Latest

ತರಬೇತಿ ವೇಳೆ ಹೃದಯಾಘಾತ; ಐಆರ್ ಬಿ ಪೊಲೀಸ್ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯದ ತರಬೇತಿ ನಿರತ ಐಆರ್ ಬಿ ಪೊಲೀಸ್ ಜಾರ್ಖಂಡ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ರಾಜಕುಮಾರ ಗೋಟ್ಯಾಳ್ (42) ಮೃತ ಐಆರ್ ಬಿ ಪೊಲೀಸ್. ಕಳೆದ ನಲಕು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡ್ ಗೆ ಹೋಗಿದ್ದರು. ತರಬೇತಿ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರಾಜಕುಮಾರ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ರಾಜಕುಮಾರ ಅವರ ಪಾರ್ಥಿವ ಶರೀರ ಸ್ವಗ್ರಾಮ ಬರಡೋಲಕ್ಕೆ ಬರಲಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ದಿಬ್ಬಣದ ಬಸ್ ಪಲ್ಟಿ; ಮಗು ಸೇರಿ 8 ಜನರ ದುರ್ಮರಣ

Home add -Advt

Related Articles

Back to top button