Kannada NewsLatestNational

*ಇಸ್ರೋ ಅಧ್ಯಕ್ಷರಿಗೆ ಕಾನ್ಸರ್*

ಪ್ರಗತಿವಾಹಿನಿ ಸುದ್ದಿ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಭಾರತದ ಮಹತ್ವಾಕಾಂಕ್ಷಿ ಸೂರ್ಯಯಾನ ಆದಿತ್ಯ ಎಲ್-೧ ಉಡಾವಣೆ ದಿನವೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಈ ಬಗ್ಗೆ ಎಸ್.ಸೋಮನಾಥ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಚಂದ್ರಯಾನ-೩ ಉಡಾವಣೆ ಸಂದರ್ಭದಲ್ಲಿಯೇ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ ಕ್ಯಾನ್ಸರ್ ಬಗ್ಗೆ ತಿಳಿದಿರಲಿಲ್ಲ. ಆದಿತ್ಯ ಎಲ್-೧ ಉಡಾವಣೆ ದಿನ ಕ್ಯಾನ್ಸರ್ ಇರುವುದು ದೃಢವಾಗಿದೆ. ಸ್ಕ್ಯಾನಿಂಗ್ ವೇಳೆ ಗೊತ್ತಾಯಿತು ಎಂದು ತಿಳಿಸಿದ್ದಾರೆ.

Home add -Advt

ಆ ಬಳಿಕ ತಕ್ಷಣ ಚೆನ್ನೈಗೆ ತೆರಳಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದು ಕೆಲಸಕ್ಕೆ ಮರಳಿದ್ದೇನೆ. ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನ ಮಾತ್ರ ಇದ್ದೆ. ಈಗ ಯಾವುದೇ ನೋವು ಇಲ್ಲದೇ ಮತ್ತೆ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button