Vikalachetanara Day
Cancer Hospital 2
Bottom Add. 3

*ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದ 5000 ರಾಕೆಟ್ ದಾಳಿ; 40ಕ್ಕೂ ಹೆಚ್ಚು ಜನರು ಸಾವು*

ಪ್ರಗತಿವಾಹಿನಿ ಸುದ್ದಿ; ಟೆಲ್ ಅವೀವ್: ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಹಮಾಸ್ ಉಗ್ರರು ಯುದ್ಧ ಸಾರಿದ್ದು, 5000 ರಾಕೆಟ್ ದಾಳಿ ನಡೆಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಇಸ್ರೇಲ್ ನ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ.

ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ನಲ್ಲಿ ಈವರೆಗೆ 40 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 700ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಸ್ರೇಲ್ ನ ಬೃಹತ್ ಕಟ್ಟಡಗಳ ಮೇಲೆ ರಾಕೆಟ್ ದಾಳಿ ನಡೆಸಲಾಗಿದ್ದು, ಕಟ್ಟಡಗಳು ದರಾಶಾಹಿಯಾಗಿವೆ. ಇಸ್ರೇಲ್ ನ ನಗರಗಳಿಗೆ ನುಗ್ಗಿ ಹಮಾಸ್ ಉಗ್ರರು ಅಟ್ಟಹಾಸ ಮೆರೆದಿದ್ದು, ಸೈನಿಕರು, ಮಹಿಳೆಯರ ಮೇಲೆ ಮನ ಬಂದಂತೆ ದಾಳಿ ನಡೆಸಿದ್ದಾರೆ. ಯುದ್ಧ ಟ್ಯಾಂಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆಯೂ ದಾಳಿ ನಡೆದಿದೆ.

ಇಸ್ರೇಲ್ ಇತಿಹಾಸದಲ್ಲಿಯೇ ಉಗ್ರರ ಅತಿದೊಡ್ಡ ದಾಳಿ ಇದಾಗಿದೆ. ಆಪರೇಷನ್ ಅಲ್-ಅಕ್ಸಾ-ಫ್ಲಡ್ ಗೆ ಇಸ್ರೇಲ್ ಸಂಪೂರ್ಣವಾಗಿ ತತ್ತರಿಸಿದೆ.


Bottom Add3
Bottom Ad 2

You cannot copy content of this page