ಇಸ್ರೇಲಿ ಪಡೆಗಳು ಅಲರ್ಟ್; ಬಂದೂಕುಧಾರಿಗಳೊಂದಿಗೆ ಘರ್ಷಣೆಗಿಳಿದ ಸೇನೆ.
ಪ್ರಗತಿವಾಹಿನಿ ಸುದ್ದಿ; ಜೆರುಸಲೇಂ: ಇದೊಂದು ಆತಂಕಕಾರಿ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ತಲೆ ನೋವಾಗಿ ಪರಿಣಮಿಸಿದೆ. ಒಂದೆಡೆ ರಷ್ಯಾ ಉಕ್ರೇನ್ ಮೇಲೆ ಮೇಲಿಂದ ಮೇಲೆ ಆಕ್ರಮಣ ಮುಂದುವರೆಸುತ್ತಿರುವ ಮಧ್ಯದಲ್ಲಿ, ಹಮಾಸ್ ಉಗ್ರರು ಇಸ್ರೇಲ್ ಮೇಲೆ ತೀವ್ರರತವಾದ ರೀತಿಯಲ್ಲಿ ದಾಳಿ ಮಾಡಿದ್ದಾರೆ. ರಾಕೆಟ್ ದಾಳಿಯಿಂದಾಗಿ ನೂರಾರು ಜನರು ಹತರಾಗಿದ್ದಾರೆ. ಮಕ್ಕಳು, ಮಹಿಳೆಯರೆನ್ನದೇ ಸಾವಿರಾರು ಜನರನ್ನು ಹೊತ್ತೊಯ್ದಿದ್ದಾರೆ. ಕನಿಷ್ಠ 300 ಜನರು ಸಾವನ್ನಪ್ಪಿದ್ದಾರೆ ಮತ್ತು 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ, ಇದು ದಶಕಗಳಲ್ಲಿ ಇಸ್ರೇಲ್‌ನಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.
ಇಸ್ರೇಲಿನ ಪ್ರತಿಕ್ರಿಯೆಯಲ್ಲಿ ಗಾಜಾ ಪಟ್ಟಿಯಲ್ಲಿ ಕನಿಷ್ಠ 230 ಜನರು ಸಾವನ್ನಪ್ಪಿದರೆ ಮತ್ತು 1,700 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಜಾ ಪಟ್ಟಿಯಿಂದ ಹತ್ತಿರದ ಇಸ್ರೇಲ್ ಪಟ್ಟಣಗಳಿಗೆ ನುಗ್ಗಿದ್ದಾರೆ, ಯಹೂದಿಗಳಿಗೆ ಪ್ರಮುಖ ರಜಾ ದಿನವಾದ ಶನಿವಾರದಂದು ಭೀಕರ ದಾಳಿಯೆಸಗಿ, ಮುಗ್ಧ ಜನರನ್ನು ಕೊಂದಿರುವುದು ಅಮಾನವೀಯ ನಡೆಯಾಗಿದೆ.
ದಿಗ್ಭ್ರಮೆಗೊಂಡ ಇಸ್ರೇಲ್ ಸೇನೆಯು ಗಾಜಾದಲ್ಲಿ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ, ಪ್ರಧಾನ ಮಂತ್ರಿ “ದೇಶವು ಈಗ ಹಮಾಸ್‌ನೊಂದಿಗೆ ಯುದ್ಧದಲ್ಲಿದೆ ಮತ್ತು ಹಮಾಸ್ ಉಗ್ರರು ಬೆಲೆ ತೆರಲೇಬೇಕು” ಎಂದು ಹೇಳಿದರು. ಅಲ್ಲದೇ ವೈಮಾನಿಕ ದಾಳಿ ತೀವ್ರಗೊಳಿಸುವ ಮುನ್ನ ತನ್ನ ನಾಗರಿಕರು ಸುರಕ್ಷಿತ ಸ್ಥಳದಲ್ಲಿರಲು ಸೂಚಿಸಿದೆ. ಅಂತೂ ಹಮಾಸ್ ಉಗ್ರರ ನೆಲೆಗಳನ್ನು ಮಣ್ಣು ಕಲ್ಲೊಳಗೆ ಮುಚ್ಚಿ ಹಾಕುವ ಶಪಥದೊಂದಿಗೆ ಇಸ್ರೇಲ್ ಕಣಕ್ಕಿಳಿದಿದೆ.
ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಜಾಗತಿಕ ಪ್ರತಿಕ್ರಿಯೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ದಾಳಿಯನ್ನು “ದೃಢವಾಗಿ ಖಂಡಿಸುತ್ತೇನೆ” ಎಂದು ಹೇಳಿದರೆ, ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್ ಇಸ್ರೇಲ್ “ನಮ್ಮ ಸಂಪೂರ್ಣ ಒಗ್ಗಟ್ಟನ್ನು ಹೊಂದಿದೆ ಮತ್ತು ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಂತರರಾಷ್ಟ್ರೀಯ ಕಾನೂನಿನಿಂದ ಖಾತರಿಪಡಿಸುವ ಹಕ್ಕನ್ನು ಹೊಂದಿದೆ” ಎಂದು ಹೇಳಿದರು. ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ದಾಳಿಯಿಂದ “ಆಘಾತಗೊಂಡಿದ್ದೇನೆ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ