*ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ*

ಯಳ್ಳೂರು ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಕ್ತದಾನವು ಮಹಾನ್ ಸೇವೆಯಾಗಿದೆ. ನಾವು ನೀಡುವ ರಕ್ತವು ಇನ್ನೊಬ್ಬರ ಜೀವ ಉಳಿಸುವ ಅಮೂಲ್ಯ ಕೊಡುಗೆಯಾಗುತ್ತದೆ. ರಕ್ತದ ಅವಶ್ಯಕತೆ ಇರುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೂ ಸಮಯಕ್ಕೆ ಸರಿಯಾಗಿ ರಕ್ತ ದೊರೆಯುವಂತೆ ಪ್ರತಿಯೊಬ್ಬ ಅರ್ಹ ನಾಗರಿಕರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋದನಾ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಎನ್. ಹೇಳಿದರು.
ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋದನಾ ಕೇಂದ್ರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ದಾದಿ ಡಾ. ಪ್ರಕಾಶಮಣಿ ಅವರ ೧೯ನೇ ಪುಣ್ಯಸ್ಮರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಶಿಬಿರ ಆಯೋಜಿಸುವಲ್ಲಿ ಬ್ರಹ್ಮಕುಮಾರಿ ಸಂಸ್ಥೆ ವಹಿಸಿರುವ ಕಾಳಜಿಯನ್ನು ಶ್ಲಾಘಿಸಿದ ಅವರು, ಶಿಬಿರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಈ ಆಸ್ಪತ್ರೆಯಲ್ಲಿ ಲಭ್ಯವಿರುವ ಸುಧಾರಿತ ವೈದ್ಯಕೀಯ ಸೇವೆಗಳ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚೆಗೆ ಆರಂಭಗೊಂಡಿರುವ ಪರಿವರ್ತನ ಪುನರ್ವಸತಿ ಮತ್ತು ವ್ಯಸನಮುಕ್ತಿ ಘಟಕದ ಬಗ್ಗೆಯೂ ಪ್ರಸ್ತಾಪಿಸಿದರು. ಅಗತ್ಯವಿರುವವರಿಗೆ ಸಮಗ್ರ ಪುನರ್ವಸತಿ ಹಾಗೂ ಬೆಂಬಲ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದೆ, ಇದರ ಸದುಪಯೋಗ ಸಾರ್ವಜನಿಕರು ಪಡೆದುಕೋಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಯೋಗಿನಿ ಬ್ರಹ್ಮಕುಮಾರಿ ವಿದ್ಯಾ, ಆಸ್ಪತ್ರೆ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಶ್ರೀ ನವೀನ್ ಎನ್. ಅವರಿಗೆ ಶಿಬಿರ ಆಯೋಜಿಸಲು ನೀಡಿದ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಬ್ರಹ್ಮಕುಮಾರಿ ಸಂಸ್ಥೆಯ ಉದ್ದೇಶಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ವಿವರಿಸಿದ ಅವರು, ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ಸೇವಾ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ರಕ್ತ ಭಂಡಾರ ವಿಭಾಗದ ಮುಖ್ಯಸ್ಥ ಡಾ. ಅಶೋಕ ಅಲತಗಿ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ವಿವರಿಸಿದರು. ಅಪಘಾತ, ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸಾ ಸಂದರ್ಭಗಳು ಸೇರಿದಂತೆ ವಿವಿಧ ವೈದ್ಯಕೀಯ ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಹೀಗಾಗಿ ರಕ್ತದಾನವು ಹಲವರ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ ಎಂದು ತಿಳಿಸಿದರು. ರಕ್ತದಾನ ಮಾಡಿದ ಎಲ್ಲ ದಾನಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ರಾಜಯೋಗಿನಿ ಬ್ರಹ್ಮಕುಮಾರಿ ಮೀನಾಕ್ಷಿ (ಶಹಾಪುರ ಸೇವಾ ಕೇಂದ್ರದ ಉಸ್ತುವಾರಿ) ಅವರು ಮಾತನಾಡಿ, ರಕ್ತದಾನದ ಮಹತ್ವವನ್ನು ವಿವರಿಸಿದರು ಹಾಗೂ ಇಂತಹ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಒಟ್ಟು ೨೧ ಮಂದಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಜೀವನ ಜೋಶಿ, ಸಿಬ್ಬಂದಿ ಮಹಾದೇವ ವಾಲಿಶೆಟ್ಟಿ, ಭಾಗ್ಯನಗರದ ಸೇವಾ ಕೇಂದ್ರದ ಉಸ್ತುವಾರಿ ರಾಜಯೋಗಿನಿ ಬ್ರಹ್ಮಕುಮಾರಿ ಶೀತಲ್, ಬ್ರಹ್ಮಕುಮಾರಿ ಭಾರತಿ, ವಿಜಯಾ ಕುಲಕರ್ಣಿ, ಬ್ರಹ್ಮಕುಮಾರ ಕಾಶಿನಾಥ್, ಬ್ರಹ್ಮಕುಮಾರ ಶ್ರೀಕಾಂತ್ ಸೇರಿದಂತೆ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
Blood Donation Camp at KLE Centenary Charitable Hospital, Yellur Road, Belagavi
“Blood donation is a great service. The blood we donate becomes a valuable contribution towards saving another person’s life. Every eligible citizen should voluntarily donate blood so that anyone in need of blood can receive it at the right time,” said Mr. Navin N., Chief Operating Officer, KLE Centenary Charitable Hospital & MRC, Yellur Road, Belagavi.
He was speaking after inaugurating a blood donation camp organized at KLE Centenary Charitable Hospital & MRC, Yellur Road, Belagavi, on the occasion of the 19th death anniversary of Rajyogini Dadi Dr. Prakashmani of Prajapita Brahma Kumaris Ishwariya Vishwa Vidyalaya.
Appreciating the efforts of the Brahma Kumaris in organizing the blood donation camp, Mr. Navin N. expressed gratitude to everyone who supported the initiative. He also highlighted the advanced medical services available at the hospital and spoke about the recently started ‘Parivartan’ Rehabilitation and De-addiction Unit, established to provide comprehensive rehabilitation and support services to those in need.
Rajyogini Brahma Kumari Vidya, Incharge, Angol Seva Kendra, speaking on the occasion, expressed gratitude to the hospital and Mr. Navin N. for extending their support in organizing the camp. She explained the objectives and social service activities of the Brahma Kumaris and called upon everyone to participate in activities that promote health, mental well-being and social responsibility.
Dr. Ashok Alatgi, HOD, Blood Centre, explained the importance of voluntary blood donation. He said that blood is required in various medical situations, including accidents, surgeries and emergencies, and therefore blood donation is a vital service that can save many lives. He congratulated all the donors and appealed to more people to come forward voluntarily to donate blood.
Rajyogini Brahma Kumari Minaxi, Incharge, Shahapur Seva Kendra, also spoke on the occasion and highlighted the importance of blood donation. She appealed to everyone to actively participate in such socially beneficial service activities.
A total of 21 people donated blood at the camp.
Dr. Jeevan Joshi(Medical Officer, Blood Centre), Mr. Mahadev Walishetty (Incharge, Blood centre) Rajyogini Brahma Kumari Sheetal, Incharge, Bhagya Nagar Seva Kendra; Brahma Kumari Bharti; Vijaya Kulkarni; Brahma Kumar Kashinath; Brahma Kumar Shrikant, along with members of the Brahma Kumaris and hospital staff, were present on the occasion.
यळ्ळूर रोडवरील केएलई शताब्दी चॅरिटेबल हॉस्पिटलमध्ये रक्तदान शिबिर
“रक्तदान ही एक महान सेवा आहे. आपण केलेले रक्तदान दुसऱ्या व्यक्तीचे प्राण वाचविण्यासाठी अमूल्य योगदान ठरते. रक्ताची गरज असताना प्रत्येक गरजू व्यक्तीला वेळेवर रक्त उपलब्ध व्हावे, यासाठी प्रत्येक पात्र नागरिकाने स्वयंस्फूर्तीने रक्तदान करावे,” असे केएलई शताब्दी चॅरिटेबल हॉस्पिटल अँड मेडिकल रिसर्च सेंटर, यळ्ळूर रोड, बेळगावीचे मुख्य कार्यकारी अधिकारी श्री. नवीन एन. यांनी सांगितले.
यळ्ळूर रोड, बेळगावी येथील केएलई शताब्दी चॅरिटेबल हॉस्पिटल अँड मेडिकल रिसर्च सेंटर येथे प्रजापिता ब्रह्माकुमारी ईश्वरीय विश्वविद्यालयाच्या राजयोगिनी दादी डॉ. प्रकाशमणी यांच्या 19व्या पुण्यस्मरण दिनानिमित्त रक्तदान शिबिराचे आयोजन करण्यात आले होते. या शिबिराचे उद्घाटन करून श्री. नवीन एन. बोलत होते.
रक्तदान शिबिराचे आयोजन करण्यासाठी ब्रह्माकुमारी संस्थेने घेतलेल्या पुढाकाराचे कौतुक करून श्री. नवीन एन. यांनी शिबिरासाठी सहकार्य करणाऱ्या सर्वांचे आभार मानले. यावेळी त्यांनी रुग्णालयात उपलब्ध असलेल्या अत्याधुनिक वैद्यकीय सेवांची माहिती दिली. तसेच नुकत्याच सुरू करण्यात आलेल्या ‘परिवर्तन’ पुनर्वसन व व्यसनमुक्ती केंद्राची माहिती देत, गरजू व्यक्तींना सर्वसमावेशक पुनर्वसन व आवश्यक सहकार्य सेवा उपलब्ध करून देण्याच्या उद्देशाने हे केंद्र कार्यरत असल्याचे सांगितले. नागरिकांनी या सुविधेचा लाभ घ्यावा, असे आवाहनही त्यांनी केले.
यावेळी बोलताना राजयोगिनी ब्रह्माकुमारी विद्या, प्रभारी, अंगोळ सेवा केंद्र, यांनी रुग्णालय प्रशासन तसेच श्री. नवीन एन. यांनी शिबिराच्या आयोजनासाठी दिलेल्या सहकार्याबद्दल कृतज्ञता व्यक्त केली. ब्रह्माकुमारी संस्थेची उद्दिष्टे व समाजोपयोगी उपक्रमांची माहिती देत, आरोग्य, मानसिक शांतता आणि सामाजिक जबाबदारीला प्रोत्साहन देणाऱ्या सेवा कार्यात प्रत्येकाने सहभागी व्हावे, असे आवाहन त्यांनी केले.
रक्तपेढी विभागाचे प्रमुख डॉ. अशोक अलतगी यांनी स्वयंस्फूर्त रक्तदानाचे महत्त्व स्पष्ट केले. अपघात, शस्त्रक्रिया, आपत्कालीन उपचार तसेच विविध वैद्यकीय परिस्थितींमध्ये रक्ताची आवश्यकता भासते. त्यामुळे रक्तदान हे अनेकांचे प्राण वाचविणारे महत्त्वपूर्ण सेवाकार्य आहे, असे त्यांनी सांगितले. रक्तदान करणाऱ्या सर्व दात्यांचे अभिनंदन करून अधिकाधिक नागरिकांनी स्वयंस्फूर्तीने रक्तदानासाठी पुढे यावे, असे आवाहन त्यांनी केले.
राजयोगिनी ब्रह्माकुमारी मिनाक्षी, प्रभारी, शाहापूर सेवा केंद्र, यांनीही यावेळी मनोगत व्यक्त करून रक्तदानाचे महत्त्व सांगितले. अशा समाजोपयोगी सेवा कार्यात प्रत्येकाने सक्रिय सहभाग घ्यावा, असे आवाहन त्यांनी केले.
शिबिरात एकूण 21 जणांनी रक्तदान केले.
यावेळी रक्तपेढीचे वैद्यकीय अधिकारी डॉ. जीवन जोशी, कर्मचारी महादेव वाळीशेट्टी, भाग्यनगर सेवा केंद्राच्या प्रभारी राजयोगिनी ब्रह्माकुमारी शीतल, ब्रह्माकुमारी भारती, विजय कुलकर्णी, ब्रह्माकुमार काशिनाथ, ब्रह्माकुमार श्रीकांत, तसेच ब्रह्माकुमारी संस्थेचे सदस्य आणि रुग्णालयातील कर्मचारी उपस्थित होते.




