Kannada NewsKarnataka NewsLatest

ವಿವಿಧ ಹುದ್ದೆ, ಯೋಜನೆಗಳಿಗೆ ಅರ್ಜಿ ಆಹ್ವಾನ ಮತ್ತು ಇತರ ಸುದ್ದಿಗಳು

ಫೆ.೪ ರಿಂದ ಫೆ.೧೫ ರವರೆಗೆ ಸೇನಾ ಭರ್ತಿ ರ‍್ಯಾಲಿ

 

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ  : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಫೆ.೦೪ ರಿಂದ ಫೆ.೧೫ರವರೆಗೆ ಸೇನಾ ಭರ್ತಿ ಶಿಬಿರವನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಸೇನಾ ಭರ್ತಿ ಕಾರ್ಯಾಲಯ ನಿರ್ದೇಶಕರು ಆಯೋಜಿಸಿದ್ದಾರೆ.
ಸೇನಾಭರ್ತಿ ಶಿಬಿರವನ್ನು ಫೆ.೦೪ ರಂದು ಮುಂಜಾನೆ ೦೮ ಗಂಟೆಗೆ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎಂ.ಜಿ. ಹಿರೇಮಠ ಅವರು ಉದ್ಘಾಟನೆ ಮಾಡುವರು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು(ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯಮಶೀಲತಾ ಅಭಿವೃದ್ದಿ ತರಬೇತಿ

ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‌ಸೆಟಿ) ಬೆಳಗಾವಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆ ಅಡಿ ಆಯ್ಕೇಯಾದ ಫಲಾನುಭವಿಗಳಿಗೆ ಫೆ.೦೫ ರಿಂದ ಫೆ.೧೪ ರವರಗೆ ೧೦ ದಿನಗಳ ಅವಧಿಯ ಉದ್ಯಮ ಶೀಲತಾ ಅಭಿವೃದ್ದಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯು ಉಚಿತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಹಾಗೂ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಬ್ಯಾಂಕ್ ಸಾಲದ ಮಂಜೂರಾತಿ ಪತ್ರ, ಬ್ಯಾಂಕ್ ಪಾಸ್ ಬುಕ್ಕ್, ಆಧಾರಕಾರ್ಡ ಮತ್ತು ರೇಶನ್ ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಫೆ.೦೪ ರೊಳಗಾಗಿ, ಸಿಬಿಆರ್‌ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ.
ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‌ಸೆಟಿ) ಪ್ಲಾಟ್ ನಂ ಸಿಎ-೦೩ (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ, ಬೆಳಗಾವಿ. ದೂರವಾಣಿ ಸಂಖ್ಯೆ: ೦೮೩೧-೨೪೪೦೬೪೪, ೮೨೯೬೭೯೨೧೬೬, ೮೬೬೦೦೩೮೬೯೪, ೯೮೪೫೭೫೦೦೪೩.೮೮೬೭೩೮೮೯೦೬ ಇವರನ್ನು ಸಂಪರ್ಕಿಸಿ ಎಂದು ಕೆನರಾ ಬ್ಯಾಂಕ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಕೇಂದ್ರಗಳಲ್ಲಿ ಹುದ್ದೆಗಳ ನೇಮಕಾತಿ

ಬೆಳಗಾವಿ ಜಿಲ್ಲೆಯ ಎನ್.ಪಿ.ಸಿ.ಡಿ.ಸಿ.ಎಸ್ ಹಾಗೂ ಎನ್.ಪಿ.ಎಚ್.ಸಿ.ಇ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆ, ತಾಲೂಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರು ಎನ್.ಪಿ.ಸಿ.ಡಿ.ಸಿ.ಎಸ್, ತಜ್ಞ ವೈದ್ಯರು ಎನ್.ಪಿ.ಹೆಚ್.ಸಿ.ಇ, ವೈದ್ಯರು, ಶುಶ್ರೂಷಕ/ ಶುಶ್ರೂಷಕಿಯರು, ಆಪ್ತ ಸಮಾಲೋಚಕರು ಖಾಲಿ ಇರುವ ಹುದ್ದೆಗಳನ್ನು ಮೇರಿಟ್ ಕಮ್ ರೋಸ್ಟರ್ ಆಧರಿಸಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನವನ್ನು ಫೆ.೧೦ ರಂದು ಬೆಳಿಗ್ಗೆ ೧೦.೦೦ ಘಂಟೆಗೆ ಟಿಳಕವಾಡಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದ ಲಸಿಕಾ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದೆ.
ವಯೋಮಿತಿ ಸಾಮಾನ್ಯ ಅಭ್ಯರ್ಥಿ-೩೫, ಪ್ರ ವರ್ಗ- I, ೨ಎ, ೨ಬಿ, ೩ಎ, ೩ಬಿ – ೩೮ ಹಾಗೂ ಪ.ಜಾತಿ, ಪ.ಪಂಗಡ-೪೦ ವರ್ಷ. ತಜ್ಞ ವೈದ್ಯರ/ ವೈದ್ಯಾಧಿಕಾರಿಗಳ ಹುದ್ದೆಗೆ ವಯೋಮಿತಿಯಲ್ಲಿ ೭೦ ವರ್ಷದ ವರೆಗೆ ಸಡಲೀಕರಣ ಅನ್ವಯಿಸುತ್ತದೆ. ಸದರಿ ಸಡಲಿಕೆಯು ವಯೋಮಿತಿಯಲ್ಲಿರುವ ವೈದ್ಯ ಅಭ್ಯರ್ಥಿಗಳ ನೇಮಕಾತಿ ನಂತರದ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ.

ವೈದ್ಯರ ಹುದ್ದೆಗೆ  MBBS ವಿದ್ಯಾರ್ಹತೆ ಮಾತ್ರ ಪರಿಗಣಿಸಲಾಗುವುದು. ನೇಮಕಾತಿ ಸಂದರ್ಭದಲ್ಲಿ ಮೇಲಿನ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗುವ ಸಾದ್ಯತೆ ಇರುತ್ತದೆ. ಅರ್ಜಿ ವಿತರಿಸುವ ಸಮಯ ಬೆಳಿಗ್ಗೆ ೧೦.೦೦ ರಿಂದ ೧೨.೦೦ ಘಂಟೆಯವರೆಗೆ ಮಾತ್ರ ತೆರೆದಿರುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಮೂಲ ಹಾಗೂ ನಕಲು (ಒಂದು ಸೆಟ್ ದೃಡೀಕೃತ ಪ್ರತಿಗಳೊಂದಿಗೆ) ದಾಖಲಾತಿಗಳೊಂದಿಗೆ ಬೆಳ್ಳಿಗ್ಗೆ ೧೦.೦೦ ಘಂಟೆಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಎಂದು ಬೆಳಗಾವಿ ನೇಮಕಾತಿ ಸಮಿತಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು/ ಜಿಲ್ಲಾ ಎನ್.ಸಿ.ಡಿ ಘಟಕ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಗೆ ೪೫ ದಿನಗಳ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಕೆ-ಸೆಟ್ (ರಾಜ್ಯ ಮಟ್ಟದ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಹಾಗೂ ವಿಶ್ವ ವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ಕಾಲೇಜು ಸಹಾಯಕ ಕಿರಿಯ ಶಿಷ್ಯವೇತನ ಸಂಶೋಧನಾ ಸಹಾಯಕರ ಅರ್ಹತಾ ಪರೀಕ್ಷಗೆ ೪೫ ದಿನಗಳ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಆಸಕ್ತರು ಫೆ.೧೦ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಕಚೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೦೪ ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ: ೦೮೨೧-೨೫೧೫೯೪೪, ಅಂಗಡಿ ವಾಣ ಜ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಸಾವಗಾಂವ ರಸ್ತೆ ಕರಾಮುವಿ ಪ್ರಾದೇಶಿಕ ಕೇಂದ್ರ ದೂರವಾಣ ಸಂಖ್ಯೆ: ೦೮೩೧-೨೪೦೫೧೪೬, ಪ್ರಾದೇಶಿಕ ನಿರ್ದೇಶಕರ ಮೊಬೈಲ್ ನಂಬರ್: ೯೮೪೫೪೯೧೯೯೫ಗೆ ಸಂಪರ್ಕಿಸಿ ಎಂದು ಕರಾಮುವಿ ಪ್ರಾದೇಶಿಕ ಕೇಂದ್ರ ಪ್ರಾದೇಶಿಕ ನಿರ್ದೇಶಕರಾದ ಸತೀಶ್ ಬಿ. ಕುಲಕಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಯುವ ಸ್ವಯಂ ಸೇವಕರ ಹುದ್ದೆಗಾಗಿ ಅರ್ಜಿ ಆಹ್ವಾನ

ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಬೆಳಗಾವಿ ಜಿಲ್ಲೆಯ ೧೪ ತಾಲೂಕುಗಳಲ್ಲಿ ತಾಲೂಕಿಗೆ ಇಬ್ಬರಂತೆ ಗೌರವಧನ ಆಧಾರದ ಮೇರೆಗೆ ಕೆಲಸ ಮಾಡಲು ಹಾಗೂ ನೆಹರು ಯುವ ಕೇಂದ್ರ ಬೆಳಗಾವಿ ಕಛೇರಿಗೆ, ಇಬ್ಬರು ಕಂಪ್ಯೂಟರ್ ಕೆಲಸ ಮಾಡಲು ಬೆಳಗಾವಿ ನಗರದಿಂದ ರಾಷ್ಟ್ರೀಯ ಯುವ ಸ್ವಯಂ ಸೇವಕರ ಹುದ್ದೆಗಾಗಿ ೧ ವರ್ಷದ ಅವಧಿಗೆ ತಾತ್ಕಾಲಿಕ ಕೆಲಸ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ,
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ (ಹತ್ತನೇ ತರಗತಿ ಪಾಸ್) ಪಾಸಾಗಿರಬೇಕು, ಹಾಗೂ ೨೯ ವರ್ಷದ ಒಳಗಿನವರಾಗಿರಬೇಕು. ಹಾಗು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. ೫೦೦೦  ಗೌರವಧನ ನೀಡಲಾಗುವುದು. ಅಭ್ಯರ್ಥಿಗಳು ವಾಸವಿರುವ ವಿಳಾಸದ ತಾಲೂಕಿಗೆ ಮಾತ್ರ ಅರ್ಜಿ ಸಲ್ಲಿಸಬೇಕು.
ಶಿಸ್ತಿನಿಂದ ಕೂಡಿದ ಅರ್ಪಣಾ ಮನೋಭಾವದ ಯುವ ಸ್ವಯಂ ಸೇವಕರು ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಯುವಕ/ಯುವತಿ/ಮಹಿಳಾ ಮಂಡಳ ರಚನೆ, ಯುವ ಕಾರ್ಯಕ್ರಮಗಳು, ಹಾಗೂ ಲಿಂಗ ಮತ್ತಿತರ ಸಾಮಾಜಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವ ಕೆಲಸವಿರುತ್ತದೆ.
ಈ ಕೆಲಸ ಮಾಡಲು ಇಚ್ಚೆಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು  ಪಡೆದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ ಬೆಳಗಾವಿ. ಸಿ.ಟಿ.ಎಸ್ ನಂ ೯೬೬೩ – ಪ್ಲಾಟ್ ನಂ ೨೩೬೭ ಅಣ್ಣಪೂರ್ಣ ನಿಲಯ ಸೆಕ್ಟರ್ ನಂ ೧೧ ಪಸ್ಟ್ ಕ್ರಾಸ್ ಮಹಾಂತೇಶ ನಗರ, ಬೆಳಗಾವಿ. ಇವರಿಂದ ಪಡೆದು ಫೆಬ್ರುವರಿ ೨೦ ರೊಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಈ ಮೇಲೆ ತಿಳಿಸಿದ ವಿಳಾಸಕ್ಕೆ ಸಲ್ಲಿಸಲು ಪತ್ರಿಕಾ ಪ್ರಕಟಣೆ ಮೂಲಕ ಕೋರಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಜನರಿಗೆ ಮತ್ತು ಯುವತಿಯರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೧-೨೪೫೩೪೯೬ ಕ್ಕೆ ಅಥವಾ ಮೋ.ಸಂ:- ೭೮೯೯೦೭೬೭೪೦/೯೪೬೭೬೧೪೫೧೬/೯೬೨೦೬೪೬೪೮೮  ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರೋಹಿತ ಕಲರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯಂತಿಗಳ ಸರಳ ಆಚರಣೆ

 

ಇದೇ ಫೆಬ್ರುವರಿ ತಿಂಗಳಿನಲ್ಲಿ ನಡೆಯಲಿರುವ ಶ್ರೀ ಸಂತ ಸೇವಾಲಾಲ, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಹಾಗೂ ಕಾಯಕ ಶರಣರ ಜಯಂತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ತಿಳಿಸಿದ್ದಾರೆ.
ಮೇಲ್ಕಂಡ ನಾಲ್ಕು ಜಯಂತಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಫೆ. ೦೩) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ. ೧೫ ರಂದು ಸಂತ ಸೇವಾಲಾಲ ಜಯಂತಿ; ಫೆ. ೧೯ ರಂದು ಸವಿತಾ ಮಹರ್ಷಿ ಜಯಂತಿ; ಫೆ. ೧೯ ರಂದು ಛತ್ರ ಪತಿ ಶಿವಾಜಿ ಜಯಂತಿ ಹಾಗೂ ಫೆ.೨೦ ರಂದು ಸಂತ ಕವಿ ಸರ್ವಜ್ಞ ಜಯಂತಿಯನ್ನು ಆಚರಿಸಲಾಗುವುದು.
ಸಂತ ಸೇವಾಲಾಲ ಜಯಂತಿಯನ್ನು ಬೆಳಿಗ್ಗೆ ೧೧ ಗಂಟೆಗೆ ಕಲಾಮಂದಿರ ಆವರಣದಲ್ಲಿರುವ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಆಚರಿಸಲಾಗುವುದು. ಅದೇ ರೀತಿ ಸವಿತಾ ಮಹರ್ಷಿ ಜಯಂತಿಯನ್ನು ಮತ್ತು ಸಂತ ಕವಿ ಸರ್ವಜ್ಞ ಜಯಂತಿಯನ್ನು ಬೆಳಿಗ್ಗೆ ೧೧ ಗಂಟೆಗೆ ಕಲಾಮಂದಿರ ಆವರಣದಲ್ಲಿರುವ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ಹಾಗೂ ಛತ್ರಪತಿ ಶಿವಾಜಿ ಜಯಂತಿಯನ್ನು ಬೆಳಿಗ್ಗೆ ೯ ಗಂಟೆಗೆ ಶಿವಾಜಿ ಮಹಾರಾಜ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೂಚನೆ ನೀಡಿದರು.
ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-೧೯ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಮಾಸ್ಕ್, ಸ್ಯಾನಿಟೈಸರ್ ಬಳಕೆಯ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಾವಚಿತ್ರ ಪೂಜೆ ಸಲ್ಲಿಸುವ ಮೂಲಕ ಸರಳ ರೀತಿಯಲ್ಲಿ ಜಯಂತಿಗಳನ್ನು ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ವಿದ್ಯಾವತಿ ಭಜಂತ್ರಿ, ಹಾಗೂ ಸಮಾಜದ ಮುಖಂಡರಾದ ಅಶೋಕ ಪೂಜಾರಿ, ಮಂಜುನಾಥ ಪಮ್ಮಾರ, ಪುಂಡಲೀಕ ನಾರಾಯಣಪುರ,ಅಂಜನಿ ಪಾಟೀಲ, ಬಿ.ಜಿ ಕುಂಬಾರ, ಅಶೋಕ ಕುಂಬಾರ ಸಭೆಯಲ್ಲಿ ಉಪಸ್ಥಿತರಿದ್ದರು.

ದ್ವಿಚಕ್ರವಾಹನ ಯೋಜನೆಯಡಿ ಅರ್ಜಿ ಆಹ್ವಾನ

೨೦೨೦-೨೧ನೇ ಸಾಲಿಗೆ ಇಲಾಖೆಯ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ಜಿಲ್ಲೆಯ ದೈಹಿಕ ವಿಕಲಚೇತನರಿಂದ ಸೌಲಭ್ಯಕ್ಕಾಗಿ ಶೇಕಡಾ ೭೫ ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರುವ ಕನಿಷ್ಠ ೨೦ ವರ್ಷ ಗರಿಷ್ಠ ೬೦ ವರ್ಷ ವಯೋಮಿತಿಗೊಳಪಟ್ಟ ವಿಕಲಚೇತನ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಸದರಿ ಯೋಜನೆಯಡಿ ಸಾಮಾನ್ಯ, ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ವರ್ಗಗಳಡಿ ನಿಗದಿಗೊಳಿಸಿದ ಗುರಿಗಿಂತ ಕಡಿಮೆ ಅರ್ಜಿಗಳು ಬಂದಿರುವುದರಿಂದ, ಜಿಲ್ಲೆಯ ಎಲ್ಲಾ ತಾಲೂಕುಗಳ ದೈಹಿಕ ವಿಕಲಚೇತನರಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಕಾರಣ ತಮ್ಮ ತಾಲೂಕಿನ ತಾಲೂಕು ಪಂಚಾಯತಿ ಕಛೇರಿಯಲ್ಲಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ)ರಿಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಲಾದ ಫೆ.೨೬ ರ ಒಳಗಾಗಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವೈದ್ಯಕೀಯ ಪ್ರಮಾಣ ಪತ್ರ / ಯು.ಡಿ.ಐ.ಡಿ./ ಗುರುತಿನ ಚೀಟಿ (೭೫% ಅಥವಾ ಹೆಚ್ಚಿನ ಅಂ.ವಿ.ಪ್ರ.) ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ. (ಹಿಂದಿನ ೧೦ ವರ್ಷ ವಾಸವಿರುವ ಬಗ್ಗೆ) ವಾಹನ ಚಾಲನಾ ಪ್ರಮಾಣ ಪತ್ರ.
ಆದಾಯ ಮತ್ತು ಜಾತಿ ಪ್ರಮಾಣ ಪತ್ರ. ವಯಸ್ಸಿನ ದಾಖಲಾತಿ. ಸ್ವಂತ ಉದ್ಯೋಗ/ ಖಾಸಗಿ ನೌಕರಿ / ಶಿಕ್ಷಣದ ಬಗ್ಗೆ ದೃಢೀಕರಣ ಪ್ರತಿಗಳನ್ನು ಲಗತ್ತಿಸುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.) ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: ೦೮೩೧-೨೪೭೬೦೯೬ ಗೆ ಸಂಪರ್ಕಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಲಿಗೆ ಯಂತ್ರ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

೨೦೨೦-೨೧ ನೇ ಸಾಲಿಗೆ ಇಲಾಖೆಯ ಹೊಲಿಗೆ ಯಂತ್ರ ಯೋಜನೆಯಡಿ ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಶ್ರವಣ ದೋಷವುಳ್ಳ ವಿಕಲಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಯೋಜನೆಯಡಿ ಸಾಮಾನ್ಯ, ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ವರ್ಗಗಳಡಿ ನಿಗದಿಗೊಳಿಸಿದ ಗುರಿಗಿಂತ ಕಡಿಮೆ ಅರ್ಜಿಗಳು ಬಂದಿರುವುದರಿಂದ, ಜಿಲ್ಲೆಯ ಎಲ್ಲಾ ತಾಲೂಕುಗಳ ಶ್ರವಣದೋಷವುಳ್ಳ ವಿಕಲಚೇತನರಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಕಾರಣ ತಮ್ಮ ತಾಲೂಕಿನ ತಾಲೂಕು ಪಂಚಾಯತಿ ಕಛೇರಿಯಲ್ಲಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ)ರಿಗೆ ಈ ಕೆಳಕಾಣ ಸಿದ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಲಾದ ಫೆ.೨೬ ರ ಒಳಗಾಗಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ವೈದ್ಯಕೀಯ ಪ್ರಮಾಣ ಪತ್ರ / ಯು.ಡಿ.ಐ.ಡಿ./ ಗುರುತಿನ ಚೀಟಿ (ಕನಿಷ್ಠ ಶೇ.೪೦ ರಷ್ಟು ಅಂಗವಿಕಲತೆ) ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ. (ಹಿಂದಿನ ೧೦ ವರ್ಷ ವಾಸವಿರುವ ಬಗ್ಗೆ) ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಬಗ್ಗೆ ಪ್ರಮಾಣ ಪತ್ರ (ಅಂಕ ಪಟ್ಟಿ) ಆದಾಯ ಮತ್ತು ಜಾತಿ ಪ್ರಮಾಣ ಪತ್ರ. ವೃತ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರ. ಯಾವುದೇ ಮೂಲದಿಂದ ಈ ಸೌಲಭ್ಯ ಪಡೆದಿರುವುದಿಲ್ಲವೆಂಬ ಬಗ್ಗೆ ನೋಟರಿಯಿಂದ ದೃಢೀಕರಿಸಿದ ಪ್ರಮಾಣ ಪತ್ರ. ಲಗತ್ತಿಸುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: ೦೮೩೧-೨೪೭೬೦೯೬ ಗೆ ಸಂಪರ್ಕಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಧ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನ

೨೦೨೦-೨೧ ನೇ ಸಾಲಿಗೆ ಇಲಾಖೆಯ ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆಯಡಿ ಎಸ್.ಎಸ್.ಎಲ್.ಸಿ. ಮತ್ತು ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಂದ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಯೋಜನೆಯಡಿ ಸಾಮಾನ್ಯ, ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ವರ್ಗಗಳಡಿ ನಿಗದಿಗೊಳಿಸಿದ ಗುರಿಗಿಂತ ಕಡಿಮೆ ಅರ್ಜಿಗಳು ಬಂದಿರುವುದರಿಂದ, ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಧ ವಿದ್ಯಾರ್ಥಿಗಳಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿರುತ್ತದೆ.
ಕಾರಣ ಬೆಳಗಾವಿ ಜಿಲ್ಲೆಯ ಎಸ್.ಎಸ್.ಎಲ್.ಸಿ. ಮತ್ತು ನಂತರದ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳು ತಮ್ಮ ತಾಲೂಕಿನ ತಾಲೂಕು ಪಂಚಾಯತಿ ಕಛೇರಿಯಲ್ಲಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ)ರಿಗೆ ಈ ಕೆಳಕಾಣಿಸಿದ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಲಾದ ಫೆ.೨೬ ರ ಒಳಗಾಗಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.
ವೈದ್ಯಕೀಯ ಪ್ರಮಾಣ ಪತ್ರ / ಯು.ಡಿ.ಐ.ಡಿ./ ಗುರುತಿನ ಚೀಟಿ (ಕನಿಷ್ಠ ಶೇ.೪೦ ರಷ್ಟು ಅಂಗವಿಕಲತೆ), ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ. (ಹಿಂದಿನ ೧೦ ವರ್ಷ ವಾಸವಿರುವ ಬಗ್ಗೆ), ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲೆ / ಕಾಲೇಜಿನ/ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಲಗತ್ತಿಸುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ: ೦೮೩೧-೨೪೭೬೦೯೬ ಗೆ ಸಂಪರ್ಕಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button