Belagavi NewsBelgaum NewsKannada NewsKarnataka News

*ಇನ್ವೆಂಟ್ರಾ 2ಕೆ25 ಉದ್ಘಾಟನಾ ಸಮಾರಂಭ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿಯ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ ಸಾಯನ್ಸ್ ವಿಭಾಗದ ವತಿಯಿಂದ ಇನ್ವೆಂಟ್ರಾ-2ಕೆ 25, 24 ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯನ್ನು ಅಕ್ಟೊಬರ್ 17 ರಂದು ಉದ್ಘಾಟಿಸಲಾಯಿತು.

ವಿಶ್ವೆಶ್ವರಯ ತಾಂತ್ರಿಕ ವಿಶ್ವವಿಶ್ವವಿದ್ಯಾಲಯ, ಇನಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆಯ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಸಹಭಾಗಿತ್ವದೊಂದಿಗೆ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅಥಿತಿಗಳಾಗಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಮಾತನಾಡಿ, ಇಂದಿನ ಯುಗ ತಾಂತ್ರಿಕ ಯುಗ, ನಾವು ಕಲಿಯುವಾಗ ಗ್ರಂಥಾಲಯದಿಂದ ಪುಸ್ತಕ ಪಡೆಯುವುದು ಕಷ್ಟಕರವಾಗಿತ್ತು. ಇಂದಿನ ಇಂಟರನೆಟ್ ಯುಗದಲ್ಲಿ ಎಲ್ಲ ಮಾಹಿತಿಯನ್ನು ಶಿಘ್ರದಲ್ಲಿ ಪಡೆದುಕೊಳ್ಳಬಹುದಾಗಿದೆ. ಅಂತರ್ಜಾಲದಲ್ಲಿ ನ್ಯಾಶನಲ್ ಇನಫಾರ್ಮೆನ್ ಸೆಂಟರನಲ್ಲಿ ಎಲ್ಲ ಮಾಹಿತಿ ದೊರೆಯುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ, ಆಡಳಿತದಲ್ಲಿಯು ಸಹಿತ ಡಿಜಿಟಲೈಜೆಶನ್ ತುಂಬಾ ಬದಲಾವಣೆಗಳನ್ನ ತಂದಿದೆ. ಅಧಿಕಾರಿಗಳು ಸಹಿತ ಯಾವುದೇ ಕಾರ್ಯವನ್ನ ವಿಳಂಬ ಮಾಡದೇ, ಜಾಗರುಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸೊಷಿಯಲ್ ಮಿಡಿಯಾದಲ್ಲಿ ಮಾಹಿತಿ ಜಗತ್ತಿಗೆ ತಿಳಿಯಪಡಿಸಬಹುದಾಗಿದೆ. ವೇದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಅನೇಕ ಸರ್ಜರಿಗಳನ್ನ ರೊಬೊಟಗಳಿಂದ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಸಾರಿಗೆಯಲ್ಲಿಯು ತಂತ್ರಜ್ಞಾನದ ಬಳಕೆಯಿಂದಾಗಿ ವಾಹನಗಳ ಕ್ಷಮತೆ ಹೆಚ್ಚಿದೆ. ತಾಂತ್ರಿಕ ಕೌಶಲಗಳನ್ನ ಸಮಾಜಕ್ಕೆ, ದೇಶಕ್ಕೆ ಒಳ್ಳೆಯದಕ್ಕಾಗಿ ಬಳಸಿ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾರ ರಾಂಪುರೆ ಮಾತನಾಡಿ –

Home add -Advt

ಈ ಸ್ಪರ್ಧೆ ವಿದ್ಯಾರ್ಥಿಗಳಿಗೆ ಸೃಜನಶೀಲತೆ, ತಾಂತ್ರಿಕ ಜ್ಞಾನ, ಸಹಯೋಗ, ನಾವಿನ್ಯತೆಯನ್ನು ಪ್ರದರ್ಶಿಸಲು, ತಮ್ಮ ಕೌಶಲವನ್ನು ವ್ಯಕ್ತಪಡಿಸಲೂ ಹಾಗೂ ನೈಜ ಪ್ರಪಂಚದ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಹಿಡಿಯಲೂ ಒಂದು ಒಳ್ಳೆಯ ವೇದಿಕೆಯಾಗಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಬೇರೆ-ಬೇರೆ ರಾಜ್ಯಗಳಿಂದ 305 ತಂಡಗಳ ಪೈಕಿ, 125 ಆಯ್ಕೆಯಾಗಿದ್ದು, ಅವುಗಳಲ್ಲಿ 102 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಸ್ಪರ್ಧೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದರು. ಈ ಸ್ಪರ್ಧೆಯಲ್ಲಿ ಬೇರೆ-ಬೇರೆ ಕಾಲೇಜುಗಳಿಂದ ಬಂದಥಂಹ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಬೆಟ್ಟಿಯಾಗಿ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡು ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿ ಎಂದು ಕರೆನೀಡಿದರು.

ಗೌರವಾನ್ವಿತ ಅಥಿತಿಗಳಾಗಿ ಚಿಕ್ಕೊಡಿ ತಹಸಿಲ್ದಾರರಾದ ರಾಜೇಶ ಬುರ್ಲಿ ಆಗಮಿಸಿದ್ದರು. ಸಂಯೋಜಕರಾದ ಡಾ. ಬಾಹುಬಲಿ ಅಕಿವಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಜಯ ಅಂಕಲಿ ಸ್ವಾಗತಿಸಿದರು. ಡಾ. ಸುನೀಲ ಹೆಬ್ಬಾಳೆ ಅತಿಥಿ ಪರಿಚಯಿಸಿದರು. ಪ್ರೊ. ಸಂಜು ಕಪಲಿ ವಂದಿಸಿದರು. ಡಾ. ವಿರಣ್ಣಾ ಮೋದಿ, ಡಾ. ಜಗನ್ನಾಥ ಜಾಧವ, ಡಾ. ಸಚೀನ ಮೆಕ್ಕಳಕಿ, ಡಾ. ಸಂಜಯ ಹನಗಂಡಿ, ಡಾ. ಸಂಜಯ ಪೂಜಾರಿ, ಪ್ರೊ. ಸುನೀಲ ಶಿಂಧೆ, ಪ್ರೊ. ಸಂಗೀತಾ ವಾಟೆಗಾಂವಕರ, ಪ್ರೊ. ಪ್ರದೀಪ ಹೊದ್ಲೂರ ಹಾಗೂ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Related Articles

Back to top button