾಧನೆ ನಿರಂತರವಾಗಿರಲಿ ಎಂದು ತಿಳಿಸಿದರು.
ಸ್ಫೂರ್ತಿ ಹಲಕಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ವಿ ಪಿ ಹಿರೇಮಠ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ನಿಕಿತಾ ಬೆದರೆ ವಂದಿಸಿದರು, ಸಿದ್ದನಗೌಡ ಪಾಟೀಲ ನಿರೂಪಿಸಿದರು.
ದೈಹಿಕ ನಿರ್ದೇಶಕ ಡಾ.ಸಿ ರಾಮಾ ರಾವ, ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಜಿ ಎನ್ ಶೀಲಿ, ಡಾ.ರಾಘವೇಂದ್ರ ಹಜಗೋಳಕರ ವಿನಾಯಕ ವರುಟೆ, ಲಕ್ಷ್ಮೀ ಶಿವಣ್ಣವರ ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ