Kannada NewsKarnataka News
ಬೆಳಗಾವಿ: ಇಬ್ಬರು ಯುವಕರ ಮರ್ಡರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಹೊರವಲಯದಲ್ಲಿರುವ ಸಿಂದೊಳ್ಳಿಯಲ್ಲಿ ಇಬ್ಬರು ಯುವಕರನ್ನು ಮಾರಣಾಂತಿಕ ಹಲ್ಲೆ ಗೈದು ಕೊಲೆ ಮಾಡಲಾಗಿದೆ.
ವ್ಯವಹಾರಿಕ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಘಟನೆಯಲ್ಲಿ ಬಸವರಾಜ (23) ಎನ್ನುವ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಗಿರೀಶ್ ಎನ್ನುವ ಮತ್ತೋರ್ವ ಯುವಕ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ರಾತ್ರಿ ಕ್ರಿಕೆಟ್ ಆಡಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತರು ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಯುವಕಾಂಗ್ರೆಸ್ ನಿಂದ ಸೋಮವಾರ ಸುವರ್ಣವಿಧಾನಸೌಧ ಮುತ್ತಿಗೆ
https://pragati.taskdun.com/suvarnavidhana-soudha-siege-by-yuva-congress/




