
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಾ. ಬೆಟಗೇರಿ ಕೃಷ್ಣಶರ್ಮ ಅವರ ರಚಿಸಿದ ಹಾಡುಗಳ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಯಾವುದೇ ಕಾಲೇಜಿನವರು ಟ್ರಸ್ಟಿನ ಸಹಯೋಗದೊಂದಿಗೆ ಏರ್ಪಡಿಸಬಹುದು. ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ ಮತ್ತು ತೃತೀಯ 2 ಸಾವಿರ ರೂಗಳ ಬಹುಮಾನ ನೀಡಲಾಗುವುದು.
ಡಾ. ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಪಿ.ಯು.ಸಿ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಗಾಯನ ಕಾರ್ಯಕ್ರಮವನ್ನು ಆಯೋಜಿಸಲು ಕೋರಲಾಗಿದೆ. ಕಾಲೇಜು ವಿಶ್ವವಿದ್ಯಾಲಯ ವಿಭಾಗ ಡಾ. ಬೆಟಗೇರಿ ಕೃಷ್ಣಶರ್ಮ ಅವರ ಹಾಡುಗಳನ್ನು ಹಾಡುವ ಕಲಾ ತಂಡಕ್ಕೆ 10ಸಾವಿರ ರೂಪಾಯಿಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುವುದು. ಇನ್ನಿತರ ಖರ್ಚುಗಳನ್ನು ಸ್ಥಳೀಯ ಸಂಸ್ಥೆಗಳೇ ನಿಭಾಯಿಸಬೇಕು. ಆಸಕ್ತ ಶಾಲೆ- ಕಾಲೇಜುಗಳ ಮುಖ್ಯಸ್ಥರು ಟ್ರಸ್ಟಿಗೆ ಮನವಿ ಪತ್ರವನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ಅಧ್ಯಕ್ಷರು, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕಟ್ರಸ್ಟ್ (ರಿ), ಸಾಂಸ್ಕೃತಿಕ ಸಮುಚ್ಚಯ ಭವನ, ಸುಭಾಷ ನಗರ ಬೆಳಗಾವಿ-590016 ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ bkrishnasharmatrust@gmail.com ಇ-ಮೇಲ್ ಐಡಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.